ಸುಂಟಿಕೊಪ್ಪ, ಜೂ. ೨೧: ಸುಂಟಿಕೊಪ್ಪ, ವೃಕ್ಷೆÆÃದ್ಭವ ಶಕ್ತಿ ಗಣಪತಿ ದೇವಸ್ಥಾನದ ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷರಾಗಿ ಉದ್ಯಮಿ ರಮೇಶ್ ಬಿ., ಪ್ರಧಾನ ಕಾರ್ಯದರ್ಶಿಯಾಗಿ ಗ್ರಾ.ಪಂ. ಸದಸ್ಯ ಎಂ. ಮಂಜುನಾಥ್ ಅವರುಗಳನ್ನು ನೇಮಕಗೊಳಿಸಲಾಯಿತು.

ಮಾದಾಪುರ ರಸ್ತೆಯ ವೃಕ್ಷೆÆÃದ್ಭವ ಶಕ್ತಿ ಗಣಪತಿ ದೇವಸ್ಥಾನದ ವಾರ್ಷಿಕೋತ್ಸವ ಸಮಿತಿಯ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ದೇವಸ್ಥಾನ ಆವರಣದಲ್ಲಿ ನಡೆಸಲಾಗಿದ್ದು ೨೦೨೩-೨೪ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಲಾಯಿತು.

ಉಪಾಧ್ಯಕ್ಷರಾಗಿ ಬಿ. ದಿವಾಕರ್ ಪೂಜಾರಿ, ಪುಳಂಜನ ಕುಶಾಲಪ್ಪ, ಬಿ.ಎಸ್. ರಮೇಶ್, ಜಂಟಿ ಕಾರ್ಯದರ್ಶಿಯಾಗಿ ದಿವಾಕರ್ ರೈ, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಬಿ.ಎಸ್. ಸದಾಶಿವ ರೈ, ಬಿ.ಎಂ. ಸುರೇಶ್ (ಪುಟ್ಟ), ಮಹೇಶ್ ರೈ, ಸುನಿಲ್ ಕುಮಾರ್, ಸುರೇಶ್ ಚಂದು, ಮನು ಅಚ್ಚಮಯ್ಯ, ಪವಿ, ಯಶೋಧರ, ಬಿ.ಆರ್. ಅರುಣ್ ಕುಮಾರ್, ಶಿವರಾಮನ್, ನಿಖಿಲ್ ಹರೀಶ್ ಇವರುಗಳನ್ನು ಆಯ್ಕೆಗೊಳಿಸಲಾಗಿದೆ ಎಂದು ದೇವಸ್ಥಾನ ಟ್ರಸ್ಟ್ ಕಾರ್ಯದರ್ಶಿ ಎ. ಲೋಕೇಶ್ ಕುಮಾರ್ ತಿಳಿಸಿದ್ದಾರೆ.