*ಗೋಣಿಕೊಪ್ಪ, ಜೂ. ೨೦: ಆದಿವಾಸಿಗಳ ಬೇಡಿಕೆಗಳನ್ನು ಒಂದು ತಿಂಗಳ ಒಳಗೆ ಈಡೇರಿಸುವ ಭರವಸೆ ಯೊಂದಿಗೆ ಜಿಲ್ಲಾಧಿಕಾರಿಗಳು ನೀಡಿದ ಲಿಖಿತ ಭರವಸೆಗೆ ಪ್ರತಿಭಟನೆಯನ್ನು ಒಂದು ತಿಂಗಳ ಕಾಲ ಮುಂದೂ ಡಲಾಗಿದೆ ಎಂದು ಆದಿವಾಸಿ ಜಮ್ಮ ಪಾಳೆ ಹಕ್ಕು ಸ್ಥಾಪನಾ ಸಮಿತಿ ಅಧ್ಯಕ್ಷ ಜೆ.ಕೆ ತಿಮ್ಮ ತಿಳಿಸಿದ್ದಾರೆ.

ನಾಗರಹೊಳೆ ವಲಯ ಅರ ಣ್ಯಾಧಿಕಾರಿಗಳ ಕಚೇರಿಯ ಎದುರು ಆದಿವಾಸಿಗಳು ಅಭಯಾರಣ್ಯದಲ್ಲಿ ಶತಮಾನಗಳಿಂದ ವಾಸಿಸುತ್ತಿರುವ ಮೂಲನಿವಾಸಿ ಆದಿವಾಸಿ ಜನರು ತಮ್ಮ ಸಂವಿಧಾನ ಬದ್ಧ ಹಕ್ಕಾಗಿರುವ ೨೦೦೬ ರ ಅರಣ್ಯ ಹಕ್ಕು ಕಾಯ್ದೆಯ ಅಡಿಯಲ್ಲಿ ಬರುವ ವೈಯಕ್ತಿಕ ಹಕ್ಕು ಸಮುದಾಯ ಹಕ್ಕು, ಸಮುದಾಯ ಸಂಪನ್ಮೂಲದ ಹಕ್ಕು, ವಾಸಸ್ಥಾನದ ಹಕ್ಕುಗಳನ್ನೊಳಗೊಂಡAತೆ ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆಯಲ್ಲಿ ನಿರತರಾಗಿದ್ದರು.

ಮಂಗಳವಾರ ಅಧಿಕಾರಿಗಳು ಪ್ರತಿಭಟನೆಗಾರರ ಮನವೊಲಿಸಿದ ಹಿನ್ನೆಲೆ ನಾಗರಹೊಳೆ ಆದಿವಾಸಿ ಜಮ್ಮ ಪಾಳೆ ಹಕ್ಕು ಸ್ಥಾಪನಾ ಸಮಿತಿ ತಮ್ಮ ಹೋರಾಟವನ್ನು ತಾತ್ಕಾಲಿಕವಾಗಿ ಹಿಂಪಡೆದುಕೊAಡು ಜಿಲ್ಲಾ ಅಧಿಕಾರಿಗಳ ಮನವಿಗೆ ಮಣಿದಿದೆ.

ಜಿಲ್ಲಾಧಿಕಾರಿಗಳ ಪರವಾಗಿ ಅಧಿಕಾರಿಗಳು ಬಂದು ಪ್ರತಿಭಟನೆ ಗಾರರ ಮನವೊಲಿಸುವ ಮೂಲಕ ಹೋರಾಟವನ್ನು ಹಿಂಪಡೆಯುವAತೆ ಮತ್ತು ತಮ್ಮ ಬೇಡಿಕೆಗಳನ್ನು ಈಡೇರಿಸಲು ಒಂದು ತಿಂಗಳ ಕಾಲ ಅವಕಾಶವನ್ನು ನೀಡುವಂತೆ ಮನವಿ ಮಾಡಿದ ಪ್ರಕಾರ ಪ್ರತಿಭಟನೆ ಹಿಂಪಡೆಯಲಾಗಿದೆ.