ಕೊಲಂಬಿಯಾ ದೇಶದ ಸೇನಾ ಪಡೆಯನ್ನು ನೀವು ಈಗ ಏನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರೆ ಅವ ರಿಂದ ಬರುವ ಉತ್ತರ, ನಾವು ನಾಯಿಯೊಂದನ್ನು ಕಾಡಿನಲ್ಲಿ ಹುಡುಕಾಡು ತ್ತಿದ್ದೇವೆ. ಜಗತ್ತಿನ ಪ್ರಮುಖ ಸೇನಾ ಪಡೆಗೆ ಇದೆಂಥಾ ನಾಯಿ ಹುಡುಕುವ ಕೆಲಸ ಎಂದು ಅಚ್ಚರಿ ಪಡುವವ ರಿಗೆ ಮತ್ತಷ್ಟು ಆಶ್ಚರ್ಯ ಎನಿಸುವ ಮಾಹಿತಿ ಲಭಿಸುತ್ತಿದೆ.
ಈ ನಾಯಿ ಅಂತಿಥ ನಾಯಿ ಯಲ್ಲ. ಈ ನಾಯಿ ಕೊಲಂಬಿಯಾ ಸೇನಾಪಡೆಯ ಶ್ವಾನದಳದ ಪ್ರಮುಖ ಸದಸ್ಯ. ಮಾತ್ರವಲ್ಲ. ಇತ್ತೀಚೆಗೆ ಅಮೆಜಾನ್ ದಟ್ಟಕಾನನ ದಲ್ಲಿ ವಿಮಾನವೊಂದು ಪತನವಾಗಿ ಮೂವರು ಸಾವನ್ನಪ್ಪಿ, ಅದರಲ್ಲಿದ್ದ ನಾಲ್ವರು ಕಂದಮ್ಮಗಳು ೪೦ ದಿನಗಳ ಕಾಲ ಜೀವಂತವಾಗಿದ್ದರಲ್ಲ ಆ ಮಕ್ಕಳನ್ನು ಕಾಡಿನಲ್ಲಿ ಕಂಡು ಹುಡುಕಿ ಮಕ್ಕಳು ಜೀವಂತವಾ ಗಿದ್ದಾರೆ ಎಂದು ನಿರೂಪಿಸಿದ ಶ್ವಾನ ಇದು. ಇಷ್ಟು ಮಾತ್ರ ಅಲ್ಲ. ಕಾಡಿನಲ್ಲಿ ನಾಲ್ವರೂ ಮಕ್ಕಳಿಗೆ ಅನೇಕ ದಿನಗಳ ಕಾಲ ಜತೆಯಾಗಿ ಮಕ್ಕಳ ಲವಲವಿಕೆಗೂ ಕಾರಣ ವಾಗಿದ್ದ ನಾಯಿ ಇದು.
ಮಕ್ಕಳು ಪತ್ತೆಯಾಗಿದ್ದರೂ ಮಕ್ಕಳನ್ನು ಹುಡುಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಾಯಿ ಮಾತ್ರ ಕಾಡಿನೊಳಗೆ ನಾಪತ್ತೆಯಾಗಿತ್ತು. ಇಡೀ ಜಗತ್ತೇ ಮಕ್ಕಳ ಪತ್ತೆ ಯಿಂದಾಗಿ ಸಂಭ್ರಮಿಸುವ ಹೊತ್ತಿ ನಲ್ಲಿಯೇ ಮಕ್ಕಳನ್ನು ಹುಡುಕುವಲ್ಲಿ ಕಾರಣವಾದ ನಾಯಿಯ ಪತ್ತೆಗಾಗಿ ಇದೀಗ ಕೊಲಂಬಿಯಾ ಸೇನಾ ಪಡೆ ಮುಂದಾಗಿದೆ.
ಮಕ್ಕಳ ಪತ್ತೆಗಾಗಿ ಕೊಲಂ ಬಿಯಾ ಸರ್ಕಾರ ಪ್ರಾರಂಭಿಸಿದ್ದ ಆಪರೇಷನ್ ಹೋಪ್ ಮತ್ತೆ ಪ್ರಾರಂಭವಾಗಿದೆ. ಈ ಬಾರಿ ನಾಯಿಯ ಪತ್ತೆಗಾಗಿ ೧೫೦ ಸೈನಿಕರು ದಟ್ಟ ಕಾಡು ಅಲೆಯುತ್ತಿದ್ದಾರೆ. ಜಗತ್ತು ಮತ್ತೊಮ್ಮೆ ಪ್ರಾರ್ಥಿಸುತ್ತಿದೆ. ದೇವರೇ ನಾಯಿಯನ್ನು ಹುಡುಕಿಕೊಡು..
ಆ ನಾಯಿಯ ಹೆಸರು ವಿಲ್ಸನ್
ಆರು ವರ್ಷ ಪ್ರಾಯದ ಜರ್ಮನ್ ಶೆಫರ್ಡ್ ತಳಿಯ ಈ ನಾಯಿ ಕೊಲಂಬಿಯಾ ಸೇನೆಯ ಶ್ವಾನದಳದ ಪ್ರಮುಖ ಸದಸ್ಯ. ಅತಿ ಚುರುಕು, ಸೂಕ್ಷö್ಮಮತಿಯ ಶ್ವಾನವಿದು. ಮೇ ೧೦ ರಂದು ಅಮೆಜಾನ್ ಕಾಡಿನಲ್ಲಿ ಸೆಸೆನಾ ೨೦೬ ಎಂಬ ಲಘು ವಿಮಾನ ಪತನವಾಗಿ ನಾಲ್ವರು ಮಕ್ಕಳು ನಾಪತ್ತೆಯಾಗಿದ್ದರಲ್ಲ ಆ ಸಂದರ್ಭ ಕೊಲಂಬಿಯಾ ಸರ್ಕಾರ ಪ್ರಾರಂ ಭಿಸಿದ ಆಪರೇಷನ್ ಹೋಪ್ ಕಾರ್ಯಾಚರಣೆಯಲ್ಲಿ ೧೬೦ ಸೈನಿಕರು ಮತ್ತು ೧೦ ಶ್ವಾನಗಳಿದ್ದವು. ಪತನವಾದ ವಿಮಾನವನ್ನು ಮೊದಲು ಪತ್ತೆ ಮಾಡಿದ ಕೀರ್ತಿ ವಿಲ್ಸನ್ ಎಂಬ ಜರ್ಮನ್ ಶೆಫರ್ಡ್ಗೆ ಸಂದಿತು. ವಿಮಾನ ಪತನದ ಜಾಗ ಕಂಡುಹಿಡಿದ ವಿಲ್ಸನ್ ಕೆಲವೇ ಗಂಟೆಗಳಲ್ಲಿ ಮಕ್ಕಳು ಸಂಚರಿಸಿದ ಜಾಡಿನ ಸುಳಿವು ಪತ್ತೆ ಮಾಡಿದ. ೧೧ ತಿಂಗಳ ಮಗುವಿನ ಫೀಡಿಂಗ್ ಬಾಟಲ್ ಕೂಡ ಕಾಡಿನ ಮಧ್ಯೆ ವಿಲ್ಸನ್ಗೆ ಪತ್ತೆಯಾಯಿತು. ಇದರಿಂ ದಾಗಿ ಮಕ್ಕಳು ಜೀವಂತವಾಗಿದ್ದಾರೆ ಎಂದು ಪ್ರಮುಖ ಸುಳಿವು ಸೈನಿಕರಿಗೆ ದೊರಕಿತ್ತು.
೧೩ ವರ್ಷದ ಜೆಕೆಂಬ್ಯಾರಿ ಮೆಕ್ಯೂಟೂಯ್, ೬ ವರ್ಷದ ಸೆಲೋನಿ, ೪ ವರ್ಷದ ರನಾಕ್ಯೂ, ೧೧ ತಿಂಗಳ ಕ್ರಿಸ್ಟನ್ ಎಂಬ ಈ ನಾಲ್ವರು ಮಕ್ಕಳ ಹುಡುಕಾಟದಲ್ಲಿ ಮಹತ್ವದ ಸುಳಿವು ಲಭಿಸಿ ಕಾರ್ಯಾ ಚರಣೆಯನ್ನು ಚುರುಕುಗೊಳಿಸಿ ರುವಂತೆಯೇ ಇದ್ದಕ್ಕಿದ್ದಂತೆಯೇ ಈ ವಿಲ್ಸನ್ ನಾಪತ್ತೆಯಾಗಿಬಿಟ್ಟ. ಮೊದಲೇ ದಂಡಕಾರಣ್ಯ. ವಿಲ್ಸನ್ ಎಲ್ಲಿ ಹೋದ ಎಂದು ಕೆಲಕಾಲ ಹುಡುಕಿದ ಶ್ವಾನಪಡೆಯ ಸೈನಿಕರು ಮತ್ತೆ ಮಕ್ಕಳ ಅರಸುವಿಕೆಯಲ್ಲಿ ತೊಡಗಿಸಿಕೊಂಡರು.
ಆಸೆ ಬಿಟ್ಟ ಸೈನಿಕರು
ಕೆಲದಿನಗಳ ಬಳಿಕ ವಿಲ್ಸನ್ ಜೀವಂತವಾಗಿರುವ ಆಸೆಯನ್ನೇ ಸೈನಿಕರು ಬಿಟ್ಟರು. ವನ್ಯಮೃಗಗಳಿಗೆ ವಿಲ್ಸನ್ ಆಹಾರವಾಗಿರಬಹುದು ಎಂದೇ ಸೈನಿಕರು ಭಾವಿಸಿದ್ದರು. ಆದರೆ ಆಶ್ಚರ್ಯ ಎಂಬAತೆ ಏಕಾಏಕಿ ಕಾಡಿನಲ್ಲಿ ವಿಲ್ಸನ್ ಬೊಗಳುವುದು ಕೇಳಿಸಿತು. ಕುತೂ ಹಲದಿಂದ ಸೈನಿಕರು ಅತ್ತ ದೌಡಾಯಿಸಿ ನೋಡುವಷ್ಟರಲ್ಲಿಯೇ ವಿಲ್ಸನ್ ಅಲ್ಲಿ ಕಾಣಿಸಿ ಕೊಂಡ.
ಎಲ್ಲರೂ ಆಘಾತ ಕ್ಕೀಡಾಗುವಂತೆ ವಿಲ್ಸನ್ ತನ್ನ ನಡವಳಿಕೆಯಲ್ಲಿ ವೈಪರೀತ್ಯ ತೋರ ತೊಡಗಿದ. ತನ್ನ ತರುಬೇತು ದಾರನಿಗೆ ಬೊಗಳತೊಡಗಿದ ವಿಲ್ಸನ್ ಆತ ಹತ್ತಿರ ಬರುತ್ತಿರುವಂತೆಯೇ ದೂರ ದೂರ ಓಡ ತೊಡಗಿದ. ಅನೇಕ ದಿನಗಳ ಕಾಲ ಕಾಡಿನಲ್ಲಿದ್ದು ವಿಲ್ಸನ್ ಹೀಗೆ ಮಾಡುತ್ತಿದ್ದಾನೆ. ಕಾಡಿನಲ್ಲಿದ್ದು ಈತನಿಗೆ ಹೆದರಿಕೆಯಾ ಗಿದ್ದು ಹೀಗಾಗಿಯೇ ಹೀಗೆಲ್ಲಾ ವರ್ತಿ ಸುತ್ತಿದ್ದಾನೆ ಎಂದೇ ಸೈನಿಕರು ನಂಬಿದರು.
ದೂರದಿAದಲೇ ಕಂಡ ವಿಲ್ಸನ್ ಕೆಲಹೊತ್ತಿನಲ್ಲಿಯೇ ನಾಪತ್ತೆಯಾದ.. ವಿಲ್ಸನ್ ಕಂಡ ಕಾಡಿನ ಸ್ಥಳದಿಂದ ಮುಂದೆ ಹೋದ ಸೇನಾ ಕಾರ್ಯಾ ಚರಣೆ ಪಡೆಗಳಿಗೆ ಅಲ್ಲಿ ಅಚ್ಚರಿಯೋ ಅಚ್ಚರಿ.. ಯಾವ ಮಕ್ಕಳನ್ನು ೨೮ ದಿನಗಳಿಂದ ಹುಡುಕುತ್ತಿದ್ದರೋ ಆ ಮಕ್ಕಳು ಅಲ್ಲಿ ಕಂಡುಬAದರು. ಅಂದರೆ, ವಿಲ್ಸನ್ ಈ ಮಕ್ಕಳು ಇರುವ ಪ್ರದೇಶವನ್ನು ಕಾರ್ಯಾಚರಣೆಯ ತಂಡಕ್ಕೆ ಸುಳಿವಿನ ಮೂಲಕ ನೀಡಿ ನಾಪತ್ತೆಯಾದ.
ಮಕ್ಕಳ ಚಿತ್ರದಲ್ಲಿ ವಿಲ್ಸನ್
ಮಕ್ಕಳು ಸಿಕ್ಕಿದ ಸಂತೋಷದ ಲ್ಲಿಯೇ ಸೇನಾ ಪಡೆ ಕಾಡಿನಿಂದ ಮರಳಿತು. ಮಕ್ಕಳು ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆಯ ಬಳಿಕ ಚೇತರಿಕೆ ಕಾಣುತ್ತಿರುವಂತೆಯೇ ಈ ಪೈಕಿ ಇಬ್ಬರು ಮಕ್ಕಳು ಬರೆದ ಚಿತ್ರದಲ್ಲಿ ನಾಯಿಯೊಂದರ ಚಿತ್ರ ಕಂಡುಬAತು. ಆ ನಾಯಿಯ ಚಿತ್ರ ವಿಲ್ಸನ್ ನನ್ನೇ ಹೋಲುತ್ತಿತ್ತು!! ೧೩ ವರ್ಷದ ಜೆಕೆಂಬ್ಯಾರಿ ಮೆಕ್ಯೂಟೂಯ್, ದೊಡ್ಡ ನಾಯಿಯ ಚಿತ್ರವನ್ನು ಮರದಡಿಯಲ್ಲಿ ನಿಂತAತೆ ಚಿತ್ರಿಸಿದರೆ ೬ ವರ್ಷದ ಸೆಲೋನಿ, ತಾನು ಕಂಡ ನಾಯಿಯ ಚಿತ್ರವನ್ನು ನದಿಬದಿಯಲ್ಲಿ ಬರೆದಿ ದ್ದಳು. ಅಂದರೆ ನಾಯಿಯೇ ಈ ಮಕ್ಕಳನ್ನು ನೀರು ದೊರಕುವ ಸ್ಥಳದತ್ತ ಕರೆದೊಯ್ದಿರಬಹುದು ಎಂಬ ಊಹೆ ಸೇನಾಧಿಕಾರಿಗಳದ್ದು. ಮಕ್ಕಳು ಬಿಡಿಸಿದ ನಾಯಿಯ ಚಿತ್ರ ಗಮನಿಸಿ ಕುತೂಹಲಗೊಂಡ ವೈದ್ಯಾಧಿಕಾರಿಗಳು ನಿಧಾನವಾಗಿ ಮಕ್ಕಳಿಂದ ಮಾಹಿತಿ ಪಡೆಯತೊಡಗಿದರು. ಈ ಮಕ್ಕಳು ಹೇಳಿದ ಮಾಹಿತಿ ನಿಜಕ್ಕೂ ಸ್ವಾರಸ್ಯಕರವಾಗಿತ್ತು.
‘ಅಮ್ಮನ ಜತೆ ತಾವು ಪಯಣಿ ಸುತ್ತಿದ್ದ ವಿಮಾನ ಕಾಡಿನ ಮೇಲೆ ಹಾರುತ್ತಿರುವಂತೆಯೇ ದೂರದಲ್ಲಿ ಮಿಂಚು ಕಂಡು ಬಂತು. ಕೆಲಕ್ಷಣ ದಲ್ಲಿಯೇ ವಿಮಾನ ಕಾಡಿನೊಳಗೆ ಬೀಳತೊಡಗಿತು. ಕ್ಷಣಗಳಲ್ಲಿಯೇ ನಾವು ಭೂಮಿಯಲ್ಲಿದ್ದೆವು. ಬಿದ್ದ ವಿಮಾನದಿಂದ ಹಾಗೂ ಹೀಗೂ ನಾನು ಹೊರಬಂದು ನೋಡುತ್ತಿರುವ ಂತೆಯೇ ರಕ್ತದ ಮಧ್ಯೆ ಅಮ್ಮ ಬಿದ್ದಿರುವುದು ಕಾಣಿಸಿತು. ವಿಮಾನದ ಲ್ಲಿದ್ದ ದೊಡ್ಡವರೆಲ್ಲಾ ಮಾತು ನಿಲ್ಲಿಸಿ ದ್ದರು. ಆದರೆ ತಂಗಿಯರ ಕಾಲುಗಳು ಕಾಣತೊಡಗಿದ್ದವು ಮತ್ತು ಆ ಕಾಲು ಗಳು ಅಲ್ಲಾಡುತ್ತಿದ್ದವು. ಕೂಡಲೇ ಕಾಲು ಗಳನ್ನು ಎಳೆಯುತ್ತಾ ಒಬ್ಬೊಬ್ಬರನ್ನು ವಿಮಾನದಿಂದ ಹೊರಕ್ಕೆಳೆದೆ. ೧೧ ತಿಂಗಳ ತಂಗಿ ಜೋರಾಗಿ ಅಳುತ್ತಿದ್ದಳು. ಅವಳನ್ನು ಎತ್ತಿಕೊಂಡು ಪತನಗೊಂಡ ವಿಮಾನದ ಬಳಿಯೇ ಕುಳಿತುಕೊಂಡೆವು. ಅಮ್ಮ ತಂದಿದ್ದ ಬ್ಯಾಗ್ನಲ್ಲಿದ್ದ ರಾಗಿಹಿಟ್ಟನ್ನು ತಿಂದು ಆ ರಾತ್ರಿ ಕಳೆದೆವು. ಮರುದಿನ ಬಹಳ ಹೊತ್ತು ಕಳೆದರೂ ಯಾರೂ ಕಾಣಲಿಲ್ಲ. ಈ ಕಾಡಿನಲ್ಲಿ ನಮ್ಮ ರಕ್ಷಣೆಗೆ ಯಾರೂ ಬರಲಾರರು ಎಂದು ನಮ್ಮ ಮೂವರಿಗೆ ತಿಳಿಯತೊಡಗಿತು. ಬಿದ್ದ ವಿಮಾನದಲ್ಲಿ ಉಳಿದುಕೊಂಡಿದ್ದ ವಸ್ತುಗಳನ್ನು ಬ್ಯಾಗಿಗೆ ಸಿಕ್ಕಿಸಿಕೊಂಡು ಅಲ್ಲಿಂದ ನಡೆಯಲಾರಂಭಿಸಿದೆವು. ಅಮ್ಮ ಹೇಳಿಕೊಟ್ಟಿದ್ದ ಪಾಠಗಳು ಯೋಚನೆಯಾದವು. ಯಾವ ಹಣ್ಣು ತಿನ್ನಬೇಕು. ಯಾವ ಕಾಡು ಹಣ್ಣು ತಿನ್ನಬಾರದು ಎಂಬುದು ನೆನಪಾದವು. ಅಂತೆಯೇ ಹುಷಾರಾಗಿ ತಿನ್ನುತ್ತಾ, ನದಿ ಮತ್ತು ತೊರೆಯ ನೀರು ಕುಡಿಯುತ್ತಾ ಹೆಜ್ಜೆ ಹಾಕತೊಡಗಿದವು. ಕೆಲವು ದಿನಗಳ ಕಾಲ ದೊಡ್ಡ ಮರದಡಿ ಕಾಲಕಳೆದೆವು. ಹೀಗೆ ಕಾಲಸರಿಯುತ್ತಿರುವಾಗಲೇ ಅದೊಂದು ದಿನ ದೊಡ್ಡ ಗಾತ್ರದ ನಾಯಿಯೊಂದು ನಾವಿದ್ದ ಕಡೆ ಬಂದು ಬೊಗಳತೊಡಗಿತು. ಕೆಲಹೊತ್ತಿನಲ್ಲಿಯೇ ಅದು ಸ್ನೇಹಪರತೆ ತೋರಿಸಿತು. ಇನ್ನು ಕೆಲ ಹೊತ್ತಿನಲ್ಲಿಯೇ ಆ ನಾಯಿ ನಮ್ಮೊಂದಿಗೆ ಆಟವಾಡತೊಡಗಿತು. ಎಷ್ಟು ದಿನ ಅಂಥ ನಿಖರವಾಗಿ ಗೊತ್ತಿಲ್ಲ. ಆದರೆ ಆ ನಾಯಿ ನಮ್ಮೊಂದಿಗೆ ಹಲವು ದಿನ, ರಾತ್ರಿ ಇತ್ತು. ಒಂದು ರೀತಿಯಲ್ಲಿ ನಮ್ಮನ್ನು ಕಾವಲುಗಾರನಂತೆ ಆ ನಾಯಿ ಕಾಯತೊಡಗಿತು. ಯಾವುದೇ ಮೃಗಗಳೂ ನಮ್ಮ ಬಳಿ ಬಾರದಂತೆ ಈ ನಾಯಿ ರಕ್ಷಣೆ ನೀಡಿತ್ತು. ಅಪಾಯ ಬಂದಾಗಲೆಲ್ಲಾ ನಾಯಿ ನಮ್ಮನ್ನು ಎಚ್ಚರಿಸುತ್ತಿತ್ತು. ಹೀಗಾಗಿ ನಾವು ಕಾಡಿನೊಳಗಿದ್ದರೂ ನಮಗೆ ಯಾವುದೇ ಅಪಾಯ ಎದು ರಾಗಲಿಲ್ಲ. ಈ ನಾಯಿ ನಮ್ಮೊಂದಿಗೆ ಇರದೇ ಹೋಗಿದ್ದರೆ ನಾವು ಜೀವಂತವಾಗಿರುತ್ತಿದ್ದೆವು ಎಂದು ಹೇಳುವುದು ಕಷ್ಟವಿತ್ತು.’
ಮತ್ತೆ ಆಪರೇಶನ್
ಮಕ್ಕಳ ಹೇಳಿಕೆ ಕೇಳಿಸಿ ಕೊಳ್ಳುತ್ತಿದ್ದಂತೆಯೇ ಕೊಲಂಬಿಯಾ ಸೈನಿಕರು ಮತ್ತೆ ಸೆಟೆದೆದ್ದರು. ಕೊಲಂಬಿಯಾ ಅಧ್ಯಕ್ಷ ಕೂಡ ಸೈನಿಕರ ಬೆಂಬಲಕ್ಕೆ ನಿಂತರು. ಆ ನಾಯಿ.., ನಮ್ಮ ಸೈನ್ಯದ ಹೆಮ್ಮೆಯ ವಿಲ್ಸನ್ ಸಿಕ್ಕುವವರೆಗೂ ಆಪರೇ ಷನ್ ಹೋಪ್ ಮುಕ್ತಾಯವಾ ಗೊಲ್ಲ ಎಂದು ಅಧ್ಯಕ್ಷ ಘೋಷಿಸಿ ದರು. ಕೊಲಂಬಿಯಾ ದೇಶದೆಲ್ಲೆಡೆ ‘ಮರಳಿ ಬಾ ವಿಲ್ಸನ್’ ಎಂಬ ಫಲಕಗಳು ರಾರಾಜಿಸುತ್ತಿವೆ. ಜಗತ್ತಿನಲ್ಲಿಯೇ ನಾಯಿಯೊಂದರ ಹುಡುಕಾಟಕ್ಕಾಗಿ ದೇಶವೊಂದು ನಡೆಸುತ್ತಿರುವ ಬೃಹತ್ ಕಾರ್ಯಾ ಚರಣೆ ಇದು ಎಂದು ಬಣ್ಣಿಸಲಾಗಿದೆ.
ಸೈನಿಕರು ಈ ಬಾರಿ ೨೦೦ರ ಸಂಖ್ಯೆಯಲ್ಲಿ ಅಮೆಜಾನ್ ಕಾಡಿಗೆ ನುಗ್ಗಿದ್ದಾರೆ. ಕಾಡಿನಲ್ಲಿ ಎದುರಿಗೆ ಕಾಣುತ್ತಿರುವ ಹುಲಿ, ಸಿಂಹ, ಚಿರತೆ, ಉಹುಂ ಸೈನಿಕರಿಗೆ ಲೆಕ್ಕಕ್ಕೇ ಇಲ್ಲ. ಅವರ ನೋಟ ಇರುವುದು ನಾಯಿಯತ್ತ.. ವಿಲ್ಸನ್ ಎಂಬ ಹಿರೋವಿನ ಪತ್ತೆಯತ್ತ. ನಾವು ವಿಲ್ಸನ್ ನನ್ನು ಮತ್ತೆ ಸೇನಾ ಕ್ಯಾಂಪ್ ಗೆ ತಂದೇ ತರುತ್ತೇವೆ ಎಂದು ಕೊಲಂಬಿಯಾ ಸೈನಿಕರು ಅಮೆಜಾನ್ ಕಾಡಿನತ್ತ ನುಗ್ಗಿ ೪ ದಿನಗಳಾಗಿವೆ.
ಕೊಲಂಬಿಯಾ ದೇಶದೊಂ ದಿಗೆ ಜಗತ್ತು ಪ್ರಾರ್ಥಿಸುತ್ತಿದೆ.. ವಿಲ್ಸನ್ ಮತ್ತೆ ಸುರ ಕ್ಷಿತವಾಗಿ ಮರಳಿ ಸಿಕ್ಕಲಿ..!!! - ಅನಿಲ್ ಎಚ್.ಟಿ.