ಕೂಡಿಗೆ, ಜೂ. ೧೯: ಮುಂಗಾರು ವಿಳಂಬ ಪರಿಣಾಮ ಚಿಕ್ಲಿಹೊಳೆ ಅಣೆಕಟ್ಟೆ ಜಲಾಶಯದಲ್ಲಿ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ರೈತರಲ್ಲಿ ಆತಂಕ ಸೃಷ್ಟಿಮಾಡಿದೆ. ಕಳೆದ ವರ್ಷ ಚಿಕ್ಲಿಹೊಳೆ ಅಣೆಕಟ್ಟೆ ಭರ್ತಿಯಾಗಿ ಹೆಚ್ಚುವರಿ ನೀರು ನದಿಗೆ ಹರಿಸಲಾಗಿತ್ತು. ಆದರೆ ಈ ಬಾರಿ ಅಣೆಕಟ್ಟೆಯಲ್ಲಿ ಬಹುತೇಕ ಅರ್ಧ ಭಾಗದಷ್ಟು ನೀರಿನ ಪ್ರಮಾಣ ಕುಸಿತಗೊಂಡಿದೆ.
೦.೧೮ ಟಿಎಂಸಿ ಸಂಗ್ರಹ ಸಾಮರ್ಥ್ಯದ ಚಿಕ್ಲಿಹೊಳೆಯಲ್ಲಿ ಮಳೆಗಾಲದಲ್ಲಿ ನೀರು ಉಕ್ಕಿ ಹರಿದು ಸುರಳಿಯಾಕಾರದಲ್ಲಿ ನದಿಗೆ ಹರಿಯುವ ದೃಶ್ಯ ಮನಮೋಹಕ. ಆದರೆ ಈ ಬಾರಿ ಬರಡಾಗಿರುವ ಚಿಕ್ಲಿಹೊಳೆ ನೋಡಲು ಆಗಮಿಸುವ ಪ್ರವಾಸಿಗರು ನಿರಾಸೆಯಿಂದ ನಿರ್ಗಮಿಸುತ್ತಿದ್ದಾರೆ.
ಜಿಲ್ಲೆಗೆ ಬರುವ ಪ್ರವಾಸಿಗರು ಕುಶಾಲನಗರ ತಾಲೂಕಿನ ದುಬಾರೆ ಸಾಕಾನೆ ಶಿಬಿರಕ್ಕೆ ಭೇಟಿ ನೀಡಿ, ನಂತರ ಹಿಂತಿರುಗಿ ಹಾರಂಗಿಗೆ ಹೋಗುವ ಮಾರ್ಗಕ್ಕೆ ಹೊಂದಿಕೊAಡAತೆ ಇರುವ ಚಿಕ್ಲಿಹೊಳೆ ಅಣೆಕಟ್ಟೆಗೆ ಭೇಟಿ ನೀಡುತ್ತಾರೆ. ಕಳೆದ ಒಂದು ತಿಂಗಳುಗಳಿAದ ವಾರದ ರಜೆಯ ಸಮಯದಲ್ಲಿ ಹೆಚ್ಚು ಪ್ರವಾಸಿಗರು ಬರುತ್ತಿದ್ದರೂ ಸಹ ಮಳೆಯಿಲ್ಲದೆ ಚಿಕ್ಲಿಹೊಳೆಯಲ್ಲಿ ನೀರು ಇಲ್ಲದೆ ಸಣ್ಣ ಪ್ರಮಾಣದ ಕೆರೆಯಂತೆ ಕಾಣುತ್ತಿರುವ ದೃಶ್ಯವನ್ನು ಪ್ರವಾಸಿಗರು ನೋಡಿ ಹಿಂತಿರುಗುತ್ತಿರುವ ದೃಶ್ಯ ಕಂಡುಬರುತ್ತಿದೆ.
ಕಳೆದ ಸಾಲಿನಲ್ಲಿ ಚಿಕ್ಲಿಹೊಳೆ ಅಣೆಕಟ್ಟೆಯ ಜಲಾನಯನ ಪ್ರದೇಶಗಳಿಗೆ ಅಣೆಕಟ್ಟೆಯ ಗೇಟ್ ಮೂಲಕ ನಾಲೆಗಳ ಮೂಲಕ ನೀರನ್ನು ಬಿಡುಗಡೆಗೊಳಿಸಲಾಗುತ್ತಿತ್ತು. ಆದರೆ ಈ ಬಾರಿ ಅಣೆಕಟ್ಟೆಯೇ ನೀರಿನ ಸಂಗ್ರಹ ಇಲ್ಲದೆ ನೀರನ್ನೇ ಬೇಸಾಯಕ್ಕೆ ನಂಬಿದ ಈ ವ್ಯಾಪ್ತಿಯ ರೈತರಿಗೆ ಬಹಳ ಸಮಸ್ಯೆಯಾಗಿದೆ. ಮುಂದಿನ ದಿನಗಳಲ್ಲಿ ಉತ್ತಮ ಮಳೆ ಬಂದು ಅಣೆಕಟ್ಟೆ ಭರ್ತಿಯಾದರೆ ಬೇಸಾಯಕ್ಕೆ ನೀರಿನ ಅನುಕೂಲವಾಗುವುದು ಎಂದು ಈ ಭಾಗದ ರೈತರು ಕಾಯುತ್ತಿದ್ದಾರೆ. -ಕೆ.ಕೆ. ನಾಗರಾಜಶೆಟ್ಟಿ