ವೀರಾಜಪೇಟೆ, ಜೂ. ೨೨: ವೀರಾಜಪೇಟೆಯಲ್ಲಿ ಪಿ.ಡಬ್ಲೂö್ಯ.ಡಿ ಕಚೇರಿ ಬಳಿ ವೀರಾಜಪೇಟೆ ಶಾಸಕರ ನೂತನ ಕಚೇರಿಯನ್ನು ಶಾಸಕ ಎ.ಎಸ್. ಪೊನ್ನಣ್ಣ ಅವರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಶಾಸಕರು, ಪೊನ್ನಂ ಪೇಟೆಯಲ್ಲಿ ಈಗಾಗಲೇ ಕಚೇರಿ ಪ್ರಾರಂಭಿಸಲಾಗಿದೆ. ಮಡಿಕೇರಿಯಲ್ಲಿ ಕಚೇರಿ ತೆರೆಯಲಾಗುವುದು. ಇದರಿಂದ ಸಾರ್ವಜನಿಕರ ಕುಂದು ಕೊರತೆಗಳ, ಸಮಸ್ಯೆಗಳ ಪರಿಹಾರಕ್ಕೆ ಅವಕಾಶವಾಗಲಿದೆ. ವೀರಾಜಪೇಟೆ ಕಚೇರಿಯಲ್ಲಿ ಶಾಸಕರ ಲಭ್ಯತೆ ದಿನ ನಿಗದಿ ಮಾಡಲಿದ್ದೇವೆ ಎಂದರು.
ಕಚೇರಿ ಉದ್ಘಾಟನೆ ವೇಳೆ ಡಿಸಿಸಿ ಅಧ್ಯಕ್ಷ ಧರ್ಮಜ ಉತ್ತಪ್ಪ, ವೀರಾಜಪೇಟೆ ಬ್ಲಾಕ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ನಗರ ಕಾಂಗ್ರೆಸ್ ಅಧ್ಯಕ್ಷ ಮಾದಂಡ ತಿಮ್ಮಯ್ಯ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರುಗಳು, ಮತ್ತು ಕಾರ್ಯಕರ್ತರು, ಜನಪ್ರತಿನಿಧಿಗಳು ಭಾಗವಹಿಸಿದ್ದರು. ಉದ್ಘಾಟನೆಗೂ ಮುನ್ನ ಬೆಳಿಗ್ಗೆ ಕಚೇರಿಯಲ್ಲಿ ಗಣಪತಿ ಹೋಮ ನಡೆಸಲಾಯಿತು.