ಯೋಗವು ಭಾರತದ ಪ್ರಾಚೀನ ಸಂಪ್ರದಾಯದ ಅಮೂಲ್ಯ ಕೊಡುಗೆ ಹಾಗೂ ಭಾರತ ಯೋಗಾಸನದ ತವರು ದೇಶವಾಗಿದ್ದು ಸುಮಾರು ೬೦೦೦ ವರ್ಷಗಳಷ್ಟು ಹಳೆಯದಾದ ದೈಹಿಕ, ಮಾನಸಿಕ ಮತ್ತು ಅಧ್ಯಾತ್ಮಿಕ ಅಭ್ಯಾಸವಾಗಿದ್ದು, ಅದು ಈಗ ಭಾರತ ಮಾತ್ರವಲ್ಲ ಪ್ರಪಂಚದ ಮುಂದುವರೆದ ದೇಶಗಳಿಗೆಲ್ಲ ಹರಡಿಕೊಂಡಿದೆ. ಜನರ ಜೀವನಾಡಿಯಾಗಿದೆ ಎಂದರೆ ತಪ್ಪಿಲ್ಲ. ಹಣ, ಅಂತಸ್ತು, ಕೀರ್ತಿ, ಗೌರವ, ಇತ್ಯಾದಿಗಳನೆಲ್ಲ ಪಡೆದು ಮುಂದೇನು? ಎನ್ನುವವರಿಗೆ ಈ ಯೋಗಾಸನ ಉತ್ತರ ನೀಡುತ್ತದೆ. ಅಂದರೆ ಆಂತರಿಕ ಶಾಂತಿಯ ಮುಂದೆ ಹಣ, ಅಂತಸ್ತು, ಕೀರ್ತಿ, ಗೌರವ ಎಲ್ಲವೂ ಶೂನ್ಯ. ಅವುಗಳಿಂದ ಮಾನಸಿಕ ಶಾಂತಿಯು ದೊರೆಯ ಲಾರದು ಎಂದು ಅರಿತು ನಾವು ನಮ್ಮ ಜೀವನದಲ್ಲಿ ಯೋಗವನ್ನು ಅಳವಡಿ ಸಿಕೋಳ್ಳುವುದು ಅವಶ್ಯವಾಗಿದೆ.
ಹಾಗಾದರೆ ಯೋಗ ಎಂದ ರೇನು? ಗ್ರಾಮೀಣ ಭಾಷೆಯಲ್ಲಿ ಹೇಳುವುದಾದರೆ ಯೋಗ ಎಂದರೆ ಅದೃಷ್ಟ ಅಥವಾ ದಿಢೀರನೆ ಏನಾದರು ದೊರಕಿದಾಗ ಅಥವಾ ಸಂಭವಿಸಿದಾಗ ನಮ್ಮ ಜನರು ಹೇಳುವ ಮಾತು. ಅವನ, ಅವಳ ಅದೃಷ್ಟ ಚೆನ್ನಾಗಿತ್ತು ಹಾಗಾಯಿತು ಎಂದು ಹೇಳುವುದುಂಟು. ಆದರೆ ಯೋಗ ಎನ್ನುವ ಪದವು ಸಂಸ್ಕೃತ ಮೂಲ ಧಾತುವಾದ ‘ಯುಜ್’ ಎಂಬ ಪದದಿಂದ ಬಂದಿದೆ. ಇಲ್ಲಿ ಯೋಗವೆಂದರೆ ಒಟ್ಟಿಗೆ ಸೇರಿಸುವುದು, ಸಂಧಿಸುವುದು, ಆಸಕ್ತಿ ವಹಿಸು ಎಂಬ ಅರ್ಥ ಕೊಡುತ್ತದೆ. ನಮ್ಮ ಶರೀರದೊಂದಿಗೆ ಚಂಚಲದಿAದ ಕೊಡಿರುವ ಮರ್ಕಟದಂತಹ ಮನಸ್ಸನ್ನು ಸೇರಿಸು ಎಂದು ಹೇಳಬಹುದಾಗಿದೆ. ಹಾಗಾಗಿ ವೇದೋಪನಿಷತ್ತಿನಲ್ಲಿ “ಯೋಗಃ ಚಿತ್ತ ವೃತ್ತಿನಿರೋದ” ಎಂದರೆ ಮನಸ್ಸನ್ನು ನಿಯಂತ್ರಿಸುವುದು ಎಂದು ಸ್ವಷ್ಟವಾಗಿ ಹೇಳಿದೆ.
“ಶರೀರ ಮಾಧ್ಯಮಃ ಕುಲುಸರ್ವತ್ರ ಸಾಧಂ” ಅಂದರೆ ಸ್ವಸ್ಥ ಶರೀರವು ಸ್ವಸ್ಥ ಮನಸ್ಸನ್ನು ಹೋಂದಿರಬೇಕು. ನಾವು ಪ್ರತಿನಿತ್ಯ ಮಾಡುವ ಕ್ರಿಯೆ, ಕೆಲಸಗಳ ಮೂಲಕ ಮನಸ್ಸು ಮತ್ತು ಶರೀರವನ್ನು ಸಮತೋಲನದಲ್ಲಿಡಲು ಯೋಗವು ಅತ್ಯವಶ್ಯ. ನಮ್ಮ ದಿನನಿತ್ಯದ ಬದುಕಿನಲ್ಲಿ ನಾವು ಶರೀರ ಶುದ್ಧವಾಗಲು ಪ್ರತಿ ದಿನ ಹೇಗೆ ಸ್ನಾನ ಮಾಡುತ್ತೇವೆಯೋ ಹಾಗೆಯೇ ಮನಸ್ಸು ಶುದ್ಧವಾಗಿಟ್ಟುಕೊಳ್ಳಲು ಪ್ರತಿ ದಿನ ಸ್ವಲ್ಪ ಸಮಯವಾದರೂ ಯೋಗ ಮಾಡುವುದರಿಂದ ದೇಹ ಮತ್ತು ಮನಸ್ಸು ಚೆನ್ನಾಗಿರುತ್ತದೆ. ಯೋಗ ಮಾಡಲು ಸಮಯವಿಲ್ಲ ಎಂದು ಮರೆತರೆ, ಮುಂದೆ ಹಲವಾರು ರೋಗಗಳನ್ನು ತಂದುಕೊAಡು ಆಸ್ಪತ್ರೆಗಳಿಗೆ ಲಕ್ಷಾಂತರ ಹಣವನ್ನು ಸುರಿಯುವ ಬದಲಾಗಿ, ಪ್ರತಿ ದಿನವು ಕನಿಷ್ಟ ೨೦ ನಿಮಿಷಗಳ ಕಾಲ ತಮಗೆ ತಾವೇ ಬಿಡುವು ಮಾಡಿಕೊಂಡು ಆನಂದದಿAದ ಯೋಗವನ್ನು ಅಳವಡಿ ಸಿಕೊಂಡಾಗÀ ಉತ್ತಮ ಆರೋಗ್ಯವನ್ನು ಕಾಪಾಡಿ ಕೊಳ್ಳುವುದರ ಜೊತೆಗೆ ಮನೆಯ ಸದಸ್ಯರ ಜೊತೆ ಒಳ್ಳೆಯ ಬಾಂಧವ್ಯವನ್ನು ವೃದ್ಧಿ ಸಿಕೊಳ್ಳಬಹುದು.
ಇಂದಿನ ಯಾಂತ್ರಿಕ ಬದುಕಿ ನಲ್ಲಿ ಮಾನ ಸಿಕ ಖಿನ್ನತೆ, ಒತ್ತಡಗ ಳಿಗೆ ಒಳಗಾಗಿ ಮಾನಸಿಕ ನೆಮ್ಮದಿಯನ್ನು ಕಳೆದು ಕೊಳ್ಳುತ್ತಿದ್ದೇವೆ. ಹಾಗಾಗಿ ಆಂತರಿಕ ಜೀವನವನ್ನು ಸರಿಪಡಿಸಿ ವ್ಯಕ್ತಿ ವ್ಯಕ್ತಿಗಳ ಮಧ್ಯ ಇದ್ದ ಪರಸ್ಪರ ದ್ವೇಷ, ಅಸೂಯೆ, ವ್ಯಷಮ್ಯಗಳನ್ನು ಮರೆಸಿ ಆ ಜಾಗದಲ್ಲಿ ಶಾಂತಿ, ನೆಮ್ಮದಿ, ಸಾಮರಸ್ಯ ಮೂಡಿಸುವುದು ಹಾಗೂ ನಮ್ಮ ಮೌಲ್ಯವನ್ನು ಎತ್ತಿಹಿಡಿಯುವಲ್ಲಿ ಯೋಗಕ್ಕಿಂತ ಉತ್ತಮ ಔಷಧಿ ಮತ್ತೊಂದಿಲ್ಲ. ನಮ್ಮ ಜೀವನದ ನೋವು-ನಲಿವು, ಶಾಂತಿ-ಅಶಾAತಿಯAತಹ ಮಾನಸಿಕ ದ್ವಂದ್ವಗಳು ಉಂಟಾದಾಗ ಎಲ್ಲವನ್ನು ಸಮಾನವಾಗಿ ಸ್ವೀಕರಿಸುವ ಮನೋಬಲ ನಿರಂತರ ಯೋಗಾಭ್ಯಾಸದಿಂದ ಮಾತ್ರ ಸಾಧ್ಯ. ಆದ್ದರಿಂದ ಪ್ರತಿವರ್ಷ ಜೂನ್ ೨೧ ರಂದು ಅಂರ್ರಾಷ್ಟಿçÃಯ ಯೋಗ ದಿನವನ್ನಾಗಿ ಭಾರತದಲ್ಲಿ ೨೦೧೪ ರಿಂದ ಆಚರಿಸುತ್ತಿರುವುದನ್ನು ನೋಡಬಹುದು. ತಾ. ೨೧ ಏಕೆ ಎನ್ನುವುದಾದರೆ, ಜಗತ್ತಿನ ಬಹುಭಾಗವು ಆ ದಿನ ಉತ್ತರಗೋಳಾರ್ಧದಲ್ಲಿ “ಅತಿ ದೊಡ್ಡ ದಿನ”ವಾಗಿದ್ದು, ಬಹಳ ತಂಪಾದ ವಾತಾವರಣವಿರುತ್ತದೆ ಎನ್ನುವುದೇ ಮುಖ್ಯ ಕಾರಣವಾಗಿದೆ.
ಲೇಖಕರು
ಡಾ. ದೀಪು ಪಿ, ಪ್ರಾಂಶುಪಾಲರು,
ವಿದ್ಯಾವರ್ದಕ ಕಾನೂನು ಕಾಲೇಜು, ಮೈಸೂರು.