೧೯೧೨ನೇ ಇಸವಿಯಲ್ಲಿ ವಿಶ್ವದಲ್ಲಿಯೇ ಅತಿದೊಡ್ಡ ಹಡಗು ಎಂಬ ಖ್ಯಾತಿಗಳಿಸಿ ಇಂಗ್ಲೆAಡ್‌ನಿAದ ಅಮೇರಿಕಾಗೆ ಅಟ್ಲಾಂಟಿಕ್ ಮಹಾಸಾಗರ ದಾಟಿ ತೆರಳುತ್ತಿದ್ದ ವೇಳೆ ಹಿಮಗಡ್ಡೆಯೊಂದಕ್ಕೆ ಅಪ್ಪಳಿಸಿ ಸಮುದ್ರಪಾಲಾದ ‘ಟೈಟಾನಿಕ್’ ಅವಶೇಷಗಳು ಇನ್ನೂ ಸಮುದ್ರದಡಿಯಲ್ಲಿ ತುಕ್ಕು ಹಿಡಿಯುತ್ತಾ ಇವೆ. ಈ ಐತಿಹಾಸಿಕ ಹಡಗನ್ನು ವೀಕ್ಷಿಸಲೆಂದು ಶ್ರೀಮಂತ ಪ್ರವಾಸಿಗರನ್ನು ಸಮುದ್ರದಾಳಕ್ಕೆ ತಾ.೧೮ರಂದು ಕರೆದೊಯ್ದ ಸಬ್‌ಮೆರೀನ್ ಸ್ಫೋಟಗೊಂಡ ಪರಿಣಾಮ ಮೂವರು ಪ್ರವಾಸಿಗರು ಸೇರಿದಂತೆ ಸಬ್‌ಮೆರೀನ್ ಮಾಲಿಕತ್ವ ವಹಿಸಿರುವ ಸಂಸ್ಥೆಯ ಇಬ್ಬರು ಸಿಬ್ಬಂದಿ ಕೂಡ ಕಣ್ಮರೆಯಾಗಿದ್ದಾರೆ.

೨೦ ಮಿಲಿಸೆಕೆಂಡ್‌ನಲ್ಲಿ ಸ್ಫೋಟ

ಸಮುದ್ರ ಮೇಲ್ಮೆöÊಯಿಂದ ೪ ಕಿ.ಮೀ ಆಳದಲ್ಲಿರುವ ಟೈಟಾನಿಕ್ ಅವಶೇಷವುಳ್ಳ ಪ್ರದೇಶದಲ್ಲಿ ಭೂಪದರದ ಮೇಲಿರುವ ವಾತಾವರಣ ಒತ್ತಡಕ್ಕಿಂತ ೩೭೭ ಪಟ್ಟು ಹೆಚ್ಚು ಒತ್ತಡವಿರುತ್ತದೆ. ಈ ಒತ್ತಡವನ್ನು ಸಹಿಸುವ ಶಕ್ತಿಯುಳ್ಳ ಪದಾರ್ಥ ವಾಗಿರುವ ಟೈಟೇನಿಯಮ್‌ನಿಂದ ಸಬ್‌ಮೆರೀನ್‌ಗಳನ್ನು ಉತ್ಪಾದನೆ ಮಾಡಲಾಗುತ್ತದೆ. ಪ್ರಸ್ತುತ ಅಪಘಾತಕ್ಕೊಳಗಾದ ಟೈಟನ್ ಸಬ್‌ಮೆರಿನ್‌ನಲ್ಲಿ ಪ್ರಮುಖ ತಾಂತ್ರಿಕ ಸಮಸ್ಯೆಯಿಂದಾಗಿ ಹೊರಗಿದ್ದ ನೀರಿನ ಒತ್ತಡವು ಸಬ್‌ಮೆರಿನ್ ಅನ್ನು ಕ್ಷಣಾರ್ಧದಲ್ಲಿ ೨೦ ಮಿಲಿಸೆಕೆಂಡಿನೊಳಗೆ ಅಪ್ಪಚ್ಚಿ ಮಾಡಿದ್ದಾಗಿ ಶಂಖಿಸಲಾಗಿದೆ. ಈ ಕ್ಷಣಾರ್ಧದಲ್ಲಿ ಒಳಗಿದ್ದವರಿಗೆ ಏನು ಆಯಿತೆಂಬ ವಿಷಯವನ್ನು ಅವರುಗಳ ಮೆದುಳಿಗೆ ಗ್ರಹಿಸಲು ಸಾಧ್ಯವಿಲ್ಲ.

ಒಬ್ಬ ಪ್ರವಾಸಿಗನಿಗೆ ೨.೫ ಲಕ್ಷ ಡಾಲರ್..!

ಬ್ರಿಟಿಷ್‌ನ ಶ್ರೀಮಂತ ಸಾಹಸಗಾರ ಹಾಮಿಶ್ ಹಾರ್ಡಿಂಗ್, ಪಾಕಿಸ್ತಾನ ಮೂಲದ ಬ್ರಿಟನ್ ನಾಗರಿಕ ಶಜಾದ ದಾವುದ್ ಹಾಗೂ ಅವರ ಪುತ್ರ ಸುಲೇಮಾನ್ ತಲಾ ೨.೫ ಲಕ್ಷ ಡಾಲರ್ ನೀಡಿ ಸಬ್‌ಮೆರಿನ್ ಮಾಲೀಕತ್ವ ವಹಿಸಿರುವ ಖಾಸಗಿ ಸಂಸ್ಥೆ ‘ಓಷನ್‌ಗೇಟ್’ನ ಸಿಬ್ಬಂದಿ ಪೈಲೆಟ್ ಸೇರಿದಂತೆ ಟೈಟಾನಿಕ್ ಹಡಗು ತಜ್ಞ ಒಳಗೊಂಡ ೫ ಮಂದಿ ಈ ಸಾಹಸಮಯ ಪಯಣಕ್ಕೆ ತೆರಳಿದ್ದರು. ಈ ಹಿಂದೆ ಟೈಟಾನಿಕ್ ಸಿನಿಮಾ ನಿರ್ದೇಶಕ ಸೇರಿದಂತೆ ಹಲವಾರು ಬಾರಿ ಬಹಳಷ್ಟು ಮಂದಿ ಇಲ್ಲಿಗೆ ಪಯಣ ಬಳಸಿದ್ದರಾದರೂ ಇದೇ ಮೊದಲ ಬಾರಿಗೆ ಅಪಘಾತ ಸಂಭವಿಸಿದ್ದು ದುರಂತದಲ್ಲಿ ಕೊನೆಗೊಂಡಿದೆ.

ತಾ.೧೮ ರಂದು ಕೆನಡಾ ರಾಷ್ಟçದ ಪೂರ್ವಗಡಿಯಿಂದ ೭೪೦ ಕಿ.ಮೀ ಸಮುದ್ರದಂಚಿನಿAದ ಧುಮುಕಲು ಪ್ರಾರಂಭಿಸಿದ ಸಬ್‌ಮೆರೀನ್, ಪಯಣ ಪ್ರಾರಂಭಿಸಿ ೨ ಗಂಟೆಯೊಳಗೆಯೇ ಸಂಪರ್ಕ ಕಳೆದುಕೊಂಡಿತು. ಸುಮಾರು ೮೦ ಗಂಟೆಗಳ ಕಾಲ ರೋಬಾಟ್ ವಾಹನಗಳು ಸೇರಿದಂತೆ ಅಮೇರಿಕಾದ ಹಾಗೂ ಕೆನಡಾದ ನೌಕಾಸೇನೆಯ ಹಾಗೂ ವಾಯುಸೇನೆಯ ಕಾರ್ಯಾಚಣೆ ಬಳಿಕ ರೋಬಾಟಿಕ್ ಜಲಾಂತರ ವಾಹನವು ಟೈಟಾನಿಕ್ ಹಡಗು ಮುಳುಗಿದ್ದ ಸ್ಥಳದಿಂದ ಸುಮಾರು ೪೮೮ ಮೀಟರ್ ದೂರದಲ್ಲಿ ಸ್ಪೋಟಗೊಂಡ ಸಬ್‌ಮೆರಿನ್‌ನ ಬಿಡಿಭಾಗಗಳನ್ನು ಪತ್ತೆಹಚ್ಚಿತು. ಟೈಟನ್‌ನಲ್ಲಿ ೯೬ ಗಂಟೆಗಳ ಕಾಲ ೫ ಮಂದಿಗಾಗುವಷ್ಟು ಆಮ್ಲಜನಕ ವಿತ್ತಾದರೂ, ಸಬ್‌ಮೆರಿನ್, ಪಯಣ ಪ್ರಾರಂಭಿಸಿದ ದಿನದಂದೇ ಸ್ಫೋಟಗೊಂಡ ಪರಿಣಾಮ ಸಬ್‌ಮೆರಿನ್ ಸಹಿತ ಪ್ರವಾಸಿಗರೂ ಕೂಡ ಅತಿಯಾದ ನೀರಿನ ಒತ್ತಡಕ್ಕೆ ಛಿದ್ರಗೊಂಡಿರುವುದಾಗಿ ಶಂಕಿಸಲಾಗಿದೆ.