ನಾಪೋಕ್ಲು, ಜೂ. ೨೦: ಮಳೆರಾಯನೆಂದೇ ಖ್ಯಾತಿವೆತ್ತ ಶ್ರೀ ಪಾಡಿ ಇಗ್ಗುತಪ್ಪ ಸನ್ನಿಧಿಯಲ್ಲಿ ಇಂದು ಮಳೆಗಾಗಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.

ಮುಂಗಾರು ಆರಂಭವಾದರೂ ಮಳೆಯಾಗದ ಹಿನ್ನೆಲೆ ಲೋಕಸಭಾ ಸದಸ್ಯ ಪ್ರತಾಪ್‌ಸಿಂಹ ಹಾಗೂ ಮಾಜಿ ಶಾಸಕ ಕೊಂಬಾರನ ಜಿ. ಬೋಪಯ್ಯ ಅವರ ಸಮ್ಮುಖದಲ್ಲಿ ಇಗ್ಗುತಪ್ಪ ದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ, ಮಳೆಗಾಗಿ ಪ್ರಾರ್ಥಿಸಲಾಯಿತು. ದೇವಾಲಯ ಅರ್ಚಕ ಕುಶಭಟ್ ಪೂಜಾ ವಿಧಿವಿಧಾನ ನೆರವೇರಿಸಿದರು.

ಈ ಸಂದರ್ಭ ದೇವಾಲಯದ ಪಾರುಪತ್ಯೆಗಾರ ಪರದಂಡ ಪ್ರಿನ್ಸ್, ಭಕ್ತಜನ ಸಂಘದ ಅಧ್ಯಕ್ಷ ಪರದಂಡ ಡಾಲಿ, ಪ್ರಮುಖರಾದ ಕಲಿಯಂಡ ಸುನಂದ, ಕೋಲೆಯಂಡ ಗಿರೀಶ್, ಚಂಡಿರ ಜಗದೀಶ್, ಕಲ್ಯಾಟಂಡ ರಘು, ಶ್ಯಾಮು, ಬೊಳಿಯಾಡಿರ ಸಂತು ಸುಬ್ರಮಣಿ, ಪಾಡೆಯಮ್ಮನ ಮನು ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.