ಕುಶಾಲನಗರ, ಜೂ. ೨೨: ಈ ತಿಂಗಳ ೨೮ ರಿಂದ ಮೂರು ದಿನಗಳ ಕಾಲ ಪಡಿತರ ವಿತರಣೆ ಕಾರ್ಯ ಇರುವುದಿಲ್ಲ ಎಂದು ಆಹಾರ ಇಲಾಖೆ ತಿಳಿಸಿದೆ.
ಪಡಿತರ ಚೀಟಿದಾರರು ಈ ತಿಂಗಳ ೨೭ರ ಒಳಗಾಗಿ ಪಡಿತರ ಪಡೆಯಬೇಕು ಎಂದು ಇಲಾಖೆಯ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಸಂಬAಧ ಪಡಿತರ ಚೀಟಿದಾರರು ಸಹಕರಿಸುವಂತೆ ಕೋರಿದ್ದಾರೆ.