ಕುಟುಂಬದ ಆಧಾರ ಸ್ತಂಭ
ಅವರು ಯಾವಾಗಲೂ ನಮ್ಮನ್ನು ಪ್ರೋತ್ಸಾಹಿಸುತ್ತಾರೆ ಮತ್ತು ನಮ್ಮ ಎಲ್ಲ ಅಗತ್ಯಗಳನ್ನು ನೋಡಿಕೊಳ್ಳುತ್ತಾರೆ. ಕುಟುಂಬವನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳುವ ಮತ್ತು ಜೀವನದ ಎಲ್ಲಾ ಹಂತಗಳಲ್ಲಿ ನಮಗೆ ಬೆಂಬಲಿಸುವ ಕುಟುಂಬದ ಆಧಾರ ಸ್ತಂಭ. ನಾವು ಪ್ರತಿವರ್ಷ ನಮ್ಮ ತಂದೆಯನ್ನು ಪ್ರಶಂಸಿಸಲು ಉಡುಗೊರೆಗಳನ್ನು ನೀಡುವ ಮೂಲಕ ಈ ದಿನವನ್ನು ಆಚರಿಸುತ್ತೇವೆ. ಅಮ್ಮ ಬದುಕು ನೀಡಿದರೆ ಭರವಸೆ ತುಂಬುವವನೇ ತಂದೆ. ನನ್ನ ನಿಜವಾದ ನಾಯಕ, ನನ್ನ ತಂದೆ ಆದರ್ಶ ವ್ಯಕ್ತಿ. ನನಗೆ ತಾಯಿ ಬದುಕು ನೀಡಿದರೆ, ತಂದೆ ಬದುಕುವ ಕನಸುಗಳನ್ನು ತುಂಬಿದ್ದಾರೆ. ನನ್ನ ಕೈಹಿಡಿದು ಭವಿಷ್ಯ ಕಟ್ಟುವ ಭರವಸೆ ತುಂಬಿದ್ದಾರೆ. ಅಪ್ಪಾ ನನ್ನ ಒಬ್ಬ ಉತ್ತಮ ವ್ಯಕ್ತಿಯನ್ನಾಗಿಸಿದ್ದಕ್ಕೆ ದೇಶ ಕಾಯುವ ಸೈನಿಕನಂತೆ ನಮ್ಮ ರಕ್ಷಣೆ ಮಾಡುವ ಯೋಧ ನೀನು ದಿ ಬೆಸ್ಟ್ ಅಪ್ಪಾ... ಅಪ್ಪಂದಿರ ದಿನದ ಶುಭಾಶಯಗಳು. ಜೀವನದ ಮೊದಲನೇ ಗೆಳೆಯ ಅಪ್ಪ. ಬಾಳಿಗೆ ಸ್ಫೂರ್ತಿಯ ಚೆಲುಮೆ ಅಪ್ಪ. ಧನ್ಯವಾದಗಳು.
- ಬಿ.ಎಸ್. ಸೀತಮ್ಮ, ೭ನೇ ತರಗತಿ, ಸಂತ ಜೋಸೆಫರ ಶಾಲೆ, ಮಡಿಕೇರಿ.ಭವಿಷ್ಯದ ದಾರಿ ದೀಪ
ಅಪ್ಪ ಎಂದರೆ... ತನಗೆ ಎಷ್ಟೇ ಕಷ್ಟವಿದ್ದರೂ ತನಗಿಂತ ಉತ್ತಮರಾಗಿ ಸಮಾಜದಲ್ಲಿ ನೆಲೆಯೂರಲು ರಾತ್ರಿ ಶ್ರಮಿಸುವ ಭಾವನಾತ್ಮಕ ಯಂತ್ರ... ಅಪ್ಪ ಬೇಡಿದ್ದನೆಲ್ಲ ಕೊಡುವವನು ದೇವರಾದರೆ, ಬೇಡದೆ ಬಯಸ್ಸಿದ್ದನೆಲ್ಲ ಕೊಡುವವರು ಅಪ್ಪ... ತನ್ನ ಮುಂದಿನ ಭವಿಷ್ಯದ ದಾರಿ ದೀಪ ನೀವೂ ಅಪ್ಪ... ಎಂದೆAದಿಗೂ ಸದಾ ಹೀಗೆ ನಗುತಲಿರಿ. ನನ್ನ ಮುದ್ದು ಪೊಪ್ಪ. ಐ ಲವ್ ಯೂ ಪೊಪ್ಪ.
- ಯಶಿಕಾ, ಜಶಿಕಾ, ಉಡತ್ಮೊಟ್ಟೆ.ನನ್ನಪ್ಪ ನನಗೆ ಜೀವ
ಅಪ್ಪ ಅಂದರೇನೆ ನನಗೆ ಪ್ರೀತಿ - ಪಂಚಪ್ರಾಣ. ನನ್ನ ಅಪ್ಪ ನನಗೆ ಮುದ್ದು, ಪ್ರೀತಿ ತೋರಿಸುತ್ತಾರೆ, ಗದರಿಸುತ್ತಾರೆ, ತಪ್ಪು ಮಾಡಿದಾಗ ಹೊಡೆದು ತಿದ್ದಿ ಬುದ್ಧಿ ಹೇಳುತ್ತಾರೆ. ಪ್ರೀತಿಯ ಮಾತನಾಡುತ್ತಾ ಸಹಾಯ ಮಾಡುತ್ತಾರೆ. ಟೌನ್ನಿಂದ ಬರುವಾಗ ಅಂತೂ ಸಣ್ಣ ಸಿಹಿ ತಿಂಡಿ ತಿನಿಸು ಇಲ್ಲದೇ ಬರುವುದೇ ಇಲ್ಲ ನನ್ನಪ್ಪ. ಅಮ್ಮ ಜಾಸ್ತಿ ಜೋರು ಮಾತಾಡಿ ಬೈದು ಹೊಡೆದರೆ ಅಪ್ಪ ಅಮ್ಮನಿಗೆ ಬೈತಾರೆ. ಹಳೆಯ ಪೌರಾಣಿಕ ಕತೆಗಳನ್ನು ಹೇಳಿಕೊಡುತ್ತಾರೆ. ಒಟ್ಟಿನಲ್ಲಿ ನನ್ನಪ್ಪ ನನಗೆ ಮುದ್ದು, ಪ್ರಾಣ, ಒಲವು, ನನ್ನಪ್ಪ ನನಗೆ ಜೀವ ನನ್ನ ಜೀವನ. ಅವಕಾಶಕ್ಕಾಗಿ ಶಕ್ತಿ ಪತ್ರಿಕೆಗೆ ವಂದಿಸುತ್ತಾ.
- ವೇದಿತಾ ಪೊನ್ನಮ್ಮ, ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಮೂರ್ನಾಡು.ದಾರಿ ತೋರುವ ಗುರು
ನನ್ನ ಹೃದಯದಲ್ಲಿ ನಿಮಗೊಂದು ವಿಶಿಷ್ಟ ಸ್ಥಾನವಿದೆ. ನನ್ನ ಮೊದಲ ಪ್ರೀತಿಯಾಗಿರೋ ನಿಮಗೆ ಅಪ್ಪಂದಿರ ದಿನದ ಶುಭಾಶಯಗಳು.
ನಾನು ನನ್ನ ತಂದೆಯನ್ನು ನಕ್ಷತ್ರಗಳಂತೆ ಪ್ರೀತಿಸುತ್ತೇನೆ. ಅವರು ಪ್ರಕಾಶಮಾನವಾಗಿ ಹೊಳೆಯುವ ಉದಾಹರಣೆ ಮತ್ತು ನನ್ನ ಹೃದಯದಲ್ಲಿ ಸಂತೋಷದ ಮಿನುಗು! ನೀವು ಕೇವಲ ತಂದೆ ಅಷ್ಟೇ ಅಲ್ಲ, ನನ್ನ ಉತ್ತಮ ಸ್ನೇಹಿತರು ಕೂಡ. ನನ್ನ ತಂದೆ ನನ್ನ ನಿಜವಾದ ಸೂಪರ್ ಹೀರೋ. ಸದಾ ಹೃದಯವಂತಿಕೆ ಮತ್ತು ಸ್ಫೂರ್ತಿಯ ಚಿಲುಮೆಯಂತೆ ಇರುವ ತಂದೆ ಮಕ್ಕಳ ಪಾಲಿನ ದೊಡ್ಡ ಶಕ್ತಿ. ನನ್ನ ಪ್ರತಿಯೊಂದು ಹೆಜ್ಜೆಯಲ್ಲೂ ಜೊತೆಯಾದ ಅಪ್ಪ ನಿಮಗೆ ನಾನು ಸದಾಋಣಿ.
ನಾನು ಈಗ ೯ನೇ ತರಗತಿ, ನನ್ನ ಅಪ್ಪ ನನಗೆ ಎಲ್ಲವನ್ನೂ ಕಲಿಯುವ ಅವಕಾಶವನ್ನು ಕೊಟ್ಟಿದ್ದಾರೆ. ನಾನು ಬೈಕು ಓಡಿಸಲು ಕಲಿತ್ತಿದ್ದೇನೆ. ಆದರೆ ಈಗ ಅಲ್ಲ! (೨) ಮೂರನೇ ತರಗತಿಯಲ್ಲಿ ಕಲಿತ್ತಿದ್ದೆ. ಅದಕ್ಕೆ ಕಾರಣ ನನ್ನ ಅಪ್ಪ. ನನ್ನ ಅಮ್ಮ ನನ್ನ ಓದಿನ ಬಗ್ಗೆ ತುಂಬಾ ಕಟ್ಟುನಿಟ್ಟು. ಕೆಲವೊಮ್ಮೆ ನನ್ನನ್ನು ಹೊಡೆಯಲು ಬಂದಾಗ ಅಪ್ಪ ಎಂದು ಕರೆದರೆ ಸಾಕು! ನನ್ನ ಅಪ್ಪ ನನ್ನನ್ನು ರಕ್ಷಿಸುತ್ತಾರೆ. ಹೀಗೆ ನಾನು ಯಾವಾಗಲು ತಪ್ಪಿಸಿಕೊಳ್ಳುತ್ತೇನೆ.
ಅಪ್ಪ ಸದಾ ನನ್ನ ಬೆಂಬಲವಾಗಿರುವಿರಿ. ಸದಾ ದಾರಿ ತೋರುವ ಗುರುವಾಗಿದ್ದೀರಿ. ಗುರಿಮುಟ್ಟುವ ಬೆಳಕಾಗಿದ್ದೀರಿ. ಗುರುವಾಗಿ ಮಾರ್ಗದರ್ಶನ ನೀಡಿದಿರಿ. ಸ್ನೇಹಿತನಾಗಿ ಖುಷಿಕೊಟ್ಟಿರಿ. ಇಡುವ ಪ್ರತಿಯೊಂದು ಹೆಜ್ಜೆಗೂ ಪಕ್ಕದಲ್ಲಿ ನಿಂತು ಶಕ್ತಿ ತುಂಬಿ ನಾನು ನಿಮ್ಮನ್ನು ಸದಾ ಪ್ರೀತಿಸುವೆ. ಅಪ್ಪಂದಿರ ದಿನದ ಶುಭಾಶಯಗಳು.
- ಪಿ.ಪಿ. ಕ್ಷಮಾ ಕಾವೇರಮ್ಮ, ೯ನೇ ತರಗತಿ, ಕಾವೇರಿ ಶಾಲೆ, ವೀರಾಜಪೇಟೆ.ನನ್ನ ಪ್ರೀತಿಯ ಅಪ್ಪ
ಅಪ್ಪ... ಅಪ್ಪ... ಅಪ್ಪ...
ನನ್ನ ಪ್ರೀತಿಯ ಅಪ್ಪ
ನನಗೆ ನೀನು ಇಷ್ಟ
ನಿನಗೆ ನಾನು ಇಷ್ಟ
ನಾನು ಶಾಲೆಗೆ ಹೋಗುವೆನು
ಗೆಳೆಯರೊಂದಿಗೆ ಕಲಿಯುವೆನು
ಶಾಲೆಯಿಂದ ಬರುತ್ತಾ ಅಪ್ಪನೊಂದಿಗೆ ಆಡುವೆನು
ಪಾಠವ ಓದಿಸಿ, ಶಿಸ್ತನು ಕಲಿಸಿ
ಪ್ರೀತಿಯ ತೋರುವ ಸೇವಕನು
ಅಪ್ಪ... ಅಪ್ಪ... ಅಪ್ಪ...
ನನ್ನ ಪ್ರೀತಿಯ ಅಪ್ಪ.
ಅಜ್ಜಿಕುಟ್ಟಿರ ತಷನ್ ಸುಬ್ಬಯ್ಯ, ೬ನೇ ತರಗತಿ, ಲಯನ್ಸ್ ಪ್ರಾಥಮಿಕ ಶಾಲೆ, ಗೋಣಿಕೊಪ್ಪಲು.ಅಕ್ಕರೆಯ ಅಪ್ಪಟ ಹೊನ್ನ ಕಲಶ
ನಿನ್ನ ಬೆಚ್ಚನೆಯ ತೋಳಲ್ಲಿ ನೀ ಕೂಸುಮತಿ ಮಾಡಿದ ಹೆಗಲಲ್ಲಿ,
ನಿನ್ನ ಬೆಚ್ಚನೆಯ ಎದೆಗೂಡಲ್ಲಿ ನಾ ಬೆಳೆದೆ ನಿನ್ನ ಅಕ್ಕರೆಯಲ್ಲಿ,
ಸ್ವಾಭಿಮಾನ, ಶಿಸ್ತು, ಧೈರ್ಯ, ಪ್ರಾಮಾಣಿಕತೆಯಿಂದ ಬದುಕಲು ದಾರಿ ತೋರಿದ ನನ್ನ ಅಪ್ಪ.
ಸುಖ-ದುಃಖದಲ್ಲಿ ನೀ ನೋವು ನುಂಗಿ ನಮಗೆ ಪ್ರೀತಿ ಹಂಚಿದ ಅಪ್ಪ
ಸಂಸಾರದ ರಕ್ಷಣೆಗೆ ನಿಂತ ಜವಾಬ್ದಾರ.
ವಿದ್ಯೆ, ಬುದ್ಧಿ ಕಲಿಸಿದ ಧೀರ,
ನೀ ನನ್ನ ಮೊದಲ ಗುರುವಾಗಿ,
ಬದುಕಲು ಕಲಿಸಿದೆ ಏಕಾಂಗಿಯಾಗಿ,
ನಾ ನಡೆಯುವಾಗ ನನ್ನ ಕಾಲಿಗೆ ನಿನ್ನ ಕೈಇಟ್ಟೆ.
ಹಾದಿಯಲ್ಲಿ ಬಣ್ಣದ ಚಿಟ್ಟೆ ಹಿಡಿದು ಕೊಟ್ಟೆ.
ನಾನು ಹೋಗುವಲೆಲ್ಲ ಬೆಂಗಾವಲಾಗಿ ನೀನಿದ್ದೆ.
ಎಲ್ಲಾ ಸಮಯದಲ್ಲೂ ಜೊತೆಗಿದ್ದೆ.
ನೀ ಮನೆಯ ಬೆಳಗುವ ದೀಪ. ನಾ ಅತ್ತಾಗ ನೀ ಅತ್ತೆ.
ಆನೆಬಲ ನೀನಿದ್ದರೆ ನನ್ನ ಜೊತೆ.
ಅಮ್ಮಳಿಗೆ ನಂಬಿಕೆಯ ಗಂಡನಾಗಿ,
ನಮ್ಮಗಳಿಗೆ ಅಕ್ಕರೆಯ ತಂದೆಯಾಗಿ,
ಅಳಿಯನಿಗೆ ಮಗಳು ಕೊಟ್ಟ ಮಾವನಾಗಿ,
ಮೊಮ್ಮಕ್ಕಳಿಗೆ ಮೆಚ್ಚಿನ ತಾತನಾಗಿ,
ಅಪ್ಪ ನೀ ನಡೆದು ಬಂದ ಹಾದಿ ಹಿಡಿಯಲಾಗದು,
ನೀ ಪಟ್ಟ ಕಷ್ಟ ನಾ ಎಂದೂ ಮರೆಯಲಾಗದು.
- ಅಮ್ಮಂಡ ಅನುಪಮಾ ತಿಮ್ಮಯ್ಯ, ವೀರಾಜಪೇಟೆ.ಬದುಕಿಗೆ ಭರವಸೆ ನೀಡುವವರು
ನನ್ನ ಅಪ್ಪ ಅವರ ಕರ್ತವ್ಯಕ್ಕೆ ಹೆಚ್ಚಿನ ಪ್ರಾಶಸ್ತö್ಯ ನೀಡುತ್ತಾರೆ. ನನ್ನ ಅಪ್ಪ ತುಂಬಾ ಕಾಳಜಿಯುಳ್ಳ ವ್ಯಕ್ತಿತ್ವವನ್ನು ಹೊಂದಿದ್ದಾರೆ. ನಮ್ಮ ಇಡೀ ಕುಟುಂಬದಲ್ಲಿ ನನ್ನ ಅಪ್ಪ ನನಗೆ ಅತ್ಯಂತ ಪ್ರೀತಿಯ ವ್ಯಕ್ತಿ. ನನ್ನ ಅಪ್ಪ ನನ್ನ ಆದರ್ಶ ವ್ಯಕ್ತಿ. ನಾನು ಅವರನ್ನು ತುಂಬಾ ಪ್ರೀತಿಸುತ್ತೇನೆ. ನನ್ನ ಆತ್ಮೀಯ ಗೆಳೆಯ ನನ್ನ ಅಪ್ಪ. ಅಮ್ಮ ಬದುಕು ನೀಡಿದರೆ ಆ ಬದುಕಿಗೆ ಭರವಸೆ ತುಂಬುವವನೇ ಅಪ್ಪ.
- ಕೆ. ಆರ್. ಆರಾಧ್ಯ ಪೂವಯ್ಯ, ೬ನೇ ತರಗತಿ, ಜ್ಞಾನಗಂಗಾ ವಸತಿ ಶಾಲೆ, ಅತ್ತೂರು.
ಬದುಕಿಗೆ ಭರವಸೆ ನೀಡುವವರು
ನನ್ನ ಅಪ್ಪ ಅವರ ಕರ್ತವ್ಯಕ್ಕೆ ಹೆಚ್ಚಿನ ಪ್ರಾಶಸ್ತö್ಯ ನೀಡುತ್ತಾರೆ. ನನ್ನ ಅಪ್ಪ ತುಂಬಾ ಕಾಳಜಿಯುಳ್ಳ ವ್ಯಕ್ತಿತ್ವವನ್ನು ಹೊಂದಿದ್ದಾರೆ. ನಮ್ಮ ಇಡೀ ಕುಟುಂಬದಲ್ಲಿ ನನ್ನ ಅಪ್ಪ ನನಗೆ ಅತ್ಯಂತ ಪ್ರೀತಿಯ ವ್ಯಕ್ತಿ. ನನ್ನ ಅಪ್ಪ ನನ್ನ ಆದರ್ಶ ವ್ಯಕ್ತಿ. ನಾನು ಅವರನ್ನು ತುಂಬಾ ಪ್ರೀತಿಸುತ್ತೇನೆ. ನನ್ನ ಆತ್ಮೀಯ ಗೆಳೆಯ ನನ್ನ ಅಪ್ಪ. ಅಮ್ಮ ಬದುಕು ನೀಡಿದರೆ ಆ ಬದುಕಿಗೆ ಭರವಸೆ ತುಂಬುವವನೇ ಅಪ್ಪ.
- ಕೆ. ಆರ್. ಆರಾಧ್ಯ ಪೂವಯ್ಯ, ೬ನೇ ತರಗತಿ, ಜ್ಞಾನಗಂಗಾ ವಸತಿ ಶಾಲೆ, ಅತ್ತೂರು.ಅಪ್ಪಾ ಎಂಬ ಧೈರ್ಯ
ಅಪ್ಪ ಎನ್ನುವ ಪದವೇ ಒಂದು ಧೈರ್ಯ. ನನಗೆ ನನ್ನ ಅಪ್ಪ ತುಂಬಾನೇ ಧೈರ್ಯ. ಅಪ್ಪ ನನ್ನ ಎಲ್ಲಾ ಬೇಕು ಬೇಡಗಳನ್ನು ತಿಳಿದು ಈಡೇರಿಸುತ್ತಾರೆ. ಅಪ್ಪ ನನ್ನನ್ನು ತುಂಬಾ ಪ್ರೀತಿಸುತ್ತಾರೆ. ಅವರು ಎಷ್ಟೇ ಕೋಪಮಾಡಿಕೊಂಡರೂ ಅದರಲ್ಲೂ ಪ್ರೀತಿ ಇರುತ್ತದೆ. ನನಗಂತೂ ಅಪ್ಪ ಎಂದರೆ ತುಂಬಾ ಪ್ರೀತಿ. ನಿಮಗೆ ಅಪ್ಪಂದಿರ ದಿನದ ಶುಭಾಶಯಗಳು. ಐ ಲವ್ ಯೂ ಅಪ್ಪ.
- ವಿ. ಇಂಪನ, ೫ನೇ ತರಗತಿ, ಸಂತ ಜೋಸೆಫರ ಆಂಗ್ಲ ಮಾಧ್ಯಮ ಶಾಲೆ, ಮಡಿಕೇರಿ.ನನ್ನ ಪುಟ್ಟ ಪ್ರಪಂಚ
ಅಪ್ಪ ಎಂದರೆ ನನಗೆ ತುಂಬಾ ಇಷ್ಟ. ಅಪ್ಪನಿಗೂ ನನ್ನ ಕಂಡರೆ ತುಂಬಾ ಕಷ್ಟ. ಅಪ್ಪ ನನಗೋಸ್ಕರ ದುಡಿಯುತ್ತಾರೆ. ನಾನು ಏನನ್ನಾದರೂ ಕೇಳಿದರೆ ನನ್ನ ಅಪ್ಪ ಅದನ್ನು ಕೊಡಿಸುತ್ತಾರೆ. ನನಗೆ ಅಪ್ಪನ ಜೊತೆ ಸಮಯ ಕಳೆಯುವುದು ಎಂದರೆ ತುಂಬಾ ಖುಷಿ. ಅಪ್ಪ ನನ್ನನ್ನು ತುಂಬಾ ಜೋಪಾನ ಮಾಡುತ್ತಾರೆ. ಅಪ್ಪ ನನ್ನನ್ನು ನಾನು ಇಷ್ಟಪಡುವ ಜಾಗಗಳಿಗೆ ಕರೆದುಕೊಂಡು ಹೋಗುತ್ತಾರೆ. ಅಪ್ಪ, ನಾನು ತಪ್ಪು ಮಾಡಿದಾಗ ನನ್ನನ್ನು ತಿದ್ದುತ್ತಾರೆ. ಅಪ್ಪ ಎಂದರೆ ನನ್ನ ಪುಟ್ಟ ಪ್ರಪಂಚ. ನನ್ನ ಮುದ್ದಿನ ಅಪ್ಪನಿಗಾಗಿ ಅಪ್ಪಂದಿರ ದಿನದ ಶುಭಾಶಯಗಳು.
- ಎನ್.ಆರ್. ನಿಹಾರಿಕ, ೫ನೇ ತರಗತಿ, ಸಂತ ಜೋಸೆಫರ ಆಂಗ್ಲ ಮಾಧ್ಯಮ ಶಾಲೆ, ಮಡಿಕೇರಿ.
(ಮುಗಿಯಿತು)ನನ್ನ ಪುಟ್ಟ ಪ್ರಪಂಚ
ಅಪ್ಪ ಎಂದರೆ ನನಗೆ ತುಂಬಾ ಇಷ್ಟ. ಅಪ್ಪನಿಗೂ ನನ್ನ ಕಂಡರೆ ತುಂಬಾ ಕಷ್ಟ. ಅಪ್ಪ ನನಗೋಸ್ಕರ ದುಡಿಯುತ್ತಾರೆ. ನಾನು ಏನನ್ನಾದರೂ ಕೇಳಿದರೆ ನನ್ನ ಅಪ್ಪ ಅದನ್ನು ಕೊಡಿಸುತ್ತಾರೆ. ನನಗೆ ಅಪ್ಪನ ಜೊತೆ ಸಮಯ ಕಳೆಯುವುದು ಎಂದರೆ ತುಂಬಾ ಖುಷಿ. ಅಪ್ಪ ನನ್ನನ್ನು ತುಂಬಾ ಜೋಪಾನ ಮಾಡುತ್ತಾರೆ. ಅಪ್ಪ ನನ್ನನ್ನು ನಾನು ಇಷ್ಟಪಡುವ ಜಾಗಗಳಿಗೆ ಕರೆದುಕೊಂಡು ಹೋಗುತ್ತಾರೆ. ಅಪ್ಪ, ನಾನು ತಪ್ಪು ಮಾಡಿದಾಗ ನನ್ನನ್ನು ತಿದ್ದುತ್ತಾರೆ. ಅಪ್ಪ ಎಂದರೆ ನನ್ನ ಪುಟ್ಟ ಪ್ರಪಂಚ. ನನ್ನ ಮುದ್ದಿನ ಅಪ್ಪನಿಗಾಗಿ ಅಪ್ಪಂದಿರ ದಿನದ ಶುಭಾಶಯಗಳು.
- ಎನ್.ಆರ್. ನಿಹಾರಿಕ, ೫ನೇ ತರಗತಿ, ಸಂತ ಜೋಸೆಫರ ಆಂಗ್ಲ ಮಾಧ್ಯಮ ಶಾಲೆ, ಮಡಿಕೇರಿ.
(ಮುಗಿಯಿತು)