ಸೋಮವಾರಪೇಟೆ, ಜೂ. ೨೧: ಸೋಮವಾರಪೇಟೆ ತಾಲೂಕಿನ ಸಮಗ್ರ ಅಭಿವೃದ್ಧಿಗೆ ತಾವು ಬದ್ಧವಾಗಿದ್ದು, ಚುನಾವಣೆ ಪೂರ್ವ ನೀಡಿದ ಭ್ರಷ್ಟಾಚಾರ ಮುಕ್ತ ಆಡಳಿತದ ಮೂಲಕ ಜನಸೇವೆಗೆ ಮುಂದಾಗು ತ್ತೇನೆ. ಸೋಮವಾರಪೇಟೆ ವ್ಯಾಪ್ತಿಯಲ್ಲಿ ರಸ್ತೆಗೆ ಪ್ರಥಮ ಆದ್ಯತೆ ನೀಡಲಾ ಗುವುದು-ಕಳಪೆ ಕಾಮಗಾರಿಗೆ ಆಸ್ಪದ ನೀಡುವುದಿಲ್ಲ. ಪರಿಸರ ಸ್ನೇಹಿ ಪ್ರವಾ ಸೋದ್ಯಮ, ಕಂದಾಯ ಇಲಾಖೆ ಯಲ್ಲಿನ ಸಮಸ್ಯೆಗಳಿಗೆ ಮುಕ್ತಿ ಸೇರಿದಂತೆ ಮುಂದಿನ ೫ ವರ್ಷಗಳ ಕಾಲ ಅಭಿವೃದ್ಧಿಯ ಚಿಂತನೆಯೊAದಿಗೆ ಹೆಜ್ಜೆ ಇಡುವುದಾಗಿ ಶಾಸಕ ಡಾ. ಮಂಥರ್ ಗೌಡ ತಿಳಿಸಿದ್ದಾರೆ.
ಸೋಮವಾರಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಇಲ್ಲಿನ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯ ಕ್ರಮದಲ್ಲಿ ಭಾಗಿಯಾಗಿ, ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದರು. ಜಿಲ್ಲೆಯಲ್ಲಿ ಹೆಚ್ಚು ಮಳೆ ಯಾಗುವ ಹಿನ್ನೆಲೆ ರಸ್ತೆಗಳ ನಿರ್ವಹಣೆ ಹಾಗೂ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಲೋಕೋಪ ಯೋಗಿ ಹಾಗೂ ಜಿಲ್ಲಾ ಪಂಚಾಯಿತಿ ರಸ್ತೆಗಳ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು. ಕ್ಷೇತ್ರದ ಸಮ ಸ್ಯೆಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಹಂತಹAತವಾಗಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು ಎಂದು ಶಾಸಕರು ತಿಳಿಸಿದರು.
ಪಟ್ಟಣ ವ್ಯಾಪ್ತಿಯಲ್ಲಿ ಸ್ಥಗಿತಗೊಂಡಿರುವ ಶತಮಾನೋತ್ಸವ ಭವನ, ಹಾಕಿ ಟರ್ಫ್ ಕಾಮಗಾರಿ ಯನ್ನು ಪರಿಶೀಲಿಸಿದ್ದು, ತುರ್ತು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದ ಅವರು, ಸೋಮವಾರಪೇಟೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ವ್ಯವಸ್ಥೆ ಶೂನ್ಯವಾಗಿದೆ. ಕಟ್ಟಡ ಸೋರುವಿಕೆ ತಡೆಯಬೇಕಿದ್ದು, ಮಾಡ್ಯುಲರ್ ಆಪರೇಷನ್ ಥಿಯೇಟರ್, ಅಲ್ಟಾçಸೌಂಡ್ ಸ್ಕಾö್ಯನಿಂಗ್ ಸೆಂಟರ್ನ ಅವಶ್ಯಕತೆ ಯಿದೆ. ಇದರೊಂದಿಗೆ ವೈದ್ಯರು ಹಾಗೂ ಸಿಬ್ಬಂದಿಗಳ ನೇಮಕಕ್ಕೆ ಕ್ರಮವಹಿಸಲಾಗುವುದು ಎಂದರು.
ಆಸ್ಪತ್ರೆಗಳನ್ನು ಮೇಲ್ದರ್ಜೆ ಗೇರಿಸಿದರಷ್ಟೇ ಸಾಲದು; ಸೌಲಭ್ಯಗಳನ್ನೂ ಒದಗಿಸಬೇಕು. ಈ ನಿಟ್ಟಿನಲ್ಲಿ ತಾನು ಚಿಂತನೆ ನಡೆಸಿದ್ದು, ಹಂತಹAತವಾಗಿ ಸಮಸ್ಯೆಗಳನ್ನು ಬಗೆಹರಿಸಲಾಗುವುದು. ಶನಿವಾರಸಂತೆ ಆಸ್ಪತ್ರೆಯಲ್ಲಿ ಸಣ್ಣಪುಟ್ಟ ಶಸ್ತçಚಿಕಿತ್ಸೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ತಾಲೂಕಿನಲ್ಲಿರುವ ಪ್ರವಾಸಿ ತಾಣಗಳನ್ನು ಅಭಿವೃದ್ಧಿಗೊಳಿಸಿ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ವಿಫಲ ಅವಕಾಶವಿದ್ದು, ಇರುವ ವ್ಯವಸ್ಥೆಗಳನ್ನು ಸರಿಯಾಗಿ ಬಳಸಿಕೊಂಡಿಲ್ಲ ಎಂದ ಮಂಥರ್ಗೌಡ, ಎಲ್ಲಾ ಪ್ರವಾಸಿ ತಾಣಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಲಾಗುವುದು. ಪರಿಸರ ಸ್ನೇಹಿ ಪ್ರವಾಸೋದ್ಯಮ ದೊಂದಿಗೆ ಪ್ರವಾಸಿಗರ ಭದ್ರತೆಗೆ ಆದ್ಯತೆ ನೀಡಲಾಗುವುದು. ಇಕೋ ಟೂರಿಸಂ, ಫಾರ್ಮ್ ಹೋಂ ಸ್ಟೇ ಯೋಜನೆ ಗಳನ್ನು ವೈಜ್ಞಾನಿಕವಾಗಿ ಅನುಷ್ಠಾನ ಗೊಳಿಸಲು ಪ್ರತ್ನಿಸುವುದಾಗಿ ತಿಳಿಸಿದರು. ಸೋಮವಾರಪೇಟೆ ಪಟ್ಟಣ ಪಂಚಾಯಿತಿ, ಶನಿವಾರಸಂತೆ ಹಾಗೂ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಿಗಡಾಯಿಸಿರುವ ಕಸ ವಿಲೇವಾರಿ ಸಮಸ್ಯೆಗಳಿಗೆ ಶೀಘ್ರ ದಲ್ಲಿಯೇ ಪರಿಹಾರ ಒದಗಿಸುವುದಾಗಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಶನಿವಾರಸಂತೆಯಲ್ಲಿ ಬಸ್ ನಿಲ್ದಾಣಕ್ಕೆ ಜಾಗ ಗುರುತು ಮಾಡಲಾಗಿದೆ. ಲೋಕೋಪಯೋಗಿ ಇಲಾಖೆಯೊಂದಿಗೆ ವ್ಯವಹರಿಸ ಲಾಗಿದ್ದು, ಜಾಗ ಹಸ್ತಾಂತರಗೊAಡ ತಕ್ಷಣ ಕೆಲಸ ಆರಂಭಗೊಳ್ಳಲಿದೆ ಎಂದ ಮಂಥರ್ ಗೌಡ, ಹೇಮಾವತಿ ಹಿನ್ನೀರು ಇದ್ದರೂ ಕೂಡ ಕೊಡ್ಲಿಪೇಟೆ ಹಾಗೂ ಶನಿವಾರಸಂತೆ ಭಾಗಕ್ಕೆ ಸಮರ್ಪಕ ಕುಡಿಯುವ ನೀರಿನ ಸೌಕರ್ಯ ಇಲ್ಲ. ಬಹುಗ್ರಾಮ ಯೋಜನೆಯಡಿ ೨೫೦ ಕೋಟಿಗೂ ಅಧಿಕ ವೆಚ್ಚದ ಯೋಜನೆ ಅನುಷ್ಠಾನಗೊಳಿಸಲು ಚಿಂತನೆ ಹರಿಸಲಾಗಿದೆ. ಈ ಯೋಜನೆ ಅನುಷ್ಠಾನಗೊಂಡರೆ ನೀರಿನ ಸಮಸ್ಯೆ ಬಗೆಹರಿಯಲಿದೆ. ಜಲಜೀವನ್ ಮಿಷನ್ ಯೋಜನೆ ನಿರೀಕ್ಷಿತ ಪ್ರಗತಿ ಕಂಡಿಲ್ಲ. ಜಲಮೂಲವನ್ನು ಅಭಿವೃದ್ಧಿಪಡಿಸದೇ ಕೇವಲ ಟ್ಯಾಂಕ್ ಕಟ್ಟಿ, ಪೈಪ್ಲೈನ್ ಅಳವಡಿಸಿದರೆ ಯಾವುದೇ ಪ್ರಯೋಜನವಿಲ್ಲ ಎಂದರು. ಮಾಗಡಿ-ಜಾಲ್ಸೂರು ರಸ್ತೆ ಕೊಣನೂರಿನ ಬೆಟ್ಟಗಳಲೆಯವರೆಗೆ ಮಾತ್ರ ಅನುಷ್ಠಾನಗೊಂಡಿದ್ದು, ಅಲ್ಲಿಂದ ಸೋಮವಾರಪೇಟೆ ಸಂಪರ್ಕಕ್ಕೆ ಅರಣ್ಯ ಅಡ್ಡಗಾಲಾಗಿರುವ ಬಗ್ಗೆ ಗಮನ ಸೆಳೆದ ಸಂದರ್ಭ, ಈ ಬಗ್ಗೆ ಸಂಬAಧಿಸಿದ ಇಲಾಖಾ ಸಚಿವ ರೊಂದಿಗೆ ಚರ್ಚೆ ನಡೆಸಲಾಗುವುದು ಎಂದರು. ಇದರೊಂದಿಗೆ ಪುಷ್ಪಗಿರಿ-ಸುಬ್ರಹ್ಮಣ್ಯ ರಸ್ತೆಯ ಅವಶ್ಯಕತೆಯ ಬಗ್ಗೆ ಗಮನ ಸೆಳೆದ ಸಂದರ್ಭ, ಈ ಬಗ್ಗೆ ಕ್ರಮವಹಿಸುವುದಾಗಿ ಭರವಸೆ ನೀಡಿದರು.
ಪಟ್ಟಣ ಪಂಚಾಯಿತಿ ವ್ಯಾಪ್ತಿ ಯಲ್ಲಿ ಸ್ಥಗಿತಗೊಂಡಿರುವ ಇಂದಿರಾ ಕ್ಯಾಂಟೀನ್ ಕೆಲಸ ಆರಂಭಿಸುವ ಸಂಬAಧ ಗಮನ ಹರಿಸಲಾಗುವುದು ಎಂದ ಶಾಸಕರು, ಜಿಲ್ಲೆಯ ರೈತರ ೧೦ ಹೆಚ್ಪಿ ವರೆಗಿನ ಕೃಷಿ ಪಂಪ್ ಸೆಟ್ಗಳಿಗೆ ಉಚಿತ ವಿದ್ಯುತ್ ನೀಡುವ ಸಂಬAಧ ಮುಖ್ಯಮಂತ್ರಿಗಳೊAದಿಗೆ ಚರ್ಚಿಸಲಾಗುವುದು. ರೈತರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಆಕಾಂಕ್ಷೆಯಿದೆ ಎಂದರು. ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸ ಬೇಕು. ತ್ಯಾಜ್ಯಗಳನ್ನು ವಿಂಗಡಿಸಿ ವಾಹನಗಳಿಗೆ ನೀಡಬೇಕು, ಎಲ್ಲೆಂದರಲ್ಲಿ ಕಸವನ್ನು ಎಸೆಯ ಬಾರದು ಎಂದು ಮನವಿ ಮಾಡಿದ ಶಾಸಕರು, ಸೋಮವಾರಪೇಟೆ ತ್ಯಾಜ್ಯ ವಿಲೇವಾರಿ ಸಮಸ್ಯೆ ಬಗೆಹರಿಸಲು ಈಗಾಗಲೇ ೮೩ ಲಕ್ಷ ವೆಚ್ಚದ ಯೋಜನೆಯೊಂದು ಸಿದ್ಧವಾಗಿದ್ದು, ಈ ಬಗ್ಗೆ ಸಮಗ್ರ ಮಾಹಿತಿ ಪಡೆದು ಕಾರ್ಯರೂಪಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.
ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕುಂದು ಕೊರತೆ ಸಭೆಗಳನ್ನು ಆಯೋಜಿಸುವ ಚಿಂತನೆಯಿದೆ. ಪ್ರತಿ ಗ್ರಾಮ ಸಭೆಗಳಿಗೂ ತಮಗೆ ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ. ಸ್ಥಳೀಯವಾಗಿ ಸಮಸ್ಯೆಗಳನ್ನು ಬಗೆಹರಿಸಲು ಇಂತಹ ಕಾರ್ಯಕ್ರಮ ಸಹಕಾರಿಯಾಗಿದ್ದು, ಅವಕಾಶವನ್ನು ಸದ್ಬಳಕೆ ಮಾಡುವ ಮೂಲಕ ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಮಂಥರ್ ಗೌಡ ತಿಳಿಸಿದರು. ತಾಲೂಕು ವ್ಯಾಪ್ತಿ ಯಲ್ಲಿರುವ ರಸ್ತೆ, ಕುಡಿಯುವ ನೀರಿನ ಸಮಸ್ಯೆ, ಕಂದಾಯ ಇಲಾಖೆಯಲ್ಲಿನ ಸಮಸ್ಯೆ, ಸಿ. ಮತ್ತು ಡಿ. ಜಾಗದಿಂದ ಉದ್ಭವಿಸಿರುವ ಅನಾನುಕೂಲ, ದಾಖಲಾತಿಗಳಲ್ಲಿನ ಲೋಪದೋಷ, ಆರ್ಟಿಸಿ ಸಮಸ್ಯೆ, ತಾಲೂಕು ಕಚೇರಿಯಲ್ಲಿನ ಅವ್ಯವಸ್ಥೆಗಳು, ಸರ್ಕಾರಿ ಬಸ್ಗಳ ಅವಶ್ಯಕತೆ, ಸೋಮವಾರಪೇಟೆಗೆ ಎಲೆಕ್ಟಿçಕ್ ಬಸ್ ಸೇರಿದಂತೆ ಇನ್ನಿತರ ಸಮಸ್ಯೆಗಳ ಬಗ್ಗೆ ಮಾಧ್ಯಮದವರು ಶಾಸಕರ ಗಮನ ಸೆಳೆದರು.
ತಾಲೂಕಿನ ಸಮಗ್ರ ಅಭಿವೃದ್ಧಿಗೆ ತಾನು ಬದ್ಧನಾಗಿದ್ದು, ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದು ಸಾಧ್ಯವಾಗುವಷ್ಟರ ಮಟ್ಟಿಗೆ ನ್ಯಾಯ ದೊರಕಿಸಿಕೊಡುತ್ತೇನೆ. ಚುನಾವಣೆ ಸಂದರ್ಭ ಮಾತ್ರ ರಾಜಕೀಯ, ನಂತರದ ದಿನಗಳಲ್ಲಿ ಅಭಿವೃದ್ಧಿಯ ಚಿಂತನೆಯೊAದಿಗೆ ಕೆಲಸ ಮಾಡಲಾಗುವುದು. ಸಾರ್ವಜನಿಕರು ತಮ್ಮ ಸಮಸ್ಯೆಗಳ ಬಗ್ಗೆ ತನ್ನಲ್ಲಿ ನೇರವಾಗಿ ತಿಳಿಸಬಹುದು ಅಥವಾ ಕಚೇರಿಗೆ ಮಾಹಿತಿ ನೀಡಬಹುದು ಎಂದು ಮಂಥರ್ಗೌಡ ಹೇಳಿದರು. ಸಂವಾದದಲ್ಲಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ವಿಜಯ್ ಹಾನಗಲ್, ನಗರ ಸಂಘದ ಅಧ್ಯಕ್ಷ ಎಸ್. ಮಹೇಶ್, ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ. ಮುರುಳೀಧರ್, ಶನಿವಾರಸಂತೆ ಪ್ರೆಸ್ಕ್ಲಬ್ ಅಧ್ಯಕ್ಷ ಹೆಚ್.ಆರ್. ಹರೀಶ್ ಕುಮಾರ್ ಸೇರಿದಂತೆ ಪತ್ರಕರ್ತರ ಸಂಘದ ಬಿ.ಎ. ಭಾಸ್ಕರ್, ಕವನ್ ಕಾರ್ಯಪ್ಪ, ಡಿ.ಪಿ. ಲೋಕೇಶ್, ಹಿರಿಕರ ರವಿ, ಎಸ್.ಡಿ. ವಿಜೇತ್, ದುಷ್ಯಂತ್ಕುಮಾರ್, ಎಸ್.ಆರ್. ವಸಂತ್ ಅವರುಗಳು ಭಾಗವಹಿಸಿ, ತಾಲೂಕು ವ್ಯಾಪ್ತಿಯ ಸಮಸ್ಯೆಗಳ ಬಗ್ಗೆ ಶಾಸಕರ ಗಮನ ಸೆಳೆದರು. ಇದೇ ಸಂದರ್ಭ ಶಾಸಕ ಮಂಥರ್ಗೌಡ ಅವರನ್ನು ಸಂಘದ ಪರವಾಗಿ ಸನ್ಮಾನಿಸಲಾಯಿತು.