ಮಡಿಕೇರಿ, ಜೂ. ೨೦: ನಗರದ ಮಲ್ಲಿಕಾರ್ಜುನ ನಗರದಲ್ಲಿ ಇತ್ತೀಚೆಗಷ್ಟೇ ಪುನರ್ ಪ್ರತಿಷ್ಠಾಪನೆಗೊಂಡ ಕೋದಂಡರಾಮ ದೇವಾಲಯದಲ್ಲಿ ಇಂದು ದೃಢಕಲಶ ಪೂಜೆ ಶ್ರದ್ಧಾಭಕ್ತಿಯಿಂದ ನೆರವೇರಿತು. ಪುನರ್ಪ್ರತಿಷ್ಠೆ ಬಳಿಕ ೪೮ ದಿನಗಳು ಕಳೆದು ನಡೆಯುವ ದೃಢಕಲಶ ಪೂಜೆಯಲ್ಲಿ ಹೋಮ-ಹವನದೊಂದಿಗೆ ಬೆಳಿಗ್ಗೆ ೮ ಗಂಟೆಯಿAದಲೇ ವಿವಿಧ ಪೂಜಾ ಕೈಂಕರ್ಯಗಳು ಭಕ್ತರ ಸಮ್ಮುಖದಲ್ಲಿ ನೆರವೇರಿದವು. ವೈದಿಕರುಗಳಾದ ಕೃಷ್ಣ ಉಪಾಧ್ಯ, ಶ್ರೀನಿವಾಸ ಉಪಾಧ್ಯ, ಅರ್ಚಕರುಗಳಾದ ಷಣ್ಮುಖ , ಸುಬ್ರಮಣ್ಯ ಶಾಸ್ತಿçà ಹಾಗೂ ಕೋದಂಡರಾಮ ದೇವಾಲಯದ ಅರ್ಚಕ ಚಂದ್ರಕಾAತ್ ಭಟ್ ಹಾಗೂ ಇತರ ಅರ್ಚಕರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಭಕ್ತಾದಿಗಳಿಂದ ವಿಷ್ಣು ಸಹಸ್ರನಾಮ ಪಠಣ, ಭಜನೆ ನಡೆಯಿತು. ಮಧ್ಯಾಹ್ನ ಅನ್ನ ಸಂತರ್ಪಣೆ ನೆರವೇರಿತು.