ಮಡಿಕೇರಿ, ಜೂ. ೨೦: ತರಾತುರಿಯಲ್ಲಿ ಹೊಸ ರಸ್ತೆ ಮಾಡಿಯಾಯಿತು. ಮೂರೇ ದಿನದಲ್ಲಿ ರಸ್ತೆಯ ಡಾಂಬರು ಕಿತ್ತು ಬಂತು. ಐದನೇ ದಿನದಲ್ಲಿ ಕಿತ್ತು ಬಂದ ಡಾಂಬರು ಜಲ್ಲಿ ಪುಡಿಗಳನ್ನು ಗುಡಿಸಿ ಗುಡ್ಡೆ ಹಾಕಲಾಯಿತು. ಇದೀಗ ಮತ್ತೆ ಅದೇ ರಸ್ತೆಯನ್ನು ಬಗೆದು ತೆಗೆಯುವ ಕಾಮಗಾರಿ ಆರಂಭಗೊAಡಿದೆ.!
ಮಡಿಕೇರಿ ನಗರಸಭಾ ವ್ಯಾಪ್ತಿಯ ಗೌಳಿ ಬೀದಿ ಹಾಗೂ ಪೆನ್ಷನ್ ಲೇನ್ ರಸ್ತೆಯನ್ನು ತರಾತುರಿಯಂದ ನಿರ್ಮಿಸಲಾಗಿದ್ದು, ಕಳಪೆ ಕಾಮಗಾರಿಯಿಂದಾಗಿ ಮೂರೇ ದಿನಗಳಲ್ಲಿ ರಸ್ತೆಗೆ ಹಾಕಲಾಗಿರುವ ಡಾಂಬರು ಸಹಿತ ಜಲ್ಲಿಕಲ್ಲುಗಳು ಕಿತ್ತು ಬಂದಿವೆ. ಈ ಬಗ್ಗೆ ಪತ್ರಿಕೆಯಲ್ಲಿ ಪ್ರಕಟಗೊಂಡ ಬೆನ್ನಲ್ಲೇ ನಾಗರಿಕರು ವಿರೋಧ ವ್ಕಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಸಂಬAಧಿಸಿದ ಗುತ್ತಿಗೆದಾರರು ಕಿತ್ತು ಬಂದ ಜಲ್ಲಿ ಕಲ್ಲು ಪುಡಿಗಳನ್ನು ಗುಡಿಸಿ ತೆಗೆಯುವ ಕೆಲಸವನ್ನು ನಿನ್ನೆಯಿಂದ ಆರಂಭಿಸಿದ್ದರು. ಆದರೆ, ಇಂದು ಗೌಳಿಬೀದಿಯಲ್ಲಿ ಹೊಸ ರಸ್ತೆಯನ್ನು ಬಗೆದು ತೆಗೆಯುವ ಕೆಲಸ ಆರಂಭಗೊAಡಿದೆ.
ಕಾಮಗಾರಿಯ ಗುತ್ತಿಗೆಯನ್ನು ಮೈಸೂರಿನ ಗುತ್ತಿಗೆದಾರರು ಪಡೆದುಕೊಂಡಿರುವುದಾಗಿ ಹೇಳಲಾಗುತ್ತಿದ್ದು, ಸ್ಥಳೀಯ ನಗರಸಭಾ ಸದಸ್ಯರ ಗಮನಕ್ಕೆ ಬಾರದೆ ಕಾಮಗಾರಿ ನಿರ್ವಹಿಸಿರುವದಾಗಿ ಹೇಳಲಾಗುತ್ತಿದೆ. ತನ್ನ ಗಮನಕ್ಕೆ ಬಾರದೆ ಕಾಮಗಾರಿ ನಡೆಸಿರುವದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ನಗರಸಭಾ ಸದಸ್ಯ ರಾಜೇಶ್ ಯಲ್ಲಪ್ಪ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡಿದ್ದು, ಕಾಮಗಾರಿಯ ಬಿಲ್ ತಡೆ ಹಿಡಿದಿರುವದಾಗಿ ತಿಳಿದು ಬಂದಿದೆ. ಗುಣ ಮಟ್ಟದ ಕಾಮಗಾರಿ ನಿರ್ವಹಿಸುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ಇದೀಗ ಮತ್ತೆ ಅದೇ ರಸ್ತೆಯ ಮರು ಡಾಂಬರೀಕರಣ ಕಾಮಗಾರಿ ನಡೆಯುತ್ತಿದೆ..! ಈ ಕಾಮಗಾರಿಯ ಗುಣ ಮಟ್ಟ ಯಾವ ರೀತಿಯದ್ದಾಗಿರುತ್ತದೋ ಎಂಬದು ನಾಗರಿಕರ ಮರು ಪ್ರಶ್ನೆಯಾಗಿದೆ..!