ಮಡಿಕೇರಿ, ಜೂ. ೨೦: ನಾಡಿನ ಜೀವನದಿ ಕಾವೇರಿ ಉಗಮಸ್ಥಾನ ತಲಕಾವೇರಿಯನ್ನು ಪ್ರೇಕ್ಷಣೀಯ ತಾಣಗಳ ಪಟ್ಟಿಯಿಂದ ಕೈಬಿಟ್ಟು ಪುಣ್ಯಕ್ಷೇತ್ರವಾಗಿ ಪರಿಗಣಿಸಬೇಕೆಂದು ಭಾಗಮಂಡಲದ ಕನ್ನಿಕಾವೇರಿ ಸೇವಾ ಟ್ರಸ್ಟ್ ಆಗ್ರಹಿಸಿದೆ.
ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟ್ರಸ್ಟ್ ಸಂಚಾಲಕ ಮುಲ್ಲೇಂಗಡ ಶಂಕರಿ ಪೊನ್ನಪ್ಪ, ಲೋಕಪಾವನೆಯಾದ ಕಾವೇರಿಗೆ ತನ್ನದೇ ಆದ ವಿಶೇಷತೆಯಿದ್ದು, ಪ್ರೇಕ್ಷಣೀಯ ತಾಣವಾಗಿ ಪರಿಗಣಿಸಿರುವುದರಿಂದ ಪ್ರವಾಸಿಗರ ಅಕ್ರಮ ಚಟುವಟಿಕೆಗಳಿಗೆ ಕಾರಣವಾಗುತ್ತಿದೆ ಎಂದು ಹೇಳಿದರು. ಮದ್ಯಸೇವನೆ, ಮೋಜು ಮಸ್ತಿ, ಅಸಭ್ಯ ನಡವಳಿಕೆ, ಸ್ವೇಚ್ಛೆಯ ಉಡುಪು ಧಾರಣೆಗಳು ಕಾವೇರಿ ಕ್ಷೇತ್ರಕ್ಕೆ ಒಪ್ಪತಕ್ಕುದಲ್ಲ ಎಂದು ಹೇಳಿದರು.
ಕಾವೇರಿ ಮಾತೆಯು ಲೋಕಪಾವನೆಯಾಗಿ ಅಗಸ್ತö್ಯ ಮಹರ್ಷಿಗೆ ಗೋಚರವಾದ ಬಳಿಕ ಅಂತರ್ಗಾಮಿಯಾಗಿ ಹರಿಯುತ್ತಾಳೆ ಎಂದು ಪುರಾಣ ಹೇಳುತ್ತದೆ. ಆದರೆ, ಹಾಗೆ ಅಂತರ್ಗಾಮಿಯಾಗಿ ಹರಿಯುವ ಮಾರ್ಗದಲ್ಲೇ ಶೌಚಾಲಯ ಮತ್ತು ಮಹಿಳೆಯರ ವಿಶ್ರಾಂತಿ ಕೊಠಡಿ ನಿರ್ಮಿಸಲಾಗಿದೆ. ದೇವಾಲಯದ ಉಸ್ತುವಾರಿ ಮಂಡಳಿಯು ಪರಿಶೀಲನೆ ನಡೆಸಿ, ಶೌಚಾಲಯವನ್ನು ಸ್ಥಳಾಂತರಿಸಬೇಕು. ಆ ಮೂಲಕ ಜನರು ಭಯಭಕ್ತಿಯಿಂದ ನಡೆದುಕೊಳ್ಳಲು ಮತ್ತು ಸಂಪ್ರದಾಯಗಳನ್ನು ಪಾಲಿಸಲು ಅನುವು ಮಾಡಿಕೊಡಬೇಕೆಂದು ಅವರು ಕೋರಿದರು.
ಹಿಂದಿನ ಸಂಪ್ರದಾಯದAತೆ ದೇವಾಲಯದ ಉಸ್ತುವಾರಿಯನ್ನು ಸ್ಥಳೀಯ ಕುಟುಂಬಗಳಿಗೆ ನೀಡಬೇಕು. ಇದರಿಂದ ಸಾಮರಸ್ಯ, ಒಗ್ಗಟ್ಟು ನೆಲೆಸಲು ಸಾಧ್ಯವಾಗುತ್ತದೆ ಎಂದು ಶಂಕರಿ ಪೊನ್ನಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು. ಗೋಷ್ಠಿಯಲ್ಲಿ ಕನ್ನಿ ಕಾವೇರಿ ಸೇವಾ ಟ್ರಸ್ಟ್ ಅಧ್ಯಕ್ಷ ಚೇಂದAಡ ಪೂವಯ್ಯ, ಕಾರ್ಯದರ್ಶಿ ಪುಚ್ಚಿಮಂಡ ಅಪ್ಪಯ್ಯ ಮತ್ತು ಕಾನೂನು ಸಲಹೆಗಾರರಾದ ಕಾವೇರಿ ಅಪ್ಪಯ್ಯ ಉಪಸ್ಥಿತರಿದ್ದರು.