ಯೋಗವು ಜಾಗತಿಕ ಚಳುವಳಿಯಾಗಿ ಮಾರ್ಪಟ್ಟಿದೆ - ಮೋದಿ

ನ್ಯೂಯಾರ್ಕ್ ಜೂ. ೨೧: ಪ್ರಧಾನಿ ಮೋದಿ ಅಮೆರಿಕದ ನ್ಯೂಯಾರ್ಕ್ನಲ್ಲಿ ಯೋಗ ದಿನವನ್ನು ಆಚರಿಸಿದ್ದಾರೆ. ೨೦೧೪ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಯೋಗ ದಿನದ ಪ್ರಸ್ತಾಪ ಬಂದಾಗ ದಾಖಲೆ ಸಂಖ್ಯೆಯ ದೇಶಗಳು ಅದನ್ನು ಬೆಂಬಲಿಸಿವೆ ಎಂದು ಪ್ರಧಾನಿ ವೀಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ. ಅಂದಿನಿAದ, ಅಂರ‍್ರಾಷ್ಟಿçÃಯ ಯೋಗ ದಿನದ ಮೂಲಕ ಯೋಗವು ಜಾಗತಿಕ ಚಳುವಳಿಯಾಗಿ, ಜಾಗತಿಕ ಭಾವನೆಯಾಗಿ ಮಾರ್ಪಟ್ಟಿದೆ. ಭಾರತದ ಕರೆಗೆ ವಿಶ್ವದ ೧೮೦ಕ್ಕೂ ಹೆಚ್ಚು ದೇಶಗಳು ಒಗ್ಗೂಡಿರುವುದು ಐತಿಹಾಸಿಕ, ಅಭೂತಪೂರ್ವ ಎಂದಿದ್ದಾರೆ. ಇಂದು ಅಂತರಾಷ್ಟಿçÃಯ ಯೋಗ ದಿನದ ಅಂಗವಾಗಿ ರಾಷ್ಟçಪತಿ ದ್ರೌಪದಿ ಮುರ್ಮು, ಉಪರಾಷ್ಟçಪತಿ ಹಾಗೂ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧಂಖರ್, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಮಾಜಿ ರಾಷ್ಟçಪತಿ ರಾಮನಾಥ್ ಕೋವಿಂದ್ ಸೇರಿದಂತೆ ದೇಶದ ಹಲವು ಗಣ್ಯರು ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯೋಗ ಪ್ರದರ್ಶಿಸಿದರು.

ವಿದ್ಯಾರ್ಥಿಗಳಿಗೆ ಮೊಟ್ಟೆ, ಬಾಳೆಹಣ್ಣು

ಬೆಂಗಳೂರು, ಜೂ. ೨೧: ಕರ್ನಾಟಕದ ಕಾಂಗ್ರೆಸ್ ನೇತೃತ್ವದ ಸರ್ಕಾರವು ೧ ರಿಂದ ೮ನೇ ತರಗತಿಯವರೆಗೆ ಓದುತ್ತಿರುವ ಶಾಲಾ ಮಕ್ಕಳಿಗೆ ಮೊಟ್ಟೆ ಅಥವಾ ಬಾಳೆಹಣ್ಣುಗಳನ್ನು ನೀಡಲು ಬುಧವಾರ ಆದೇಶ ಹೊರಡಿಸಿದೆ. ಈ ಸಂಬAಧ ಶಾಲಾ ಶಿಕ್ಷಣ ಇಲಾಖೆ ನಿರ್ದೇಶಕ ಶುಭ ಕಲ್ಯಾಣ್ ಸುತ್ತೋಲೆ ಬಿಡುಗಡೆ ಮಾಡಿದ್ದು, ರಾಜ್ಯಾದ್ಯಂತ ಇರುವ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ ಸಿಬ್ಬಂದಿಗೆ ಬೇಯಿಸಿದ ಮೊಟ್ಟೆಯನ್ನು ವಿದ್ಯಾರ್ಥಿಗಳಿಗೆ ಪೌಷ್ಟಿಕಾಂಶದ ಪೂರಕವಾಗಿ ನೀಡುವಂತೆ ಸೂಚಿಸಿದ್ದಾರೆ. ಮೊಟ್ಟೆ ತಿನ್ನದಿರುವವರಿಗೆ ಬಾಳೆಹಣ್ಣು ಅಥವಾ ಚಿಕ್ಕಿ (ಕಡಲೆಕಾಯಿ ಮತ್ತು ಬೆಲ್ಲದಿಂದ ಮಾಡಿದ ಸಿಹಿ ಖಾದ್ಯ) ನೀಡುವಂತೆ ತಿಳಿಸಿದ್ದಾರೆ. ಅಪೌಷ್ಟಿಕತೆ ಮತ್ತು ರಕ್ತಹೀನತೆಯನ್ನು ಹೋಗಲಾಡಿಸಲು ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಪೂರಕಗಳನ್ನು ನೀಡಲಾಗುವುದು. ಜುಲೈ ೧೫ ರವಗೆ ಮೊದಲ ಹಂತದಲ್ಲಿ ವಾರಕ್ಕೊಮ್ಮೆ ಮೊಟ್ಟೆ ಅಥವಾ ಬಾಳೆಹಣ್ಣು ನೀಡಲು ಸರ್ಕಾರ ಮುಂದಾಗಿದೆ.

ಯೋಗಕ್ಕೆ ಮನ್ನಣೆ ನೀಡಿದ್ದು ಪ್ರಧಾನಿ ಮೋದಿ : ಶಶಿ ತರೂರ್

ನವದೆಹಲಿ, ಜೂ. ೨೧: ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರು ಶಿರ್ಷಾಸನ ಮಾಡುತ್ತಿರುವ ಫೋಟೋವನ್ನು ಟ್ವೀಟ್ ಮಾಡಿದ್ದ ಕಾಂಗ್ರೆಸ್, ಯೋಗವನ್ನು ಜನಪ್ರಿಯಗೊಳಿಸಿದ ಮತ್ತು ರಾಷ್ಟಿçÃಯ ನೀತಿಯ ಭಾಗವಾಗಿಸಿದ ಪಂಡಿತ್ ನೆಹರೂ ಅವರಿಗೆ ಧನ್ಯವಾದಗಳು ಎಂದು ಶೀರ್ಷಿಕೆ ಕೊಟ್ಟಿದೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಟ್ವೀಟ್ ಮಾಡಿದ್ದು ನಮ್ಮ ಕೇಂದ್ರ ಸರ್ಕಾರ, ಪ್ರಧಾನಿ ಮೋದಿ, ವಿದೇಶಾಂಗ ಸಚಿವಾಲಯ ಸೇರಿದಂತೆ ಯೋಗವನ್ನು ಪುನರುಜ್ಜೀವನಗೊಳಿಸಿ ಜನಪ್ರಿಯಗೊಳಿಸಿದವರಿಗೂ ನಾವು ಧನ್ಯವಾದ ಹೇಳಬೇಕು. ಎನ್‌ಡಿಎ ಸರ್ಕಾರ ವಿಶ್ವಸಂಸ್ಥೆಯ ಮೂಲಕ ಯೋಗ ದಿನವನ್ನು ಅಂತಾರಾಷ್ಟಿçÃಯಗೊಳಿಸಿದೆ. ನಾನು ದಶಕಗಳಿಂದ ಹೇಳುತ್ತಾ ಬಂದಿದ್ದೇನೆ, ಯೋಗವು ನಮ್ಮ ಮೃದು ಶಕ್ತಿಯ ಪ್ರಮುಖ ಭಾಗವಾಗಿದೆ. ಅದನ್ನು ಗುರುತಿಸುವುದು ಒಳ್ಳೆಯದು ಎಂದು ಅವರು ಹೇಳಿದರು.

ಭಾರತದ ಭವಿಷ್ಯ ಉಜ್ವಲವಾಗಿದೆ : ಎಲೋನ್ ಮಸ್ಕ್

ನ್ಯೂಯಾರ್ಕ್, ಜೂ. ೨೧: ಭಾರತವು ಭವಿಷ್ಯದ ಮಟ್ಟಿಗೆ ನೋಡಿದರೆ ಹೆಚ್ಚಿನ ಭರವಸೆಯನ್ನು ಹೊಂದಿದೆ. ಭಾರತದ ಭವಿಷ್ಯದ ಬಗ್ಗೆ ನೋಡಲು ಹಾಗೂ ತಿಳಿದುಕೊಳ್ಳಲು ತೀವ್ರ ಉತ್ಸುಕನಾಗಿದ್ದೇನೆ ಎಂದು ಟೆಸ್ಲಾ ಸಿಇಒ ಎಲೋನ್ ಮಸ್ಕ್ ಹೇಳಿದ್ದಾರೆ. ನ್ಯೂಯಾರ್ಕ್ನಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಸ್ಕ್,. ನಾವು ಯಾವುದೇ ದೇಶದಲ್ಲಿರಲಿ ಅಲ್ಲಿನ ಕಾನೂನು, ರೀತಿ ನೀತಿಗಳನ್ನು ಅನುಸರಿಸುವುದು ಅತ್ಯುತ್ತಮ ಕೆಲಸವಾಗಿದೆ. ವಿವಿಧ ರೀತಿಯ ಸರ್ಕಾರಗಳಿಗೆ ವಿಭಿನ್ನ ನಿಯಮಗಳು ಮತ್ತು ನಿಬಂಧನೆಗಳು ಇರುತ್ತವೆ. ಕಾನೂನಿನಡಿಯಲ್ಲಿ ಮುಕ್ತವಾಗಿ ವ್ಯವಹರಿಸಲು ನಮ್ಮ ಕೈಲಾದ ಪಯ್ರತ್ನ ಮಾಡುತ್ತೇವೆ ಎಂದರು.

ಎಫ್‌ಬಿ, ಟ್ವಿಟರ್, ಗೂಗಲ್ ಜೊತೆ ಸಭೆ - ಪರಮೇಶ್ವರ್

ಬೆಂಗಳೂರು, ಜೂ. ೨೧: ಕರ್ನಾಟಕ ಸರ್ಕಾರವು ಶೀಘ್ರದಲ್ಲೇ ಸಾಮಾಜಿಕ ಮಾಧ್ಯಮ ಸೈಟ್‌ಗಳು ಮತ್ತು ಗೂಗಲ್, ಫೇಸ್‌ಬುಕ್, ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ವೇದಿಕೆಗಳೊಂದಿಗೆ ಕೋಮು ಗಲಭೆಯನ್ನು ಪ್ರಚೋದಿಸುವ ಸೂಕ್ಷ್ಮ ವಿಚಾರಗಳ ಪೋಸ್ಟ್ಗಳನ್ನು ನಿಯಂತ್ರಿಸಲು ಚರ್ಚೆ ನಡೆಸಲಿದೆ. ಗೃಹ ಸಚಿವ ಜಿ. ಪರಮೇಶ್ವರ ಅವರು ಬುಧವಾರ ಮಾತನಾಡಿ, ನ್ಯಾಯವ್ಯಾಪ್ತಿಯ ಮಟ್ಟದಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಅಂತಹ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡಲು ಪ್ರತಿ ಪೊಲೀಸ್ ಠಾಣೆಗಳಲ್ಲಿ ಸೈಬರ್ ಭದ್ರತಾ ವಿಭಾಗವನ್ನು ಸ್ಥಾಪಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಹೇಳಿದರು.

ನಾಲ್ಕು ಲಕ್ಷ ರೂಪಾಯಿ ನೀಡುವಂತೆ ಪೊಲೀಸರಿಗೆ ಕೋರ್ಟ್ ಸೂಚನೆ!

ಬೆಂಗಳೂರು, ಜೂ. ೨೧: ಅಪ್ರಾಪ್ತ ಬಾಲಕಿ ಅತ್ಯಾಚಾರ ಪ್ರಕರಣದ ಕಳಪೆ ತನಿಖೆಯಿಂದ ತಿಂಗಳುಗಟ್ಟಲೆ ಜೈಲಿನಲ್ಲಿದ್ದ ಇಬ್ಬರಿಗೆ ತಮ್ಮ ಜೇಬಿನಿಂದ ೫ ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಮಂಗಳೂರು ಮಹಿಳಾ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಎಸಿ ಲೋಕೇಶ್ ಮತ್ತು ಅವರ ತಂಡಕ್ಕೆ ಇಲ್ಲಿನ ಪೋಕ್ಸೋ ನ್ಯಾಯಾಲಯ ಆದೇಶಿಸಿದೆ. ಚಾರ್ಜ್ಶೀಟ್‌ನಲ್ಲಿ ಹೆಸರಿಸಲಾದ ಏಕೈಕ ವ್ಯಕ್ತಿಯಾಗಿದ್ದ ಸಂತ್ರಸ್ತೆಯ ತಂದೆಯನ್ನು ಖುಲಾಸೆಗೊಳಿಸುವಾಗ, ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಕೆ.ಎಂ. ರಾಧಾಕೃಷ್ಣ ಅವರು ಪೊಲೀಸ್ ತನಿಖೆಯಲ್ಲಿ ಹಲವಾರು ಗಂಭೀರ ಲೋಪಗಳನ್ನು ಗಮನಿಸಿದ್ದಾರೆ. ಪ್ರಮುಖವಾಗಿ ಪೊಲೀಸರು ಡಿಎನ್‌ಎ ವರದಿಯನ್ನು ಸ್ವೀಕರಿಸುವ ಮೊದಲೇ ಪ್ರಕರಣದ ಇತರ ಮೂವರು ಆರೋಪಿಗಳಿಗೆ ಕ್ಲೀನ್ ಚಿಟ್ ನೀಡಿದ್ದಾರೆ. ಸಂತ್ರಸ್ತೆ ಈ ಹಿಂದೆ ಅತ್ಯಾಚಾರ ಆರೋಪ ಮಾಡಿದ್ದ ಸಂದೇಶ್‌ನನ್ನು ತನಿಖಾಧಿಕಾರಿ ಜಾಣತನದಿಂದ ನಿರ್ಲಕ್ಷಿಸಿದ್ದಾರೆ ಎಂದು ಆದೇಶದಲ್ಲಿ ವಿವರಿಸಲಾಗಿದೆ. ಡಿಎನ್‌ಎ ಪರೀಕ್ಷೆಗಾಗಿ ಅವನ ರಕ್ತದ ಮಾದರಿಗಳನ್ನು ಸಂಗ್ರಹಿಸದಿರುವುದು ಅವನನ್ನು ರಕ್ಷಿಸುವ ಉದ್ದೇಶವಾಗಿತ್ತು ಎಂದು ನ್ಯಾಯಾಲಯ ಹೇಳಿದೆ. ಸಂತ್ರಸ್ತೆ ತನ್ನ ತಂದೆಯೇ ಹೊಣೆಗಾರನೆಂದು ಆರೋಪಿಸುವುದಕ್ಕೂ ಮುನ್ನ ಆಕೆ ತನ್ನ ಹೇಳಿಕೆಯನ್ನು ಹಲವು ಬಾರಿ ಬದಲಾಯಿಸಿದ್ದಳು.

ಪ್ರೇಯಸಿ ಕೊಲೆಗೆ ಯತ್ನಿಸಿದ ಭಗ್ನ ಪ್ರೇಮಿ

ಕೋಲ್ಕತಾ, ಜೂ. ೨೧: ಭಗ್ನ ಪ್ರೇಮಿಯೋರ್ವ ತನ್ನ ಪ್ರೇಯಸಿಗೇ ಹಾಡಹಗಲೇ ಹಲವು ಬಾರಿ ಇರಿದು ಆಕೆಯನ್ನು ಅಟ್ಟಾಡಿಸಿಕೊಂಡು ಹೋಗಿ ನೀರಿನಲ್ಲಿ ಮುಳುಗಿಸಿ ಕೊಲೆಗೈಯ್ಯಲು ಯತ್ನಿಸಿದ ಧಾರುಣ ಘಟನೆ ಕೋಲ್ಕತಾದಲ್ಲಿ ನಡೆದಿದೆ. ಕೋಲ್ಕತಾದ ಸರ್ವೆ ಪಾರ್ಕ್ ಪ್ರದೇಶದಲ್ಲಿ ೨೧ ವರ್ಷದ ಯುವತಿಯನ್ನು ಆಕೆಯ ಮಾಜಿ ಪ್ರಿಯಕರ ಮನಸೋ ಇಚ್ಚೆ ಇರಿದು ರಕ್ತದ ಮಡುವಿನಲ್ಲೇ ಆಕೆ ತಪ್ಪಿಸಿಕೊಂಡು ಹೋಗುತ್ತಿದ್ದಾಗ ಆಕೆಯನ್ನು ಅಟ್ಟಾಡಿಸಿಕೊಂಡು ಹೋಗಿ ಪಕ್ಕದಲ್ಲೇ ಇದ್ದ ಅಜೋಯನಗರ ಕ್ರಾಸಿಂಗ್ ಬಳಿಯ ಸಂತೋಷ್‌ಪುರದ ಕೊಳಕ್ಕೆ ಆಕೆಯನ್ನು ಎಳೆದೊಯ್ದು ಮುಳುಗಿಸಿ ಕೊಲೆಗೈಯ್ಯಲು ಯತ್ನಿಸಿದ್ದಾನೆ. ಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಆರೋಪಿಯು ಯುವತಿಯನ್ನು ಮಾತನಾಡಲು ಸ್ಥಳಕ್ಕೆ ಕರೆಯಿಸಿಕೊಂಡಿದ್ದಾನೆ. ಮಾತಿನ ನಡುವೆ ಇಬ್ಬರ ನಡುವೆ ವಾಗ್ವಾದ ಜಗಳಕ್ಕೆ ತಿರುಗಿದೆ. ಇದರಿಂದ ಆಕ್ರೋಶಗೊಂಡ ಯುವಕ ಚಾಕು ತೆಗೆದು ಯುವತಿಗೆ ಮನಸೋಇಚ್ಚೆ ಇರಿದಿದ್ದಾನೆ. ಪ್ರಸ್ತುತ ಗಂಭೀರವಾಗಿ ಗಾಯಗೊಂಡಿರುವ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಗೃಹ ಜ್ಯೋತಿ : ೮ ಲಕ್ಷಕ್ಕೂ ಅಧಿಕ ಗ್ರಾಹಕರಿಂದ ನೋಂದಣಿ

ಬೆAಗಳೂರು, ಜೂ. ೨೧: ಗೃಹಜ್ಯೋತಿ ಯೋಜನೆಯ ನೋಂದಣಿ ಕಾರ್ಯಕ್ಕೆ ತಾ. ೧೮ ರಂದು ಅಧಿಕೃತವಾಗಿ ಚಾಲನೆ ಸಿಕ್ಕಿದೆ. ಮೊದಲ ದಿನ ೯೬ ಸಾವಿರಕ್ಕೂ ಹೆಚ್ಚು ಮಂದಿ ಗ್ರಾಹಕರು ಅರ್ಜಿ ಸಲ್ಲಿಸಿದ್ದರೆ, ಎರಡನೇ ದಿನ ಈ ಸಂಖ್ಯೆ ದುಪ್ಪಟ್ಟಾಗಿತ್ತು. ಇದೀಗ ಮೂರನೇ ದಿನ ಯೋಜನೆಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಜೂನ್ ೨೦ರ ಹೊತ್ತಿಗೆ, ಕರ್ನಾಟಕದಲ್ಲಿ ಒಟ್ಟು ೮,೧೬,೬೩೧ ಗ್ರಾಹಕರು ಗೃಹ ಜ್ಯೋತಿ ಯೋಜನೆಗೆ ನೋಂದಾಯಿಸಿಕೊAಡಿದ್ದಾರೆ. ಗೃಹ ಜ್ಯೋತಿ ಯೋಜನೆಯಡಿ ೨೦೦ ಯೂನಿಟ್‌ವರೆಗೆ ಉಚಿತ ವಿದ್ಯುತ್ ಪಡೆಯಬಹುದಾಗಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.