ಕಣಿವೆ, ಜೂ. ೨೨: ಕಳೆದ ಹನ್ನೆರಡು ವರ್ಷಗಳ ಹಿಂದೆ ಕುಶಾಲನಗರದಲ್ಲಿ ಸ್ಥಾಪನೆಯಾದ ಸರ್ಕಾರಿ ಇಂಜಿನಿಯರಿAಗ್ ಕಾಲೇಜಿಗೆ ಇದುವರೆಗೂ ಸರ್ಕಾರ ಪೂರಕವಾದ ಉಪನ್ಯಾಸಕರು, ಕಚೇರಿ ಸಿಬ್ಬಂದಿ ಹಾಗೂ ಇನ್ನಿತರೆ ಮೂಲ ಸೌಕರ್ಯಗಳನ್ನು ಒದಗಿಸಿಲ್ಲ.
ಹಾಗಾಗಿ ಇಂಜಿನಿಯರಿAಗ್ ವ್ಯಾಸಾಂಗ ಪಡೆಯಲು ಕೌನ್ಸಿಲಿಂಗ್ ಮೂಲಕ ಸೀಟುಗಳನ್ನು ಗಿಟ್ಟಿಸಿ ಕೊಳ್ಳುವ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ವಿದ್ಯಾರ್ಥಿಗಳು ಪರದಾಡು ವಂತಹ ಸ್ಥಿತಿ ನಿರ್ಮಾಣಗೊಂಡಿದೆ.
೨೦೦೭ ರಲ್ಲಿ ಕುಶಾಲನಗರದ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯ ಆವರಣದಲ್ಲಿ ಆರಂಭವಾದ ಸರ್ಕಾರಿ ಇಂಜಿನಿಯರಿAಗ್ ಕಾಲೇಜು ಬಳಿಕ ೧೩.೫೦ ಎಕರೆಯಷ್ಟು ಪ್ರತ್ಯೇಕ ಜಾಗದಲ್ಲಿ ಸ್ಥಾಪನೆಗೊಂಡಿತು.
ಇದೀಗ ಕಾಲೇಜಿನಲ್ಲಿ ಸಿವಿಲ್, ಮೆಕ್ಯಾನಿಕಲ್, ಎಲೆಕ್ಟಾçನಿಕ್ಸ್ ಮತ್ತು ಕಮ್ಯುನಿಕೇಷನ್ ಮತ್ತು ಕಂಪ್ಯೂಟರ್ ಎಂಬ ನಾಲ್ಕು ಪ್ರತ್ಯೇಕ ವಿಭಾಗಗಳಿದ್ದು ಈ ನಾಲ್ಕು ವಿಭಾಗಗಳಲ್ಲಿ ಸೂಕ್ತ ಉಪನ್ಯಾಸಕರೇ ಇಲ್ಲ. ಕಾಲೇಜಿನಲ್ಲಿ ಒಟ್ಟು ೪೮ ಉಪನ್ಯಾಸಕರ ಹುದ್ದೆಗಳಿದ್ದು, ಕೇವಲ ೨೦ ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ೧೫ ಮಂದಿ ಉಪನ್ಯಾಸಕರನ್ನು ಹೊರ ಗುತ್ತಿಗೆಯಲ್ಲಿ ನೇಮಿಸಿಕೊಂಡು ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ನೀಡಲಾಗುತ್ತಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಎನ್.ಎಸ್. ಸತೀಶ್ ಮಾಹಿತಿ ನೀಡಿದರು.
ಸಿವಿಲ್ ವಿಭಾಗದಲ್ಲಿ ೧೨ ಮಂದಿ ಉಪನ್ಯಾಸಕರ ಹುದ್ದೆ ಮಂಜೂರಾಗಿದೆ. ಆದರೆ ಕೇವಲ ಇಬ್ಬರು ಉಪನ್ಯಾಸಕರಿದ್ದು, ಹತ್ತು ಉಪನ್ಯಾಸಕರ ಹುದ್ದೆಗಳು ಖಾಲಿ ಇದೆ. ಮೆಕ್ಯಾನಿಕಲ್ ವಿಭಾಗದಲ್ಲಿಯೂ ೧೨ ಉಪನ್ಯಾಸಕರ ಪೈಕಿ ೫ ಉಪನ್ಯಾ¸ Àಕರಿದ್ದು, ೭ ಉಪನ್ಯಾಸಕರ ಹುದ್ದೆಗಳು ಖಾಲಿ ಇವೆ. ಎಲೆಕ್ಟಾçನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದಲ್ಲಿ ೧೨ ಉಪನ್ಯಾಸಕರ ಪೈಕಿ ಕೇವಲ ಇಬ್ಬರು ಉಪನ್ಯಾಸಕರಿದ್ದು ೧೦ ಉಪನ್ಯಾಸಕರ ಹುದ್ದೆಗಳು ಖಾಲಿ ಇವೆ. ಕಂಪ್ಯೂಟರ್ ವಿಭಾಗ ದಲ್ಲಿಯೂ ೭ ಹುದ್ದೆಗಳ ಪೈಕಿ ೩ ಮಂದಿ ಇದ್ದು ೪ ಹುದ್ದೆಗಳು ಬಾಕಿ ಇವೆ. ಹಾಗೆಯೇ ಗಣಿತ, ಕನ್ನಡ, ೩ಐದನೇ ಪುಟಕ್ಕೆ
(ಮೊದಲ ಪುಟದಿಂದ) ಜಿಯಾಲಜಿ ಮತ್ತಿತರೇ ವಿಷಯಗಳ ಬೋಧನೆಗೆ ಬೋಧಕರಿಲ್ಲ. ಕಚೇರಿಯಲ್ಲೂ ಸೂಕ್ತ ಸಿಬ್ಬಂದಿಗಳಿಲ್ಲ. ಇಬ್ಬರು ರಿಜಿಸ್ಟಾçರ್ ಪೈಕಿ ಒಬ್ಬರಿದ್ದಾರೆ. ೪ ಮಂದಿ ಅಧೀಕ್ಷಕರ ಪೈಕಿ ಕೇವಲ ಒಬ್ಬರಿದ್ದಾರೆ. ೧೦ ಮಂದಿ ಪ್ರಥಮ ದರ್ಜೆ ಸಹಾಯಕರ ಪೈಕಿ ಕೇವಲ ಮೂವರಿದ್ದಾರೆ. ೧೨ ಮಂದಿ ದ್ವಿತೀಯ ದರ್ಜೆ ಸಹಾಯಕರ ಪೈಕಿ ಕೇವಲ ಇಬ್ಬರಿದ್ದಾರೆ.
ಇನ್ನೂ ಸ್ಟೆನೋಗ್ರಾಫರ್, ಇಬ್ಬರು ಟೈಪಿಸ್ಟ್, ಇಬ್ಬರು ಅಡುಗೆಯವರು ಹಾಗೂ ಇಬ್ಬರು ಅಡುಗೆ ಸಹಾಯಕರು, ಐವರು ಡ್ರೆöÊವರ್, ಇಬ್ಬರು ಅಟೆಂಡರ್ ಹಾಗೂ ಹತ್ತು ಮಂದಿ ಡಿ ಗ್ರೂಪ್ ಹುದ್ದೆಗಳು ಖಾಲಿ ಉಳಿದಿದ್ದರೂ ಕೂಡ ಇದುವರೆಗೂ ಸರ್ಕಾರ ಖಾಲಿ ಇರುವ ಹುದ್ದೆಗಳನ್ನು ತುಂಬುವ ಕೆಲಸ ಆಗಲೇ ಇಲ್ಲ.
ಕಾಲೇಜಿನಲ್ಲಿನ ಎಲ್ಲಾ ವಿಭಾಗಗಳಿಂದ ಒಟ್ಟು ೮೫೦ ವಿದ್ಯಾರ್ಥಿಗಳಿದ್ದು ಅವರಿಗೆ ಸರಿಯಾದ ವಸತಿ ನಿಲಯದ ವ್ಯವಸ್ಥೆಯೂ ಇರುವುದಿಲ್ಲ.
ವಿದ್ಯಾರ್ಥಿನಿಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಅಲ್ಪಸಂಖ್ಯಾತರ ಇಲಾಖೆ ಹಾಗೂ ದೇವರಾಜ ಅರಸು ವಸತಿ ನಿಲಯಗಳಲ್ಲಿ ಒಂದಷ್ಟು ಮಂದಿ ಪ್ರವೇಶಾತಿ ಪಡೆದು ವ್ಯಾಸಾಂಗ ಮಾಡುತ್ತಿದ್ದಾರೆ ಎಂದು ಡಾ. ಸತೀಶ್ ವಿವರಿಸಿದರು.
ಕಾಲೇಜಿನ ವಿದ್ಯಾರ್ಥಿಗಳ ಸರ್ವತೋಮುಖ ಪ್ರಗತಿಗೆ ಪೂರಕ ವಾಗಿ ಕಾಲೇಜು ಆವರಣದಲ್ಲಿ ವಿವಿ ಧೋದ್ದೇಶ ಒಳಾಂಗಣ ಕ್ರೀಡಾಂಗಣ ಅತೀ ಅಗತ್ಯವಿದ್ದು ಸರ್ಕಾರ ಕೂಡಲೇ ಈ ಬಗ್ಗೆ ಗಮನ ಹರಿಸಬೇಕಿದೆ.
ಹಾಗೆಯೇ ಖಾಲಿ ಇರುವ ಉಪನ್ಯಾಸಕರ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಕೊರತೆ ಯಾಗದಂತೆ ನಿಗಾವಹಿಸಬೇಕಿದೆ ಎಂಬುದು ಸ್ಥಳೀಯ ಶಿಕ್ಷಣ ಪ್ರೇಮಿ ಎಂ.ಕೆ. ದಿನೇಶ್ ಅವರ ಆಗ್ರಹವಾಗಿದೆ.
- ಕೆ.ಎಸ್. ಮೂರ್ತಿ