ಸೋಮವಾರಪೇಟೆ, ಜೂ. ೧೯: ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಆಶ್ರಯದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ತಾ. ೨೧ರಂದು (ನಾಳೆ) ಪಟ್ಟಣದ ಜೇಸೀ ವೇದಿಕೆ ಮುಂಭಾಗವಿರುವ ಅಟಲ್‌ಜೀ ಕನ್ನಡ ಭವನದಲ್ಲಿ ಅಂತರಾಷ್ಟಿçÃಯ ಯೋಗ ದಿನಾಚರಣೆ ನಡೆಯಲಿದೆ ಎಂದು ಸಂಸ್ಥೆಯ ಶಿಕ್ಷಕಿ ರಾಗಿಣಿ ತಿಳಿಸಿದ್ದಾರೆ. ಅಂದು ಬೆಳಿಗ್ಗೆ ೬ ಗಂಟೆಯಿAದ ೮ ಗಂಟೆಯವರೆಗೆ ಅಟಲ್‌ಜೀ ಕನ್ನಡ ಭವನದಲ್ಲಿ, ೧೦ ಗಂಟೆಗೆ ಸಂತ ಜೋಸೆಫರ ಪದವಿ ಕಾಲೇಜು, ೧೧.೩೦ಕ್ಕೆ ಬಿಟಿಸಿಜಿ ಪದವಿ ಕಾಲೇಜು, ಅಪರಾಹ್ನ ೩ ಗಂಟೆಗೆ ಶಾಂತಳ್ಳಿ, ಸಂಜೆ ೫ ಗಂಟೆಗೆ ತೋಳೂರುಶೆಟ್ಟಳ್ಳಿಯಲ್ಲಿ ಯೋಗ ದಿನಾಚರಣೆ ಕಾರ್ಯಕ್ರಮ ನಡೆಯಲಿದ್ದು, ಸಂಸ್ಥೆಯ ಶಿಕ್ಷಕರಾದ ದೀಪಕ್ ಉಪಾಧ್ಯ ಅವರು ಪಾಲ್ಗೊಳ್ಳಲಿದ್ದಾರೆ ಎಂದು ರಾಗಿಣಿ ಅವರು ಮಾಹಿತಿ ನೀಡಿದ್ದಾರೆ.