ಸಿದ್ದಾಪುರ, ಜೂ. ೧೯: ಗಾಯದಿಂದ ಅಸ್ವಸ್ಥಗೊಂಡ ಸುಮಾರು ೪ ವರ್ಷ ಪ್ರಾಯದ ಗಂಡು ಹುಲಿ ಸಾವನ್ನಪ್ಪಿರುವ ಘಟನೆ ಮಾಲ್ದಾರೆ ಗ್ರಾಮದ ಅಸ್ತಾನದಲ್ಲಿ ನಡೆದಿದೆ.
ದುಬಾರೆ ಮೀಸಲು ಅರಣ್ಯ ವ್ಯಾಪ್ತಿಯ ಅಸ್ತಾನದಲ್ಲಿ ಕಳೆದ ಕೆಲ ದಿನಗಳಿಂದ ಅಸ್ವಸ್ಥಗೊಂಡು ಬಳಲುತ್ತಿದ್ದ ಸುಮಾರು ನಾಲ್ಕು ವರ್ಷ ಪ್ರಾಯದ ಗಂಡು ಹುಲಿಯು ಇಂದು ಅಸ್ತಾನದ ಕೆರೆಯ ಬದಿಯಲ್ಲಿ ನಿತ್ರಾಣ ಕಳೆದು ಬಿದ್ದು ಮೃತಪಟ್ಟಿದೆ.
ಎರಡು ಹುಲಿಗಳ ಕಾದಾಟದಲ್ಲಿ ನಾಲ್ಕು ವರ್ಷ ಪ್ರಾಯದ ಗಂಡು ಹುಲಿಯ ಕೈ, ಎದೆ ಭಾಗಕ್ಕೆ ತೀವ್ರವಾಗಿ ಗಾಯಗೊಂಡಿದ್ದು, ತೀವ್ರ ಸ್ವರೂಪದ ಗಾಯದಿಂದ ಅಸ್ವಸ್ಥಗೊಂಡ ಹುಲಿಯು ಆಹಾರವಿಲ್ಲದೆ ಹಾಗೂ ತೀವ್ರ ರಕ್ತ ಸ್ರಾವದಿಂದ ಸಾವನ್ನಪ್ಪಿರುವುದಾಗಿ ಅರಣ್ಯ ಇಲಾಖಾಧಿಕಾರಿಗಳು ತಿಳಿಸಿದ್ದಾರೆ.
ಗಾಯಗೊಂಡ ಹುಲಿಯು ಬೇರೆಡೆಯಿಂದ ಮಾಲ್ದಾರೆಯ ಅಸ್ತಾನ ವ್ಯಾಪ್ತಿಯ ಕೆರೆಯ ಬಳಿ ಸುತ್ತಾಡುತ್ತಿರುವ ಮಾಹಿತಿಯನ್ನು ಸ್ಥಳೀಯರು ಇಲಾಖೆಗೆ ತಿಳಿಸಿದರು. ಗಾಯಗೊಂಡು ಬಳಲಿದ್ದ ಹುಲಿಯು ಭಾನುವಾರದಂದು ನಡೆದಾಡಲು ಸಾಧ್ಯವಾಗದ ಸ್ಥಿತಿಯಲ್ಲಿ ಕಂಡುಬAದ ಹಿನ್ನೆಲೆಯಲ್ಲಿ ಅರಣ್ಯ ಸಿದ್ದಾಪುರ, ಜೂ. ೧೯: ಗಾಯದಿಂದ ಅಸ್ವಸ್ಥಗೊಂಡ ಸುಮಾರು ೪ ವರ್ಷ ಪ್ರಾಯದ ಗಂಡು ಹುಲಿ ಸಾವನ್ನಪ್ಪಿರುವ ಘಟನೆ ಮಾಲ್ದಾರೆ ಗ್ರಾಮದ ಅಸ್ತಾನದಲ್ಲಿ ನಡೆದಿದೆ.
ದುಬಾರೆ ಮೀಸಲು ಅರಣ್ಯ ವ್ಯಾಪ್ತಿಯ ಅಸ್ತಾನದಲ್ಲಿ ಕಳೆದ ಕೆಲ ದಿನಗಳಿಂದ ಅಸ್ವಸ್ಥಗೊಂಡು ಬಳಲುತ್ತಿದ್ದ ಸುಮಾರು ನಾಲ್ಕು ವರ್ಷ ಪ್ರಾಯದ ಗಂಡು ಹುಲಿಯು ಇಂದು ಅಸ್ತಾನದ ಕೆರೆಯ ಬದಿಯಲ್ಲಿ ನಿತ್ರಾಣ ಕಳೆದು ಬಿದ್ದು ಮೃತಪಟ್ಟಿದೆ.
ಎರಡು ಹುಲಿಗಳ ಕಾದಾಟದಲ್ಲಿ ನಾಲ್ಕು ವರ್ಷ ಪ್ರಾಯದ ಗಂಡು ಹುಲಿಯ ಕೈ, ಎದೆ ಭಾಗಕ್ಕೆ ತೀವ್ರವಾಗಿ ಗಾಯಗೊಂಡಿದ್ದು, ತೀವ್ರ ಸ್ವರೂಪದ ಗಾಯದಿಂದ ಅಸ್ವಸ್ಥಗೊಂಡ ಹುಲಿಯು ಆಹಾರವಿಲ್ಲದೆ ಹಾಗೂ ತೀವ್ರ ರಕ್ತ ಸ್ರಾವದಿಂದ ಸಾವನ್ನಪ್ಪಿರುವುದಾಗಿ ಅರಣ್ಯ ಇಲಾಖಾಧಿಕಾರಿಗಳು ತಿಳಿಸಿದ್ದಾರೆ.
ಗಾಯಗೊಂಡ ಹುಲಿಯು ಬೇರೆಡೆಯಿಂದ ಮಾಲ್ದಾರೆಯ ಅಸ್ತಾನ ವ್ಯಾಪ್ತಿಯ ಕೆರೆಯ ಬಳಿ ಸುತ್ತಾಡುತ್ತಿರುವ ಮಾಹಿತಿಯನ್ನು ಸ್ಥಳೀಯರು ಇಲಾಖೆಗೆ ತಿಳಿಸಿದರು. ಗಾಯಗೊಂಡು ಬಳಲಿದ್ದ ಹುಲಿಯು ಭಾನುವಾರದಂದು ನಡೆದಾಡಲು ಸಾಧ್ಯವಾಗದ ಸ್ಥಿತಿಯಲ್ಲಿ ಕಂಡುಬAದ ಹಿನ್ನೆಲೆಯಲ್ಲಿ ಅರಣ್ಯ