ಮಡಿಕೇರಿ, ಜೂ. ೨೧: ಚುನಾಯಿತ ಪ್ರತಿನಿಧಿಗಳು ಜನರ ಸೇವೆ ಮಾಡುವ ಮೂಲಕ ಸಿಕ್ಕ ಅವಕಾಶವನ್ನು ಸದುದ್ದೇಶಕ್ಕಾಗಿ ಬಳಸಿಕೊಂಡು ಆತ್ಮತೃಪ್ತಿ ಹೊಂದಬೇಕೆAದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಹೇಳಿದರು.
ಇಲ್ಲಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ಮಂದಿರದಲ್ಲಿ ವಿಶ್ವ ಯೋಗ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ಅವರು, ಕ್ಷೇತ್ರದ ಜಿಲ್ಲೆಯ ಅಭಿವೃದ್ಧಿಗಾಗಿ ಎಲ್ಲರ ಸಹಕಾರ ಹಾಗೂ ಮಾರ್ಗದರ್ಶನ ಪಡೆಯುವುದಾಗಿ ಹೇಳಿದರು.
ರಾಜಕಾರಣಕ್ಕೆ ವಿದ್ಯಾವಂತರು ಹೆಚ್ಚಾಗಿ ಬರಬೇಕು ಎಂದು ಯುವಕರಿಗೆ ಶಾಸಕ ಮಂಥರ್ ಗೌಡ ಇದೇ ಸಂದರ್ಭ ಕರೆ ನೀಡಿದರು.
ಬ್ರಹ್ಮಕುಮಾರಿ ಆಶ್ರಮದ ಹಿರಿಯರಾದ ಬಿ.ಕೆ. ಗಾಯತ್ರಿ ಹಾಗೂ ಆಶ್ರಮದ ಮುಖ್ಯಸ್ಥರಾದ ಬಿ.ಕೆ. ಧನಲಕ್ಷಿö್ಮ ಅವರಗಳು ಆಶೀರ್ವಚನ ನೀಡಿದರು.
ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ. ಎಂ.ಕಾರ್ಯಪ್ಪ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಡಾ.ಪುಷ್ಪಾ ಕುಟ್ಟಣ್ಣ ಮಾತನಾಡಿ, ಸಮಾಜದಲ್ಲಿ ಕಾಡುತ್ತಿರುವ ಅನೇಕ ಸಮಸ್ಯೆಗಳ ಪರಿಹಾರಕ್ಕೆ ಜಿಲ್ಲೆಯ ಜನರು ಶಾಸಕರೊಂದಿಗೆ ಕೈಜೋಡಿಸಬೇಕಿದೆ ಎಂದು ಹೇಳಿದರು.