ಚೆಟ್ಟಳ್ಳಿ, ಜೂ ೨೧: ಚೆಟ್ಟಳ್ಳಿ ಕೇಂದ್ರೀಯ ತೋಟಗಾರಿಕಾ ಕೇಂದ್ರದಲ್ಲಿ ಬೆಣ್ಣೆಹಣ್ಣು ಕ್ಷೇತ್ರೋತ್ಸವ ಕೃಷಿಕರ ಗಮನ ಸೆಳೆಯಿತು.

ವೈಜ್ಞಾನಿಕ ಕೃಷಿಯ ಬಗ್ಗೆ ರೈತರ ಜ್ಞಾನವನ್ನು ಉತ್ಕೃಷ್ಟಗೊಳಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು. ಕೇಂದ್ರದ ಸಂಶೋಧಿತ ತಳಿಯಾದ ಅರ್ಕಾ ಸುಪ್ರೀಮ್, ಅರ್ಕಾ ಕೂರ್ಗ್ ರವಿ, ದೇಶ-ವಿದೇಶಗಳಲ್ಲಿ ಹೆಸರು ಗಳಿಸಿರುವ ಹ್ಯಾಸ್ ಅವಕಾಡೋ ಹಾಗೂ ಬೆಳೆಗಾರರ ೫೦ಕ್ಕೂ ಅಧಿಕ ಹಾಗೂ ಕೆಲವು ವಿದೇಶಿ ಬೆಣ್ಣೆಹಣ್ಣಿನ (ಬಟರ್ ಫ್ರೂಟ್) ತಳಿಗಳು ಪ್ರದರ್ಶನ ಗೊಂಡವು. ಕೊಡಗು ಸೇರಿದಂತೆ ಚಾಮರಾಜನಗರ, ಮೈಸೂರು, ಬೆಂಗಳೂರು ಜಿಲ್ಲೆ ಸೇರಿದಂತೆ ಆಗಮಿಸಿದ ರೈತರ ಜೊತೆಗೆ ಕೇರಳ ತಮಿಳುನಾಡಿನಿಂದಲೂ ರೈತರು ಪಾಲ್ಗೊಳ್ಳುವ ಮೂಲಕ ಮಾಹಿತಿ ಪಡೆದರು.

ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಎಸ್.ಕೆ.ಸಿಂಗ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಬೆಣ್ಣೆಹಣ್ಣು ಬೆಳೆಯ ಅಭಿವೃದ್ಧಿಗಾಗಿ ಬೆಳೆಗಾರರು ಸದಸ್ಯತ್ವ ಪಡೆದು ಸಂಘವನ್ನು ಸ್ಥಾಪಿಸುವುದು. ಈ ಮೂಲಕ ಬೆಳೆಗಾರರಿಗೆ ಪ್ರೋತ್ಸಾಹ ಹಾಗೂ ಮಾರುಕಟ್ಟೆಯನ್ನು ಅಭಿವೃದ್ಧಿ ಪಡಿಸುವಂತೆ ತಿಳಿಸಿದರು. ಇದರ ಸಲುವಾಗಿ ವೈಯಕ್ತಿಕವಾಗಿ ರೂ. ೧ ಲಕ್ಷ ದೇಣಿಗೆ ನೀಡುವುದಾಗಿ ತಿಳಿಸಿದರು. ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಮಂಜುನಾಥ್ ಶೆಟ್ಟಿ ಬೆಣ್ಣೆಹಣ್ಣು ಬೆಳೆಯಲು ಬೆಳೆಗಾರರಿಗೆ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಲಭ್ಯವಿರುವ ಸಹಾಯಧನದ ಬಗ್ಗೆ ವಿವರಣೆ ನೀಡಿದರು.

ಕಾಫಿ ಬೆಳೆಗಾರರು ಹಾಗೂ ಕಾಫಿ ಮಂಡಳಿಯ ಮಾಜಿ ಉಪಾಧ್ಯಕ್ಷರೂ ಆದ ಬೋಸ್ ಮಂದಣ್ಣ ಮಾತನಾಡಿ, ಕೊಡಗಿನ ವಾತಾವರಣಕ್ಕೆ ಸೂಕ್ತವಾದ ಬೆಣ್ಣೆಹಣ್ಣು ಬೆಳೆ ಹಿಂದಿನ ಕಾಲದಿಂದಲೂ ಬೆಳೆಸಲಾಗುತಿದ್ದರೂ ಚೆಟ್ಟಳ್ಳಿಯ ತೋಟಗಾರಿಕಾ ಕೇಂದ್ರದಲ್ಲಿ ಹಲವು ತಳಿಗಳ ಅಬಿವೃದ್ಧಿ ಕಾರ್ಯನಡೆಯುತ್ತಿದೆ ಎಂದರು. ಮಣ್ಣಿನ ಗುಣಮಟ್ಟ ಹಾಗೂ ಹವಾಮಾನ ವೈಪರಿತ್ಯದಿಂದ ಕೊಡಗಿನ ಮೂಲ ಬೆಳೆಯಾದ ಕಾಫಿ ಮತ್ತು ಕರಿಮೆಣಸು ಬೆಳೆಯ ಆದಾಯದಲ್ಲಿ ಕುಂಠಿತ ವಾಗುತ್ತಿರುವ ಈ ಸಂಧರ್ಭದಲ್ಲಿ ಬೆಣ್ಣೆಹಣ್ಣಿನಂತಹ ಬೆಳೆಗಳನ್ನು ಅಳವಡಿಸಿಕೊಳ್ಳುವುದು ಪ್ರಯೋಜನಕಾರಿಯಾಗಲಿದೆ ಎಂದರು. ಜೊತೆಗೆ ಕೊಡಗಿನ ಕಿತ್ತಳೆ ಹಾಗೂ ಜೇನು ಕೃಷಿಯನ್ನು ಅಭಿವೃದ್ಧಿಪಡಿಸು ವಂತಾಗಬೇಕೆAದು ಅಭಿಪ್ರಾಯಪಟ್ಟರು.

ಈ ಸಂಧರ್ಭದಲ್ಲಿ ಅತಿಥಿಗಳಾದ ಡಾ. ಎಸ್.ಕೆ. ಸಿಂಗ್, ಬೋಸ್ ಮಂದಣ್ಣ ಹಾಗೂ ಡಾ. ಮಂಜುನಾಥ್ ಶೆಟ್ಟಿರವರಿಗೆ ಸನ್ಮಾನಿಸಲಾಯಿತು.

ರೈತರಿಗೆ ಪ್ರಯೋಜನಕಾರಿಯಾದ ಬೆಣ್ಣೆಹಣ್ಣಿನ ಕೀಟ ಹಾಗೂ ರೋಗ ನಿರ್ವಹಣೆಯ ಬಗ್ಗೆ ವಿಸ್ತರಣಾ ಹಸ್ತಪ್ರತಿಯನ್ನು ಅತಿಥಿಗಳು ವೇದಿಕೆಯಲ್ಲಿ ಬಿಡುಗಡೆಗೊಳಿಸಿದರು. ಕೇಂದ್ರದ ಹಣ್ಣು ವಿಜ್ಞಾನಿ ಡಾ. ಮುರಳೀಧರ ಬಿ. ಎಂ. ರವರು ಬೆಣ್ಣೆಹಣ್ಣಿನಲ್ಲಿ ಅನುವಂಶೀಕ ವೈವಿಧ್ಯತೆ ಮತ್ತು ತಳಿ ಸಂಪತ್ತು ಕುರಿತು ಮಾತನಾಡಿ, ಕರ್ನಾಟಕ, ತಮಿಳುನಾಡು, ಕೇರಳ ಪ್ರದೇಶಗಳಲ್ಲಿ ಬೆಣ್ಣೆಹಣ್ಣನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ ಎಂದರು. ಕೇಂದ್ರದಿAದ ಅಭಿವೃದ್ಧಿಪಡಿಸಲಾದ ತಳಿಗಳಾದ ಅರ್ಕಾ ಸುಪ್ರೀಮ್, ಅರ್ಕಾ ಕೂರ್ಗ್ ರವಿ ಹಾಗೂ ತಮಿಳುನಾಡಿನ ಟಿ.ಕೆ.ಡಿ ತಳಿಯ ಬಗ್ಗೆ ತಿಳಿಸಿದರು. ಹಿರಿಯ ವಿಜ್ಞಾನಿ ಹಾಗೂ ಕೇಂದ್ರದ ಮುಖ್ಯಸ್ಥರಾದ ಡಾ. ರಾಜೇಂದಿರನ್ ಎಸ್ ಬೆಣ್ಣೆಹಣ್ಣಿನಲ್ಲಿ ನೀರು ಹಾಗೂ ಪೋಷಕಾಂಶಗಳ ನಿರ್ವಹಣೆ ಬಗ್ಗೆ ಮಾತನಾಡಿ, ಗಿಡಗಳಿಗೆ ನಿಯಮಿತ ನೀರು, ಮಣ್ಣಿನ ಪರೀಕ್ಷೆಯ ಮೂಲಕ ಸೂಕ್ತ ಪ್ರಮಾಣದ ಪೋಷಕಾಂಶಗಳನ್ನು ನೀಡಬೇಕೆಂದು ಸಲಹೆ ನೀಡಿದರು.

ಸಸ್ಯ ರೋಗ ಶಾಸ್ತç ವಿಜ್ಞಾನಿ ಮಧು ಜಿ.ಎಸ್. ರವರು ಬೆಣ್ಣೆಹಣ್ಣಿನಲ್ಲಿ ಬೇರುಕೊಳೆ ರೋಗ ಹಾಗೂ ನಿರ್ವಹಣೆ ಬಗ್ಗು ತಿಳಿಸಿದರು. ಕೀಟಶಾಸ್ತç ವಿಜ್ಞಾನಿ ಡಾ. ರಾಣಿ ಎ.ಟಿ. ಬೆಣ್ಣೆಹಣ್ಣಿನಲ್ಲಿ ಕಂಡುಬರುವ ವಿವಿಧ ಕೀಟ ಹಾಗೂ ಅವುಗಳ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು. ಈ ಕಾರ್ಯಾಗಾರದಲ್ಲಿ ಬೆಳೆಗಾರರ ಪ್ರಶ್ನೆಗಳಿಗೆ ತಜ್ಞರು ಉತ್ತರಿಸಿದರು. ಕೇಂದ್ರದ ಮುಖ್ಯಸ್ಥರಾದ ಡಾ. ರಾಜೇಂದಿರನ್ ಎಸ್. ರವರು ಸ್ವಾಗತಿಸಿ, ಹಣ್ಣು ವಿಜ್ಞಾನ ತಜ್ಞರಾದ ಮುರಳೀಧರ್‌ರವರು ವಂದಿಸಿ, ಕೀಟಶಾಸ್ತç ತಜ್ಞರಾದ ಡಾ. ರಾಣಿ ಎ.ಟಿ. ನಿರೂಪಿಸಿದರು. ಭಾಗವಹಿಸಿದ ರೈತರಿಗೆ ಕ್ಷೇತ್ರ ಭೇಟಿ ಕೈಗೊಳ್ಳಲಾಯಿತು.

ಕಾರ್ಯಗಾರದಲ್ಲಿ ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರ, ತೋಟಗಾರಿಕಾ ಇಲಾಖೆ, ಕಾಫಿ ಮಂಡಳಿ, ಸಂಬಾರ ಮಂಡಳಿ ಟಾಟಾ ಸಂಸ್ಥೆ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಭಾಗವಹಿಸಿದ್ದರು.

-ಪುತ್ತರಿರ ಕರುಣ್ ಕಾಳಯ್ಯ