ವೀರಾಜಪೇಟೆ, ಜೂ. ೨೧: ಜೀವನದಿ ಕಾವೇರಿಯ ಸ್ವಚ್ಛತೆ ಕಾರ್ಯದ ಪ್ರಸ್ತಾವನೆ ಸರ್ಕಾರದ ಮುಂದಿದ್ದು ಈ ವಿಚಾರದಲ್ಲಿ ಮುಖ್ಯ ಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಗಳ ಗಮನಕ್ಕೆ ತರಲಾಗಿದೆ. ಮುಂದಿನ ದಿನಗಳಲ್ಲಿ ಪ್ರಧಾನಮಂತ್ರಿಗಳ ಗಂಗಾನದಿ ಸ್ವಚ್ಛತೆ ಆಂದೋಲನ ರೀತಿಯಲ್ಲಿ ಕಾವೇರಿ ನದಿ ಸ್ವಚ್ಛತೆ ಕಾರ್ಯ ಮಾಡಲಾಗುವುದು ಎಂದು ವೀರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ ವಿಶ್ವಾಸ ವ್ಯಕ್ತಪಡಿಸಿದರು.
ವೀರಾಜಪೇಟೆ ಪುರಭವನದಲ್ಲಿ ಪೌರಕಾರ್ಮಿಕರಿಂದ ನೂತನ ಶಾಸಕ ರಿಗೆ ಸನ್ಮಾನ ಮಾಡಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕರು, ಜಿಲ್ಲೆಯ ರಸ್ತೆ ಬದಿಗಳಲ್ಲಿ ಕಸ ಎಸೆ ಯುತ್ತಿರುವುದು ಹೆಚ್ಚಾಗಿ ಕಂಡುಬ ರುತ್ತಿದೆ. ಇದೊಂದು ದೇಶದ್ರೋಹದ ಕೆಲಸ ಎಂದು ಭಾಸವಾಗುತ್ತಿದೆ. ಇದನ್ನು ತಡೆ ಹಿಡಿಯದಿದ್ದರೆ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ. ಮನೆಗಳಲ್ಲಿ ಮತ್ತು ಇತರೆಡೆಗಳಲ್ಲಿ ಉತ್ಪತಿ ಆಗುವ ಕಸವನ್ನು ಎಲ್ಲೆಂದ ರಲ್ಲಿ ಬಿಸಾಡಲಾಗುತ್ತಿದೆ. ಮಳೆಗಾಲ ದಲ್ಲಿ ನೀರಿನೊಂದಿಗೆ ಕಸ ಸೇರಿ ಹಳ್ಳಕೊಳ್ಳದಲ್ಲಿ ಹರಿದು ನದಿಗಳ ಮೂಲಕ ಸಮುದ್ರ ಸೇರಿ ಜಲಚರ ಗಳಿಗೆ ಕುತ್ತು ಬರುತ್ತದೆ. ಸೇವಾ ಸಂಸ್ಥೆಗಳ ಮೂಲಕ ಸ್ವಚ್ಛತಾ ಕಾರ್ಯಗಳಿಗೆ ಕೈ ಜೋಡಿಸಬೇಕಾ ಗಿದೆ. ಪರಿಸರ ರಕ್ಷಣೆ ಬಗ್ಗೆ ಜಿಲ್ಲಾಧಿ ಕಾರಿಗಳ ಚರ್ಚೆ ನಡೆಸುತ್ತೇನೆ. ಇದನ್ನು ತಡೆ ಹಿಡಿಯದಿದ್ದರೆ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ. ಮನೆಗಳಲ್ಲಿ ಮತ್ತು ಇತರೆಡೆಗಳಲ್ಲಿ ಉತ್ಪತಿ ಆಗುವ ಕಸವನ್ನು ಎಲ್ಲೆಂದ ರಲ್ಲಿ ಬಿಸಾಡಲಾಗುತ್ತಿದೆ. ಮಳೆಗಾಲ ದಲ್ಲಿ ನೀರಿನೊಂದಿಗೆ ಕಸ ಸೇರಿ ಹಳ್ಳಕೊಳ್ಳದಲ್ಲಿ ಹರಿದು ನದಿಗಳ ಮೂಲಕ ಸಮುದ್ರ ಸೇರಿ ಜಲಚರ ಗಳಿಗೆ ಕುತ್ತು ಬರುತ್ತದೆ. ಸೇವಾ ಸಂಸ್ಥೆಗಳ ಮೂಲಕ ಸ್ವಚ್ಛತಾ ಕಾರ್ಯಗಳಿಗೆ ಕೈ ಜೋಡಿಸಬೇಕಾ ಗಿದೆ. ಪರಿಸರ ರಕ್ಷಣೆ ಬಗ್ಗೆ ಜಿಲ್ಲಾಧಿ ಕಾರಿಗಳ ಚರ್ಚೆ ನಡೆಸುತ್ತೇನೆ. ಯಾವುದೇ ಕಾರಣಕ್ಕೂ ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
ಪಟ್ಟಣದ ಹೊರವಲ ಯದಲ್ಲಿರುವ ಅಂಬಟ್ಟಿಯಲ್ಲಿ ಸರ್ಕಾರ ೭ ಎಕರೆ ಜಾಗ ಖರೀದಿ ಸಿದ್ದು ಸ್ವಚ್ಛತಾ ಕಾರ್ಯ ಮುಂದುವರೆದಿದೆ. ಖಾಲಿ ಜಾಗದಲ್ಲಿ ರುವ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಗೆ ನಿರ್ದೇಶನ ನೀಡಲಾಗುವುದು. ಅತಿ ಶೀಘ್ರದಲ್ಲಿಯೆ ಬೆಟ್ಟ ಪ್ರದೇಶದಲ್ಲಿನ ನಿರಾಶ್ರಿತರಿಗೆ ನಿವೇಶನ ಹಂಚಿಕೆ ಮಾಡಲಾಗು ವುದು. ಪೌರ ಕಾರ್ಮಿಕರ ಸಮಸ್ಯೆಗಳ ಬಗ್ಗೆ ನನಗೆ ಅರಿವಿದೆ. ಈ ಹಿಂದೆ ಸಿದ್ದರಾಮಯ್ಯ ಅವರ ಸರ್ಕಾರ ಇದ್ದಾಗ ಬೆಂಗಳೂರಿನಲ್ಲಿ ೧೮ ಸಾವಿರ ಗುತ್ತಿಗೆ ಆಧಾರದ ಪೌರ ಕಾರ್ಮಿಕರನ್ನು ನೇರ ಪಾವತಿ ಅಡಿಯಲ್ಲಿ ತೆಗೆದುಕೊಳ್ಳಲಾಗಿದೆ. ಅದೇ ನಿಯಮ ಇಲ್ಲಿಗೂ ಅನ್ವಯಿಸುತ್ತದೆ. ಶೀಘ್ರದಲ್ಲಿಯೆ ಪುರ ಸಭೆಯಲ್ಲಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ಆರಂಭದಲ್ಲಿ ಸದಸ್ಯರಾದ ಡಿ.ಪಿ ರಾಜೇಶ್, ಸಿ.ಕೆ ಪೃಥ್ವಿನಾಥ್, ದೇಚಮ್ಮ ಕಾಳಪ್ಪ. ಮತೀನ್, ರಜನಿಕಾಂತ್, ಮುಖ್ಯಾದಿಕಾರಿ ಚಂದ್ರಕುಮಾರ್ ಅವರುಗಳು ಪುರಸಭೆಯಲ್ಲಿರುವ ಸಮಸ್ಯೆಗಳ ಬಗ್ಗೆ ಶಾಸಕರ ಗಮನಕ್ಕೆ ತಂದರು.
ವಿಧಾನಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಮಾತನಾಡಿ, ಚುನಾವಣೆವರೆಗೆ ಮಾತ್ರ ಪಕ್ಷಗಳು. ಚುನಾವಣೆ ಕಳೆದ ನಂತರ ಜನಸೇವೆ. ನಾವುಗಳು ಸರ್ಕಾರದ ಸೇವಕರು. ಪುರಸಭೆ ವ್ಯಾಪ್ತಿಯಲ್ಲಿ ರುವ ಮಾರುಕಟ್ಟೆ ಕಟ್ಟಡ ಅರ್ಧಕ್ಕೆ ನಿಂತಿದೆ. ಅಂಬಟ್ಟಿಯಲ್ಲಿನ ಜಾಗದಲ್ಲಿ ೩೦೦ ಕುಟುಂಬಗಳಿಗೆ ನಿವೇಶನ ನೀಡುವ ವ್ಯವಸ್ಥೆ ಆಗುತ್ತದೆ. ಶಾಸಕರು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಆಗಿರುವುದರಿಂದ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತರಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ವೇದಿಕೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಚಂದ್ರಕುಮಾರ್, ಅಭಿಯಂತರ ಹೇಮಕುಮಾರ್ ಉಪಸ್ಥಿತರಿದ್ದರು. ಸದಸ್ಯ ಮಹಮದ್ ರಾಫಿ ಸ್ವಾಗತಿಸಿ ಅಭಿಯಂತರ ಹೇಮಕುಮಾರ್ ವಂದಿಸಿದರು.