ಮಡಿಕೇರಿ, ಜೂ. ೨೦: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ವತಿಯಿಂದ ಕೊಡಗು, ಮಂಗಳೂರು, ಉಡುಪಿ ಜಿಲ್ಲೆಗಳನ್ನೊಳಗೊಂಡ ೧೯ ವರ್ಷದೊಳಗಿನವರ ಮಂಗಳೂರು ವಲಯ ಕ್ರಿಕೆಟ್ ತಂಡಕ್ಕೆ ಆಟಗಾರರ ಆಯ್ಕೆ ಪ್ರಕ್ರಿಯೆ ಹಮ್ಮಿಕೊಳ್ಳಲಾಗಿದೆ. ಕೊಡಗು ಜಿಲ್ಲಾ ಕ್ರಿಕೆಟ್ ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದ್ದು, ತಾ.೨೨ರಂದು ಮಡಿಕೇರಿಯ ಕೊಡಗು ವಿದ್ಯಾಲಯ ಆಟದ ಮೈದಾನದಲ್ಲಿ ನಡೆಯಲಿದೆ. ಬೆಳಿಗ್ಗೆ ೮ ಗಂಟೆಯಿAದ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ೧-೯-೨೦೦೪ ಹಾಗೂ ನಂತರದಲ್ಲಿ ಜನಿಸಿದ ಆಟಗಾರರು ಜನನ ಪ್ರಮಾಣ ಪತ್ರ, ಬಿಳಿ ಬಣ್ಣದ ಜರ್ಸಿ, ಶೂಗಳನ್ನು ಧರಿಸಿ ಭಾಗವಹಿಸಬಹುದಾಗಿದೆ. ೧೬ ವರ್ಷಕ್ಕಿಂತ ಕೆಳಗಿನವರು ಭಾಗವಹಿಸುವಂತಿಲ್ಲ. ಹೆಚ್ಚಿನ ಮಾಹಿತಿಗೆ ದಾಮೋದರ ಗೌಡ (೯೯೪೫೨೭೩೬೮೮) ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ವಾಂಡರ‍್ಸ್ ಕಾರ್ಯದರ್ಶಿ ರಘು ಮಾದಪ್ಪ ತಿಳಿಸಿದ್ದಾರೆ.