ಮಡಿಕೇರಿ, ಜೂ. ೨೨: ಆರೋಗ್ಯ ಕೆಟ್ಟು ನಡೆಯಲಾರದ ಸ್ಥಿತಿಯಲ್ಲಿರುವ ಯಾವುದೇ ಜನಾಂಗದ ಬಡ ರೋಗಿಗಳಿಗೆ ಶೌಚಕ್ಕೆ ತೆರಳಲು, ಮನೆಯ ಒಳಗೆ ಹಾಗೂ ಆವರಣದಲ್ಲಿ ವಿಹರಿಸಲು ಅನುಕೂಲವಾಗುವಂತೆ ಗಾಲಿ ಕುರ್ಚಿಗಳನ್ನು ಎರವಲಾಗಿ ನೀಡುವುದಾಗಿ ಮಾನವೀಯ ಸ್ನೇಹಿತರ ಒಕ್ಕೂಟವು ತಿಳಿಸಿದೆ.
ಅವಶ್ಯಕತೆ ಮುಗಿದ ಬಳಿಕ ಒಕ್ಕೂಟಕ್ಕೆ ಹಿಂತಿರುಗಿಸುವ ವ್ಯವಸ್ಥೆಯೊಂದಿಗೆ ಬಡ ಕುಟುಂಬದವರು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂದು ಒಕ್ಕೂಟದ ಪ್ರಕಟಣೆ ತಿಳಿಸಿದ್ದು, ಹೆಚ್ಚಿನ ಮಾಹಿತಿಗಾಗಿ ೯೯೬೪೦೭೬೬೯೮ ಈ ಸಂಖ್ಯೆಯಲ್ಲಿ ಸಂಪರ್ಕಿಸಬಹುದಾಗಿದೆ.