ಸೋಮವಾರಪೇಟೆ, ಜೂ. ೧೯: ನಾವು ಪ್ರತಿಷ್ಠಾನ ಕೊಡಗು ವತಿ ಯಿಂದ ಶಾಲಾ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಇಲ್ಲಿನ ಚನ್ನ ಬಸಪ್ಪ ಸಭಾಂಗಣದಲ್ಲಿ ‘ಹಕ್ಕಿಗೊಂದು ಗುಟುಕು ಅಭಿಯಾನ-೨೦೨೩’ ರ ಸಮಾರೋಪ ಸಮಾರಂಭ ಹಾಗು ಪಕ್ಷಿ ಛಾಯಾಚಿತ್ರ ಪ್ರದರ್ಶನ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಲಾವಿದರು ಮತ್ತು ಪಕ್ಷಿತಜ್ಞರಾದ ಹಾಸನದ ಬಿ.ಎಸ್. ದೇಸಾಯಿ, ಪ್ರಾಣಿ, ಪಕ್ಷಿಗಳಿಂದ ಪರಿಸರ ಮತ್ತು ಪ್ರಕೃತಿ ನಾಶವಾ ಗುತ್ತಿಲ್ಲ. ಪ್ರಕೃತಿ ನಾಶದಲ್ಲಿ ಮಾನವನ ಹಸ್ತಕ್ಷೇಪ ಹೆಚ್ಚಿದೆ. ಈ ಅಪಾಯವನ್ನು ತಪ್ಪಿಸಬೇಕು ಎಂದರು.
ಭೂಮಿಯ ಮೇಲೆ ಮನುಷ್ಯರು ಹಾಗೂ ಇತರ ಜೀವಿಗಳೂ ಬದುಕ ಬೇಕು. ದಟ್ಟವಾದ ಕಾಡನ್ನು ಮಾನವನಿಂದ ಸೃಷ್ಟಿಸಲು ಸಾಧ್ಯವಿಲ್ಲ. ಪ್ರಕೃತಿನಾಶ, ಭೂಮಿಯೊಳಗಿನ ಒತ್ತಡದಿಂದ ಪ್ರಕೃತಿ ವಿಕೋಪಗಳು, ಹವಾಮಾನ ವೈಪರೀತ್ಯ ಸಂಭವಿ ಸುತ್ತಿದೆ. ಮುಂದೆ ಗಂಡಾAತರದ ಮುನ್ಸೂಚನೆ ಇದೆ. ಈ ಕಾರಣ ದಿಂದಲಾದರೂ ಪರಿಸರ ಉಳಿಯುವ ಕಾಯಕ ಮಾಡಲೇಬೇಕಾಗಿದೆ ಎಂದರು.
ಹಕ್ಕಿಗೊAದು ಗುಟುಕು ಅಭಿ ಯಾನದಲ್ಲಿ ಭಾಗವಹಿಸಿ, ಪಕ್ಷಿಗಳಿಗೆ ನೀರು, ಆಹಾರ ಇಟ್ಟು ಸೆಲ್ಫಿ ಕಳುಹಿಸುವ ಸ್ಫರ್ಧೆಯಲ್ಲಿ ಭಾಗವಹಿಸಿದ್ದ ವೀರಾಜಪೇಟೆ ಕಾವೇರಿ ಶಾಲೆಯ ಕ್ಷಮಾ ಕಾವೇರಮ್ಮ ಪ್ರಥಮ, ವೀರಾಜಪೇಟೆಯ ಉತ್ತಂಡ ಪೂಜಾ ಜಗತ್ ದ್ವಿತೀಯ, ಮಂಗ ಳೂರು ಸುರತ್ಕಲ್ನ ಶ್ರೇಯಾಂಕ್ ಜೈನ್ ತೃತೀಯ, ಆಲೂರು ಸಿದ್ದಾಪುರದ ಡಾ.ಸುಪರ್ಣಾ ಅವರು ನಾಲ್ಕನೆ ಸ್ಥಾನ ಪಡೆದರು.
ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ ಅಧಿಕ ಅಂಕ ಗಳಿಸಿದ ಬುಡಕಟ್ಟು ಸಮುದಾಯ ಮತ್ತು ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು. ಬಿ.ಕೆ.ಪೂಜಾಶ್ರೀ, ಕೆ.ಆರ್.ಭಾರತಿ, ಎ.ಜಿ. ಶಾಲಿನಿ ಅವರುಗಳಿಗೆ ಪ್ರತಿಷ್ಠಾನದ ಮೂಲಕ ಪ್ರೋತ್ಸಾಹಧನ ವಿತರಿಸಲಾಯಿತು. ಪ್ರತಿಷ್ಠಾನದಿಂದ ವರ್ಷದ ಜೋಡಿ ಹಕ್ಕಿಗಳಾಗಿ ಆಯ್ಕೆಯಾದ ತಾಕೇರಿ ಗ್ರಾಮದ ಡಿ.ಟಿ.ನಿರಂಜನ್, ಚಾಂದಿನಿ ದಂಪತಿಗಳನ್ನು ಸನ್ಮಾನಿಸಲಾಯಿತು.
ವಿವಿಧ ಶಾಲೆಯ ವಿದ್ಯಾರ್ಥಿಗಳು ಆಗಮಿಸಿ ಪಕ್ಷಿಗಳ ಛಾಯಾ ಚಿತ್ರಗಳನ್ನು ವೀಕ್ಷಿಸಿದರು.
ಕಾರ್ಯಕ್ರಮದಲ್ಲಿ ವಕೀಲ ಬಿ.ಜೆ.ದೀಪಕ್, ಉದ್ಯಮಿ ಅರುಣ್ ಕೊತ್ತನಳ್ಳಿ, ಬೆಂಗಳೂರು ಮಲೆನಾಡು ಸಂಘದ ನಿರ್ದೇಶಕ ರಂಜನ್ಗೌಡ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎಚ್.ರಮೇಶ್, ಕಾವೇರಿ ಗ್ರಾಮೀಣ ಬ್ಯಾಂಕ್ನ ವ್ಯವಸ್ಥಾಪಕ ಎಂ.ಬಿ.ಪ್ರದೀಪ್, ನಾವು ಪ್ರತಿಷ್ಠಾನ ಸಂಸ್ಥಾಪಕರಾದ ಗೌತಮ್ ಕಿರಗಂದೂರು ಮತ್ತು ಸುಮನಾ ಗೌತಮ್, ಪ್ರಮುಖರಾದ ರಕ್ಷಿತ್ ಮಲ್ನಾಡ್ ಇದ್ದರು.