ವೀರಾಜಪೇಟೆ, ಜೂ. ೨೧: ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಸ್ವಾವಲಂಬಿ ಜೀವನ ಸಾಗಿಸಬೇಕಾದರೆ ಇಂತಹ ತರಬೇತಿಗಳು ಅವಶ್ಯಕ. ಯಾವುದೇ ಯೋಜನೆಗಳಾಗಲಿ ತರಬೇತಿ ಇಲ್ಲದಿದ್ದರೆ ಸಕಾರಗೊಳಿಸಲು ಸಾಧ್ಯವಾಗುದಿಲ್ಲ ಎಂದು ಟೈಮ್ಸ್ ಬಿಸ್‌ನೆಸ್ ಪ್ರಶಸ್ತಿ ವಿಜೇತೆ ಪೂಜಾ ಸಜೇಶ್ ಹೇಳಿದರು.

ಕೊಡಗು ಹಿಂದು ಮಲಯಾಳಿ ಮಹಿಳಾ ಅಸೋಸಿಯೇಷನ್ ವತಿಯಿಂದ ವೀರಾಜಪೇಟೆಯ ಅಪ್ಪಯ್ಯಸ್ವಾಮಿ ರಸ್ತೆಯಲ್ಲಿರುವ ಬಾಲಾಂಜನೇಯ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ಮಹಿಳೆಯ ರಿಗೆ ಉಚಿತ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಹಿಂದೆ ಮಹಿಳೆಯರು ಕೇವಲ ನಾಲ್ಕು ಗೋಡೆಗಳಿಗೆ ಮಾತ್ರ ಸೀಮಿತರಾಗಿ ದ್ದರು. ಸಮಾಜ ಮುಂದುವರೆದAತೆ ಮಹಿಳೆಯರು ಎಲ್ಲಾ ಕೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಅಬಲೆಯಲ್ಲ ಸಬಲೆಯರು ಸಾಬೀ ತುಪಡಿಸಿದ್ದಾರೆ. ಮಹಿಳೆಯರು ಯಾವುದಾದರೊಂದು ಸ್ವಉದ್ಯೋಗ ದಲ್ಲಿ ತೊಡಗಿಸಿಕೊಂಡರೆ ಕುಟುಂಬ ನಿರ್ವಹಣೆಗೆ ಸಹಕಾರಿಯಾಗುತ್ತದೆ. ಕೇವಲ ಹೊಲಿಗೆ ತರಬೇತಿ ಅಲ್ಲದೆ ಜೀವನಕ್ಕೆ ಉಪಯೋಗವಾಗುವಂತಹ ಇನ್ನಿತರ ತರಬೇತಿಗಳನ್ನು ಪಡೆದುಕೊಂಡರೆ ಉತ್ತಮವಾಗುತ್ತದೆ ಎಂದು ಹೇಳಿದರು. ಕೊಡಗು ಹಿಂದು ಮಲೆಯಾಳಿ ಮಹಿಳಾ ಅಸೋಸಿಯೇಷನ್ ಅಧ್ಯಕ್ಷೆ ಶೀಬಾ ಪೃಥ್ವಿನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆಯರು ಸ್ವಾವಲಂಬಿ ಬದುಕು ನಡೆಸುವ ಸಲುವಾಗಿ ಅಸೋಸಿಯೇಷನ್ ವತಿಯಿಂದ ಮೇಕಪ್ ಕ್ಯಾಂಪ್, ಮೋಟಿವೇಷನ್ ತರಗತಿ, ಆರೋಗ್ಯ ಶಿಬಿರ ಸೇರಿದಂತೆ ಹಲವಾರು ಕಾರ್ಯಗಾರವನ್ನು ನಡೆಸಲಾಗಿದೆ. ಮಹಿಳಾ ಸಬಲೀಕರಣಕ್ಕಾಗಿ ಹತ್ತು ಹಲವು ಯೋಜನೆಗಳನ್ನು ರೂಪಿಸಿದ್ದು, ಮುಂದಿನ ದಿನಗಳಲ್ಲಿ ಕಾರ್ಯಗತಗೊಳಿಸಲಾಗುವುದು. ಎಲ್ಲಾ ತರಬೇತಿಗಳೂ ಉಚಿವಾಗಿದ್ದು ಹಿಂದು ಮಲೆಯಾಳಿ ಮಹಿಳೆಯರು ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಹೇಳಿದರು.

ಬಾಲಾಂಜನೇಯ ದೇವಾಲಯದ ಧರ್ಮದರ್ಶಿ ಬಾಬಾಶಂಕರ್, ಪುರಸಭೆ ಸದಸ್ಯ ಸಿ.ಕೆ. ಪೃಥ್ವಿನಾಥ್, ಮತ್ತಿತರರು ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯದರ್ಶಿ ಪುಷ್ಪಲತಾ ಶಿವಪ್ಪ ಕಾರ್ಯಕ್ರಮ ನಿರ್ವಹಿಸಿದರು. ಅಂಬಿಕಾ ಸ್ವಾಗತಿಸಿ, ಅನಿಮೋಳ್ ಪ್ರಾರ್ಥಿಸಿದರು. ಬಬಿತಾ ವಂದಿಸಿದರು.