*ಗೋಣಿಕೊಪ್ಪ, ಜೂ. ೨೧: ಬಾಳೆಲೆ ಫಾರ್ಮರ್ಸ್ ಅಸೋಸಿಯೇಷನ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಳಮೇಂಗಡ ಬೋಸ್ ಮಂದಣ್ಣ ಗೆಲುವು ಸಾಧಿಸಿ ದ್ದಾರೆ. ಬಾಳೆಲೆ ಫಾರ್ಮರ್ಸ್ ಅಸೋಸಿ ಯೇಷನ್ ಸಭಾಂಗಣದಲ್ಲಿ ಮಂಗಳವಾರ ನಡೆದ ಪದಾಧಿಕಾರಿ ಗಳು ಮತ್ತು ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು.

ಉಪಾಧ್ಯಕ್ಷರಾಗಿ ಅಡ್ಡೇಂಗಡ ನವೀನ್, ಕಾರ್ಯದರ್ಶಿಯಾಗಿ ಆದೇಂಗಡ ಪುಟ್ಟು ಮಂದಣ್ಣ, ಖಚಾಂಚಿಯಾಗಿ ಆದೇಂಗಡ ಚಂದ್ರ ಶೇಖರ್, ಕ್ರೀಡಾ ಕಾರ್ಯದರ್ಶಿ ಯಾಗಿ ಕಾಡ್ಯಮಾಡ ಸುಬ್ಬಯ್ಯ, ನಿರ್ದೇಶಕರುಗಳಾಗಿ ಅಳಮೇಂಗಡ ದಿಲ್ಲು ತಿಮ್ಮಯ್ಯ, ಪೊಡಮಾಡ ಗಿರೀಶ್ ಮಾಚಯ್ಯ, ಮಾಚಂಗಡ ರೋಷನ್, ಮಲಚಿರ ಅನೀಶ್ ಬೋಪಣ್ಣ, ಗೆಲುವು ಸಾಧಿಸಿದ್ದಾರೆ. ಚುನಾವಣಾ ಅಧಿಕಾರಿಗಳಾಗಿ ಶಿಕ್ಷಕರುಗಳಾದ ಸುಬ್ಬಯ್ಯ, ರಾಘವೇಂದ್ರ, ಕಾಂಡೇರ ಡಾನ್ ಕುಶಾಲಪ್ಪ ಕಾರ್ಯನಿರ್ವಹಿಸಿದರು.