ಮಡಿಕೇರಿ, ಜೂ. ೨೩: ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಬರುವ ವಾಸ, ವಾಣಿಜ್ಯ, ಕೈಗಾರಿಕೆ ಇತರೇ ಕಟ್ಟಡ ಮತ್ತು ಖಾಲಿ ಜಾಗಗಳ ಸ್ವತ್ತಿನ ವಿವರವನ್ನು ತಂತ್ರಾAಶದಲ್ಲಿ ಅಪ್‌ಲೋಡ್ ಮಾಡಲು ಪ್ರತಿ ಸ್ವತ್ತಿನ ಸಂಪೂರ್ಣ ವಿವರದ ಮಾಹಿತಿ ಅವಶ್ಯವಾಗಿದ್ದು, ಅವಶ್ಯ ಮಾಹಿತಿಯಲ್ಲಿ ಒಂದು ಮಾಹಿತಿ ಕೊರತೆ ಇದ್ದರೂ ಅಪ್‌ಲೋಡ್ ಆಗುವುದಿಲ್ಲ. ಆದ್ದರಿಂದ ನಗರ ವ್ಯಾಪ್ತಿಯ ಪ್ರತಿ ವಾರ್ಡ್ಗಳಲ್ಲಿ ಬರುವ ಪ್ರತಿ ಸ್ವತ್ತಿನ ವಿವರದ ಅಗತ್ಯ ಮಾಹಿತಿಯನ್ನು ಪಡೆಯಲು ನಗರಸಭೆಯಿಂದ ಹೊರಗುತ್ತಿಗೆ ಆಧಾರದಲ್ಲಿ ತಾತ್ಕಾಲಿಕ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಇವರುಗಳು ಆಸ್ತಿಗಳ ಮಾಹಿತಿಯನ್ನು ಪಡೆಯಲು ತಾ. ೨೧ರಿಂದಲೇ ಮನೆ ಮನೆಗೆ ಬಂದು ಮಾಹಿತಿ ಸಂಗ್ರಹಣೆ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಮಡಿಕೇರಿ ನಗರ ವ್ಯಾಪ್ತಿಯ ಪ್ರತಿ ಆಸ್ತಿ ಮಾಲೀಕರು ನಗರಸಭೆಯಿಂದ ನಿಯೋಜನೆಗೊಂಡು ಸರ್ವೆಗೆ ಬರುವವರಿಗೆ ಅಗತ್ಯ ಮಾಹಿತಿಗಳನ್ನು ನೀಡಿ, ತಮ್ಮ ಮಾಲೀಕತ್ವದ ಸ್ವತ್ತಿನ ವಿವರ ಆಸ್ತಿ ತಂತ್ರಾAಶದಲ್ಲಿ ಅಪ್‌ಡೇಟ್ ಮಾಡಲು ಸಹಕರಿಸುವಂತೆ ನಗರಸಭಾ ಆಯುಕ್ತರಾದ ವಿಜಯ ಮನವಿ ಮಾಡಿದ್ದಾರೆ.