ಮಡಿಕೇರಿ, ಜೂ. ೧೯: ಹೊಸ ರಸ್ತೆ ಕಾಮಗಾರಿ., ಚರಂಡಿ, ಮೋರಿ., ಹೀಗೇ ವಿವಿಧ ಕಾಮಗಾರಿಗಳ ಹೆಸರುಗಳನ್ನು ಕೇಳಿದ್ದೇವೆ., ನೋಡಿದ್ದೇವೆ ಅಲ್ಲವೇ..? ಆದರೆ., ಹೊಸದಾಗಿ ಮಾಡಿದ ರಸ್ತೆಯಲ್ಲಿ ಜಲ್ಲಿ ಕಲ್ಲುಗಳನ್ನು ಗುಡಿಸಿ ಗುಡ್ಡೆ ಹಾಕುವ ಕಾಮಗಾರಿಯನ್ನೆಂದಾದರೂ ನೋಡಿರುವಿರಾ..? ಸಾಧ್ಯವಿಲ್ಲ ಅಲ್ಲವೇ..? ಆದರೆ., ಮಡಿಕೇರಿಗೆ ಬಂದರೆ ಎಲ್ಲರಿಗೂ ಅಂತಹ ಒಂದು ಅದ್ಭುತ ಕಾಮಗಾರಿಯನ್ನು ನೋಡಿ ಕಣ್ತುಂಬಿಕೊಳ್ಳಬಹುದಾಗಿದೆ..!

ಹೌದು., ಕೊಡಗು ಜಿಲ್ಲಾ ಕೇಂದ್ರವಾದ ಮಂಜಿನ ನಗರಿ ಮಡಿಕೇರಿಯ ಆಡಳಿತದ ಉಪ್ಪರಿಗೆಯನ್ನು ಹೊತ್ತುಕೊಂಡಿರುವ ನಗರ ಸಭೆ ವತಿಯಿಂದ ಕೈಗೊಳ್ಳಲಾದ ಹೊಸ ರಸ್ತೆಗೆ ಹಾಕಿದ್ದ ಡಾಂಬರು ಸಹಿತ ಜಲ್ಲಿ ಕಲ್ಲುಗಳು ಮೂರೇ ದಿನಗಳಲ್ಲೇ ಕಿತ್ತು ಹೋಗಿದ್ದು, ನಡೆದಾಡುವಾಗ ಪಾದುಕೆಯೊಂದಿಗೆ ಕಿತ್ತು ಬರುತ್ತಿತ್ತು. ಇದೀಗ ಕಿತ್ತು ಬರುತ್ತಿರುವ ಜಲ್ಲಿ ಪುಡಿಗಳನ್ನು ಗುಡಿಸಿ ರಾಶಿ ಹಾಕುವ ಮತ್ತೊಂದು ಕೆಲಸ ನಡೆಯುತ್ತಿದೆ. ಸಂಬAಧಿಸಿದ ಗುತ್ತಿಗೆದಾರರ ಕಾರ್ಮಿಕರು ಇದೀಗ ರಸ್ತೆಯನ್ನು ಗುಡಿಸುವಲ್ಲಿ ಬಿಸಿಯಾಗಿದ್ದಾರೆ.

ಇಷ್ಟೊಂದು ಕಳಪೆ ಎಲ್ಲೂ ಇಲ್ಲ..!

ಸಾಮಾನ್ಯವಾಗಿ ಸಾರ್ವಜನಿಕ ಕೆಲಸ, ಕಾಮಗಾರಿಗಳು ನಡೆಯುವಾಗ ಒಂದಷ್ಟು ಕಳಪೆಯಾಗುವದು ಅಲ್ಲಿ ಕಂಡುಬರುತ್ತವೆ. ಆದರೆ., ಸಂಪೂರ್ಣ ಕಾಮಗಾರಿಯೆ ಕಳಪೆಯಾಗಿರುವದು ಮಡಿಕೇರಿ ನಗರಸಭಾ ವ್ಯಾಪ್ತಿಯಲ್ಲಿ ಮಾತ್ರವೆಂದೇ ಹೇಳಬಹುದು. ಗೌಳಿಬೀದಿಯಿಂದ ಕಂಚಿ ಕಾಮಾಕ್ಷಿ ದೇವಾಲಯದ ಬಳಿಯಿಂದ ರೇಸ್‌ಕೋರ್ಸ್ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಕಳೆದ ವಾರ ಡಾಂಬರೀಕರಣ ಮಾಡುವ ಮೂಲಕ ದುರಸ್ತಿಪಡಿಸಲಾಗಿತ್ತು. ಕಾಮಗಾರಿ ನಡೆದು ಮೂರೇ ದಿನಗಳಲ್ಲಿ ರಸ್ತೆಯ ಡಾಂಬರು ಕಿತ್ತು ಬಂದಿತ್ತು. ಈ ಬಗ್ಗೆ ‘ಶಕಿ’್ತಯಲ್ಲಿ ವರದಿ ಪ್ರಕಟಿಸುವ ಮೂಲಕ ಗಮನ ಸೆಳೆಯಲಾಗಿತ್ತು. ಇದೀಗ ರಸ್ತೆಯಲ್ಲಿ ಕಿತ್ತು ಬಂದಿರುವ ಜಲ್ಲಿ ಪುಡಿಗಳನ್ನು ಗುಡಿಸಿ ರಾಶಿ ಹಾಕಲಾಗುತ್ತಿದೆ.

ಇನ್ನೊಂದೆಡೆ ಗೌಳಿ ಬೀದಿ ಜಂಕ್ಷನ್‌ನಿAದ ಪೆನ್ಷನ್ ಲೇನ್ ಕಡೆಗೆ ತೆರಳುವ ರಸ್ತೆಯನ್ನು ಕೂಡ ಡಾಂಬರು ಹಾಕಿ ದುರಸ್ತಿ ಪಡಿಸಲಾಗಿದೆ. ಈ ರಸ್ತೆಯೂ ಸಂಪೂರ್ಣ ಕಳಪೆ ಮಟ್ಟದಿಂದ ಕೂಡಿದ್ದು, ಡಾಂಬರು ಕಿತ್ತು ಹೋಗಿದೆ. ರಸ್ತೆಯಲ್ಲಿ ಎರಡು ಕಡೆಗಳಲ್ಲಿ ಇಳಿಜಾರು ಇದ್ದು, ಅಲ್ಲಿ ಜಲ್ಲಿ ಪುಡಿಗಳು ಕಿತ್ತು ಬಂದು ರಸ್ತೆಯಿಡೀ ಹರಡಿಕೊಂಡಿವೆ. ದ್ವಿಚಕ್ರ ವಾಹನ ಸಂಚರಿಸುವಾಗ ಜಾರುತ್ತಿದ್ದು, ಈಗಾಗಲೇ ಕೆಲವರು ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಇನ್ನೊಂದೆರಡು ಮಳೆ ಬಂದಲ್ಲಿ ಅನಾಹುತವಾಗುವದು ಖಂಡಿತಾ.

‘ಕಾಮಗಾರಿಗಳಲ್ಲಿ ಕಳಪೆಂ iÀiÁಗುವದು ನೋಡಿದ್ದೇವೆ., ಆದರೆ., ಕಳಪೆಯೇ ಕಾಮಗಾರಿಯಾಗಿರುವುದು ಮಾತ್ರ ದುರಂತವೇ ಸರಿ’ ಎಂದು ನಾಗರಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ನಗರಸಭೆಯ ಕಾಂಗ್ರೆಸ್ ಬೆಂಬಲಿತ ಸದಸ್ಯ ಬಿ.ವೈ.ರಾಜೇಶ್ ಯಲ್ಲಪ್ಪ ಈ ವಾರ್ಡನ್ನು ಪ್ರತಿನಿಧಿಸುತ್ತಿದ್ದಾರೆ.

-ಅನಿಲ್