ಮಡಿಕೇರಿ, ಜೂ. ೨೧: ಒಡಿಶಾದ ಭುವನೇಶ್ವರದಲ್ಲಿ ಜರುಗಿದ ೬೨ನೇ ರಾಷ್ಟಿçÃಯ ಅಂರ‍್ರಾಜ್ಯ ಸೀನಿಯರ್ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಜಿಲ್ಲೆಯ ಯುವತಿ ತೀತರಮಾಡ ಸಿಂಚಲ್ ಕಾವೇರಮ್ಮ ಅಮೋಘ ಸಾಧನೆ ತೋರಿದ್ದಾರೆ. ಈ ಸಾಧನೆಯೊಂದಿಗೆ ಸಿಂಚಲ್ ಮುಂದಿನ ಅಕ್ಟೋಬರ್‌ನಲ್ಲಿ ಚೈನಾದಲ್ಲಿ ಜರುಗಲಿರುವ ಏಷ್ಯನ್ ಗೇಮ್ಸ್ನಲ್ಲಿ ಭಾಗವಹಿಸಲು ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಮಹಿಳೆಯರ ೪೦೦ ಮೀಟರ್ ಹರ್ಡಲ್ಸ್ನಲ್ಲಿ ಸಿಂಚಲ್ ಬೆಳ್ಳಿಯ ಪದಕಗಳಿಸಿದ್ದಾರೆ.

(ಮೊದಲ ಪುಟದಿಂದ) ಇದು ಏಷ್ಯನ್ ಗೇಮ್ಸ್ಗೆ ಈಕೆ ಅರ್ಹತೆ ಪಡೆಯಲು ಸಹಕಾರಿಯಾಗಿದೆ. ಇದರೊಂದಿಗೆ ಮಿಕ್ಸೆಡ್ ರಿಲೇಯಲ್ಲಿ ಇವರು ಕಂಚಿನ ಪದಕದ ಸಾಧನೆ ತೋರಿದ್ದಾರೆ. ಈ ಹಿಂದೆಯೂ ಇವರು ಅಥ್ಲೆಟಿಕ್ಸ್ನಲ್ಲಿ ಸಾಧನೆ ತೋರಿದ್ದು, ರಾಜ್ಯದ ಪರ ಸಾಕಷ್ಟು ಪದಕಗಳಿಸಿದ್ದಾರೆ. ಸಿಂಚಲ್ ರಾಷ್ಟಿçÃಯ ತರಬೇತುದಾರ ಬೆಂಗಳೂರಿನಲ್ಲಿರುವ ಬೊಳ್ಳಂಡ ಅಯ್ಯಪ್ಪ ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇವರು ನಲ್ಲೂರು ಗ್ರಾಮದ ತೀತರಮಾಡ ರವಿ ಹಾಗೂ ರಶ್ಮಿ (ತಾಮನೆ ಕುಪ್ಪಂಡ) ದಂಪತಿಯ ಪುತ್ರಿ.