..
ನನ್ನ ಪ್ರೀತಿಯ ಅಪ್ಪ...
ನನ್ನ ಅಪ್ಪನೇ ನನ್ನ ನಾಯಕ. ನನಗೆ ತಾಯಿ ಬದುಕು ನೀಡಿದ್ದಾರೆ. ತಂದೆ ಬದುಕುವ ಕನಸು ನೀಡಿದ್ದಾರೆ. ನಮ್ಮ ಅಪ್ಪ ಹೇಳಿದ್ದು ಒಂದೇ. ನಾವು ಪಟ್ಟ ಕಷ್ಟ ನಮಗೆ ಸಾಕು, ನಮ್ಮ ಹಾಗೆ ನೀನು ಆಗೋದು ಬೇಡ ಅಂತ ಹೇಳುತ್ತಿದ್ದರು ನನ್ನ ಅಪ್ಪ. ನನ್ನ ಪ್ರೀತಿಯ ಅಪ್ಪ ಮುಂದೆ ಜೀವನದಲ್ಲಿ ನಾನು ಎಲ್ಲಿ ಹೋಗುತ್ತೇನೋ ಗೊತ್ತಿಲ್ಲ. ಆದರೆ, ನೀನು ಮಾತ್ರ ನನ್ನ ಜೀವನದಲ್ಲಿ ಎಂದಿಗೂ ಮೊದಲಿಗನೇ ! ನೀವು ಎಷ್ಟೇ ನನ್ನ ಮೇಲೆ ಕೋಪ ತೋರಿಸಿದರೂ ಮನಸ್ಸಲ್ಲಿ ಬೆಟ್ಟ ದಷ್ಟು ಕನಸು ಪ್ರೀತಿ ಹೊಂದಿರುವ ಜೀವವೇ ನೀವು, ನನ್ನ ಅಪ್ಪ ನನ್ನ ಜೀವನದ ಮೊದಲನೇ ಗೆಳೆಯ. ಅಪ್ಪಂದಿರ ದಿನದ ಶುಭಾಶಯಗಳು… ನಿಮ್ಮ ಪ್ರೀತಿಯ ಮಗಳು. -ಸ್ಪಂದನ ರೈ ಎಂ. ವಿ., ೯ನೇ ತರಗತಿ
ಸಂತ ಜೋಸೆಫರ ಶಾಲೆ, ಮಡಿಕೇರಿ. ನನ್ನ ಅಪ್ಪ ನನ್ನ ಜೀವ...
ಅಪ್ಪಾ ನಿನ್ನನ್ನು ವರ್ಣಿಸಲು ಹೋದಷ್ಟು ಪದಗಳೇ ಸಾಲುವುದಿಲ್ಲ. ನನ್ನ ಬದುಕಿನ ಆಧಾರಸ್ಥಂಭವೇ ನನ್ನ ಅಪ್ಪ, ಅಪ್ಪನಿಲ್ಲದ ಬದುಕು ಊಹಿಸಲು ಸಾಧ್ಯವಿಲ್ಲ. ನನ್ನ ಸಂತೋಷ ಮತ್ತು ದುಃಖ ಇವೆರಡರಲ್ಲಿ ಭಾಗಿಯಾಗು ವವರು ನನ್ನ ಅಪ್ಪ. ಶಿಸ್ತುಭದ್ಧ ಜೀವನಶೈಲಿ, ಒಳ್ಳೆಯ ಗುಣ ಮತ್ತು ನಡೆ-ನುಡಿಯನ್ನು ಕಲಿಸುವಲ್ಲಿ ನನ್ನ ಅಪ್ಪನ ಪಾತ್ರ ಎಲ್ಲಕ್ಕಿಂತ ಮಿಗಿಲಾದುದು.
ನನ್ನ ಅಪ್ಪನನ್ನು ನಾನು ನನ್ನ ಜೀವನದ ಆದರ್ಶ ವ್ಯಕ್ತಿಯಾಗಿ ಪರಿಗಣಿಸುತ್ತೇನೆ. ನನ್ನ ಪ್ರತಿಯೊಂದು ಕೆಲಸದಲ್ಲಿ ಆಲೋಚನೆಯಲ್ಲಿ ಅವರು ನನಗೆ ಸ್ಫೂರ್ತಿಯನ್ನು ನೀಡುತ್ತಾರೆ. ನನ್ನ ಅಮ್ಮನಿಗೆ ಸಹಾಯ ಮಾಡುವ ರೀತಿ ಮತ್ತು ಇತರರ ಕಷ್ಟಗಳಿಗೆ ಸ್ಪಂದಿಸುವ ರೀತಿ ನನಗೆ ಸಂತೋಷ ಉಂಟುಮಾಡುತ್ತದೆ.
ನಾನು ತಪ್ಪು ಮಾಡಿದಾಗ ಗದರಿ ತಪ್ಪು ಯಾವುದು, ಸರಿ ಯಾವುದು ಎಂದು ತಿಳಿಸಿ ಕೊಡುವವರು ನನ್ನ ಅಪ್ಪ. ಅಪ್ಪಾ ಒಂದು ಅದ್ಭುತ ಶಕ್ತಿ. ನನ್ನ ಪಾಲಿಗೆ ಅವರು ರಾಜನಿದ್ದಂತೆ. ಸದಾ ತನ್ನ ಮನೆಯವರಿಗೋಸ್ಕರ ದುಡಿಯುವ ಒಂದು ಜೀವ. ದಿನಾ ಸಂಜೆ ಕೆಲಸ ಮುಗಿಸಿ ಬರುವ ಅಪ್ಪನ ದಾರಿಯನ್ನು ಕಾಯುವೆನು ನಾನು. ನನ್ನ ಅಪ್ಪ ನನ್ನ ಹೆಮ್ಮೆ ನಮಗೋಸ್ಕರ ಶ್ರಮಿಸುವ ನನ್ನ ಅಪ್ಪ ಎಂದೆAದಿಗೂ ಖುಷಿಯಾಗಿರಲಿ, ಹಾಗೆಯೇ ಎಲ್ಲಾ ಮಕ್ಕಳಿಗೂ ನನ್ನ ಅಪ್ಪನಂತೆ ತಪ್ಪು ಮಾಡಿದಾಗ ತಿದ್ದಿ ಬುದ್ಧಿ ಹೇಳಿ ಮುದ್ದು ಮಾಡುವ ಅಪ್ಪನೇ ಸಿಗಲಿ ಎಂದು ಆಶಿಸುತ್ತೇನೆ. ಆಕಾಶದಂತೆ ಎತ್ತರ ಸ್ಥಾನದಲ್ಲಿರುವ ಅಪ್ಪ ಕೇಳಿದನ್ನು ಮತ್ತು ನಾನು ಬಯಸಿದ್ದನ್ನು ತನಗೆ ಯಾವುದೇ ಕಷ್ಟ, ಬೇಸರ ಇದ್ದರೂ ನಿಸ್ವಾರ್ಥದಿಂದ ನೀಡುವ ದೇವರು. ವಿಶ್ವದ ಎಲ್ಲಾ ಅಪ್ಪಂದಿರಿಗೆ ಅಪ್ಪಂದಿರ ದಿನದ ಶುಭಾಶಯಗಳು.
-ವಿರಾಟ್ ಹೆಚ್., ೪ನೇ ತರಗತಿ
ಸಂತ ಜೋಸೆಫರ ಶಾಲೆ, ಮಡಿಕೇರಿ.ನನ್ನ ಅಪ್ಪ ನನ್ನ ಹೆಮ್ಮೆ
ನನ್ನ ಪ್ರೀತಿಯ ಅಪ್ಪ ಕಾನೂನಿನ ಸುವ್ಯವಸ್ಥೆಗಾಗಿ ಹಗಲಿರುಳು ದುಡಿಯುವ ಶಿಸ್ತಿನ ಆರಕ್ಷಕ, ಬದುಕಿಗೆ ಬೇಕಾದ ಕೌಶಲ್ಯಗಳನ್ನು ಕಲಿಸಿಕೊಟ ಗುರು. ಎಷ್ಟೇ ದಣಿದು ಬಂದರೂ ನನ್ನೊಂದಿಗೆ ಆಟವಾಡುತ್ತಾ ನಕ್ಕು-ನಲಿಸಿ, ನನ್ನ ನಗುವನ್ನು ನೋಡಿ ತನ್ನ ನೋವನ್ನು ಮರೆಯು ವರು. ನನ್ನ ಅಪ್ಪ ನನ್ನ ಜೀವನದ ಸ್ಫೂರ್ತಿ.
-ಯಶಿಕ ಎಸ್., ೬ನೇ ತರಗತಿ
ಸಂತ ಜೋಸೆಫರ ಶಾಲೆ, ಮಡಿಕೇರಿ.ಬದುಕಿಗೆ ಬಣ್ಣ ಹಚ್ಚುವ ಹೀರೋ
ನಂಬಿಕೆಗೆ ಇನ್ನೊಂದು ಹೆಸರು ಪಪ್ಪಾ.
ನಾ ಧರೆಗಿಳಿದು ಬಂದ ಕ್ಷಣ ಸಿಹಿ ಹಂಚಿದ ವೀರ
ನಾ ಅಂಬೆಗಾಲು ಇಡುವಾಗ ಕಣ್ಣಲ್ಲಿತ್ತು-ಪ್ರೀತಿ ಅಪಾರ
ತನ್ನ ಮನದಲ್ಲಿ ಅಡಗಿದ್ದರೂ ಕಷ್ಟದ-ಭಾರ
ನಾ ಕೇಳಿದ್ದನ್ನೆಲ್ಲಾ ಕೊಡಿಸುತ್ತಿದ್ದ ಸಾಹುಕಾರ ನನ್ನ ಪಪ್ಪಾ.
ಸಾಹುಕಾರ.
ಹೆದರಿ ಹಿಂದೆ ಸರಿದಾಗ ಹೆದರಿಕೆ-ಬಡಿದೋಡಿಸಿದ ನಾಯಕ
ಧೈರ್ಯವ ತುಂಬಿ ದಾರಿಗಿಳಿಸಿದÀ ಸಾಧಕ.
ಅಮ್ಮ ಒಂಭತ್ತು ತಿಂಗಳು ಹೊರುತ್ತಾಳೆ.
ಪಪ್ಪಾ ಇಪ್ಪತೈದು ವರ್ಷ ಸಾಕುತ್ತಾರೆ.
ಹೆತ್ತದ್ದು ಅಮ್ಮನಾದರೂ
ಬಿಗಿದಿಟ್ಟ ಉಸಿರು ಬಿಟ್ಟಿದ್ದು ಪಪ್ಪಾ.
ವಿದ್ಯೆ ತಲೆಗೆ ಹತ್ತಿಸಿದ್ದು ಅಮ್ಮನಾದರೂ
ಪ್ರತಿದಿನವು ದಾರಿದೀಪವಾಗಿದ್ದು ಪಪ್ಪಾ
ಆತ ಸಾಲ ಮಾಡುತ್ತಾನೆ, ಮಗಳ ಓದಿಗಾಗಿ ತನ್ನ ರೋಗಕ್ಕಾಗಿ.
ಮಕ್ಕಳ ಬರ್ತಡೇ ಗಿಫ್ಟ್ಟ್ಗಾಗಿ, ಪೋಸ್ಟ್ ಆಫೀಸಿನಲ್ಲಿ
ಆರ್ಡಿ ಅಕೌಂಟ್ ಮಾಡುತ್ತಾರೆ.
ತಂದೆಯೆAದರೇ ನನ್ನ ಶಕ್ತಿ, ನನ್ನ ಗುರು, ಸ್ನೇಹಿತನು ಹೌದು.
ತಾನು ಬಣ್ಣ ಹಾಕದೇ ನನ್ನ ಬದುಕಿಗೆ ಬಣ್ಣ ಹಚ್ಚುವ ಹೀರೋ ನನ್ನ ಪಪ್ಪಾ ‘I ಐove ಙou Pಚಿಠಿಚಿ…’
-ರಿಂಶಾ ಎನ್.ಎನ್.,
೬ನೇ ತರಗತಿ,
ಸಂತ ಜೋಸೆಫರ ಕಾನ್ವೆಂಟ್, ಮಡಿಕೇರಿಅಪ್ಪನ ಕೈಗಳು ಶ್ರಮಪಟ್ಟಾಗಲೇ ಮಕ್ಕಳ ಕೈಗಳು ಸುಂದರವಾಗಿ ಕಾಣೋದು
ಜೀವನದಲ್ಲಿ ಅಪ್ಪ, ಅಮ್ಮ ಎರಡು ಕಣ್ಣುಗಳು ಇದ್ದಹಾಗೆ. ಅವರಿಬ್ಬರೂ ನಮಗೆ ಜನ್ಮಕೊಟ್ಟ ದೇವರುಗಳು. ನಾವು ನಮಗೆ ಜನ್ಮ ಕೊಟ್ಟ ದೇವರುಗಳನ್ನು ಮನಪೂರ್ವಕವಾಗಿ ಪ್ರೀತಿಯಿಂದ ನೋಡಿಕೊಳ್ಳುವುದೇ ನಮ್ಮ ಜೀವನ. ಸಣ್ಣ ವಯಸ್ಸಿನಲ್ಲಿ ನಾವು ಮಕ್ಕಳಾಗಿರುತ್ತೇವೆ, ಅವರು ನಮ್ಮನ್ನು ಯಾವುದೇ ಕುಂದುಕೊರತೆ, ಹಸಿವು, ನೋವು, ನಲಿವು ಎಲ್ಲದರಲ್ಲೂ ಬಾಗಿಯಾಗಿ ನಮ್ಮನ್ನು ಒಂದು ವಯಸ್ಸಿಗೆ ಬರುವವರೆಗೂ ಅಥವಾ ನಮಗೆ ಪಕ್ಷಿಗಳಂತೆ ರೆಕ್ಕೆ ಬರುವವರೆಗೆ ಪ್ರೀತಿಯಿಂದ ನಮ್ಮ ಕಷ್ಟ-ಸುಖಗಳಿಗೆ ಸ್ಪಂದಿಸುತ್ತಾ ನಮ್ಮ ನೋವು-ನಲಿವುಗಳಿಗೆ ಆಸ್ಪದ ಕೊಡುತ್ತ ನಮ್ಮನ್ನು ಬೆಳೆಸಿರುತ್ತಾರೆ. ಆದರೆ, ಅವರ ಜೀವನದ ಕಷ್ಟ-ದುಖಗಳನ್ನು ಮೆರೆತಿರುತ್ತಾರೆ. ಅದೇ ರೀತಿ ನಾವು ಕೂಡ ಅವರಿಗೆ ವಯಸ್ಸಾದಾಗ ಅವರನ್ನು ಚೆನ್ನಾಗಿ ನೋಡಿಕೊಳ್ಳುವದು ನಮ್ಮ ಕರ್ತವ್ಯ. ಅಮ್ಮ-ಅಪ್ಪ ಇದರಲ್ಲಿ ಅಪ್ಪನ ಬಗ್ಗೆ ಹೇಳುವುದಾದರೆ ದೇವರು ಕರುಣಿಸಿದ ಬಹುದೊಡ್ಡ ಉಡುಗೊರೆ. ನಿಮ್ಮ ತ್ಯಾಗ, ಪ್ರೀತಿಯನ್ನು ವರ್ಣಿಸಲು, ಧನ್ಯವಾದ ಹೇಳಲು ಪದಗಳೇ ಸಾಲದು, ತಂದೆಯ ದಿನದ ಆಚರಣೆ ವರ್ಷಕ್ಕೆ ಒಮ್ಮೆ ಬರಬಹುದು. ಆದರೆ ನೀವು ನೀಡಿದ ಪ್ರೀತಿ, ತ್ಯಾಗ, ನಿಮ್ಮ ಸಿಟ್ಟಿನ ಗುಣ ನನ್ನನ್ನು ತಿದ್ದಿಕೊಳ್ಳುವಂತೆ ಮಾಡುತ್ತದೆ, ಗುರುವಾಗಿ ಮಾರ್ಗದರ್ಶನ ನೀಡುವಿರಿ. ಸ್ನೇಹಿತನಾಗಿ ಖುಷಿ ಕೊಟ್ಟಿರುವಿರಿ, ಪಕ್ಕದಲ್ಲಿ ನಿಂತು ಶಕ್ತಿ ತುಂಬುವಿರಿ, ಅಪ್ಪ ಈ ಋಣ ತೀರಿಸಲು ಈ ಜನ್ಮ ಸಾಲದು, ಅಪ್ಪ ಪ್ರತಿಯೊಬ್ಬರ ಪಾಲಿನ ಧೈರ್ಯ. ಅಪ್ಪ ಎಷ್ಟೇ ನಮಗೆ ತ್ಯಾಗ ಮಾಡಿದರೂ, ಅಪ್ಪ ಎನ್ನುವ ಪದಕ್ಕೆ ಕುಟುಂಬದಲ್ಲಿ ಹಿಂದಿನಿAದಲೂ ಮೊದಲೇ ಸ್ಥಾನ. ಅಪ್ಪ ಕುಟುಂಬದ ಹಿರಿಯ. ಅವರಿಗೆ ನಾವು ಸಲ್ಲಬೇಕಾದ ಪ್ರೀತಿ, ವಿಶ್ವಾಸ, ಗೌರವ ಎಲ್ಲವನ್ನು ಕೊಡಲು ಸಿದ್ಧರಿರಬೇಕು. ಅಪ್ಪನ ತ್ಯಾಗಕ್ಕೆ ಎಷ್ಟು ಧನ್ಯವಾದ ಹೇಳಿದರೂ ಸಾಲದು, ನಿಜ, ಆದರೂ ಸಾಂಕೇತಿಕವಾಗಿ ಒಂದು ದಿನವನ್ನು ಇವರಿಗೆಂದು ಮೀಸಲಿಡೋಣ. ಅಪ್ಪನ ದಿನದ ಶುಭಾಶಯವನ್ನು ನಾವೆಲ್ಲರೂ ಅವರಿಗೆ ತಿಳಿಸೋಣ. ಅವರ ಹಸನ್ಮುಖ ನಗುವನ್ನು ನೋಡಿ ಸಂತೋಷ ಪಡೋಣ. ಊಚಿಠಿಠಿಥಿ ಈಚಿಣheಡಿ ಆಚಿಥಿ, ಣhಚಿಟಿಞ ಥಿou ಜಿoಡಿ beiಟಿg ಚಿ ಠಿಚಿಡಿಣ oಜಿ ಥಿouಡಿ ಈಚಿmiಟಥಿ ಟove u, ಜಿoಡಿeveಡಿ ದೇಶ ಕಾಯುವ ಸೈನಿಕನಂತೆ ನಮ್ಮ ರಕ್ಷಣೆ ಮಾಡುವ ಯೋಧ ನೀನು. ನನಗೆ ನೀನು ದಿ ಬೆಸ್ಟ್ ಅಪ್ಪ. ನೀವು ನನಗೆ ಹೇಗೆ ಬದುಕ ಬೇಕೆಂದು ಹೇಳಿಕೊಡಲಿಲ್ಲ ಬದಲಿಗೆ ತೋರಿಸಿ ಕೊಟ್ಟಿದ್ದೀರಿ ಬದುಕುವ ಕಲೆ ಕಲಿಸಿದ ನಿಮಗೆ ಧನ್ಯವಾದ. -ಕನ್ನಂಡ ವರ್ಣ ಬೋಜಮ್ಮ,
೭ನೇ ತರಗತಿ,
ಕೊಡಗು ವಿದ್ಯಾಲಯ, ಮಡಿಕೇರಿ.ಅಪ್ಪಾ ಎಂದರೆ ಅದ್ಭುತ
ಅಪ್ಪನ ಬಗ್ಗೆ ಮಾತನಾಡಲು ಪದಗಳೇ ಸಾಕಾಗುತ್ತಿಲ್ಲ. ಅಪ್ಪ ಎಂದರೆ ಒಂದು ಅದ್ಭುತ ಅಪ್ಪ. ನನ್ನ ಜೀವನದ ಮೊದಲ ಸ್ನೇಹಿತ. ನಾನು ಹುಟ್ಟಿದಾಗಿನಿಂದಲೂ ಇಲ್ಲಿವರೆಗೆ ನನ್ನ ಜೀವನದ ಪ್ರತೀಕ್ಷಣವನ್ನು ತಿದ್ದಿ ತೀಡಿ ಹೇಳಿಕೊಟ್ಟಿದ್ದು ನನ್ನ ಅಪ್ಪ. ನನ್ನ ಅಪ್ಪ ನನ್ನನ್ನು ಕಿರುಬೆರಳಲ್ಲಿ ಕೈಹಿಡಿದು ನಡೆಯುವುದನ್ನು ಕಲಿಸಿದ ನನ್ನ ಅಪ್ಪನಿಗೆ ಎಷ್ಟೇ ಕಷ್ಟ ಇದ್ದರೂ ನನಗೆ ಕಷ್ಟ ಯಾವುದೆಂದು ತೋರಿಸಿದ ನನ್ನ ಅಪ್ಪ. ಕೆಲಸದ ಸಮಯದಲ್ಲಿ ನನಗೆ ಅಂತ ಸಮಯ ಕೊಟ್ಟ ನನ್ನ ಅಪ್ಪ. ನನ್ನ ಎಲ್ಲಾ ಸಾಧನೆಗೆ ಹೆಗಲಾಗಿ ನಿಂತ ನನ್ನ ಅಪ್ಪ ಗುರು-ಹಿರಿಯರಿಗೆ ಗೌರವ ಕೊಡುವುದನ್ನು ಹೇಳಿಕೊಟ್ಟ ನನ್ನ ಅಪ್ಪ. ಜೀವನದಲ್ಲಿ ಏನೇ ಆದರೂ ಹೆದರಬೇಡ ಧೈರ್ಯವಾಗಿ ಎದುರಿಸು ಅಂತ ಹೇಳಿಕೊಟ್ಟ ನನ್ನ ಅಪ್ಪ. ನಿಜವಾಗಲೂ ನೀನು ನನ್ನ ಜೀವನದ ಅತ್ಯಮೂಲ್ಯವಾದ ಹೀರೋ ಅಪ್ಪ, ನೀ ಹೇಳಿಕೊಟ್ಟ ದಾರಿಯಲ್ಲಿ ಸಾಗುತ್ತೇನೆ ಅಪ್ಪ.
ಅಪ್ಪಂದಿರ ದಿನದ ಶುಭಾಶಯಗಳು ಅಪ್ಪ, ನನ್ನಂತಹ ಅಪ್ಪ ಎಲ್ಲರಿಗೂ ಸಿಗಲಿ ನೀ ಯಾವಾಗಲೂ ಖುಷಿ-ಖುಷಿಯಾಗಿರು ಅಪ್ಪ.
-ರುಶಿಲ್ ಎಂ., ೭ನೇ ತರಗತಿ.ಅಪ್ಪ ನನ್ನ ದೇವರು
ನನ್ನಪ್ಪ ಶಿಸ್ತಿನ ಸಿಪಾಯಿ. ಅವರನ್ನು ನೋಡಿದರೆ ಗೌರವದ ಹೆದರಿಕೆ, ನನ್ನಪ್ಪ ದೇಶ ಸೇವೆಯಲ್ಲಿ ತೊಡಗಿಸಿಕೊಂಡಾಗಲೂ ನಮ್ಮ ಅಕ್ಕಂದಿರು ಹಾಗೂ ನನ್ನನ್ನು ಬಹಳ ಜವಾಬ್ದಾರಿಯಿಂದ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈಗ ನಿವೃತ್ತಿಯಾಗಿ ಬಂದ ನಂತರವೂ ಬಹಳ ಕ್ರಿಯಾಶೀಲರಾಗಿ ಉತ್ತಮ ಕೃಷಿಕರಾಗಿ, ಕಸದಿಂದ ರಸ ಎಂಬAತೆ ಮರದ ಬೇರುಗಳಲ್ಲಿ ವಿವಿಧ ಕಲಾಕೃತಿಗಳನ್ನು, ಸುಂದರ ಹೂತೋಟವನ್ನು, ನಾಣ್ಯ-ನೋಟುಗಳ ಸಂಗ್ರಹವನ್ನು ಮಾಡಿ ಏನಾದರೂ ಹೊಸತನವನ್ನು ಮಾಡಲು ಉತ್ಸುಕರಾಗಿರುತ್ತಾರೆ. ನಾವು ಸದಾ ಕ್ರೀಯಾಶೀಲರಾಗಲೂ ನೆರವಾಗುತ್ತಾರೆ. ಅದಕ್ಕಾಗಿ ಅಪ್ಪ ಎಂದರೆ ನನಗೆ ಇಷ್ಟ.
ಬೆಳಿಗ್ಗೆಯಿಂದ ತೋಟದಲ್ಲಿ ಕೆಲಸಮಾಡಿ ಎಷ್ಟೇ ಸುಸ್ತಾಗಿದ್ದರೂ ನನ್ನ ಜೀವನದ ಕನಸಾದ ಕ್ರಿಕೆಟಿಗೆ ಪ್ರೋತ್ಸಾಹ ನೀಡುತ್ತಾರೆ. ಹೆಗಲ ಮೇಲೆ ಭಾರದ ಕಿಟ್ ಹೊತ್ತುಕೊಂಡು ಮಂಗಳೂರು, ಮೈಸೂರು ಮಂಡ್ಯ, ಬೆಂಗಳೂರು ಎಲ್ಲಾ ಕಡೆ ಆಡಲು ಹೋದಾಗ ನೆರಳಿನಂತೆ ಜೊತೆಗೆ ಇರುತ್ತಾರೆ. ಅಪ್ಪ ನನ್ನ ದೇವರು.
-ಸೂರ್ಯ ತ್ರಿಭುವನ್ ಹೆಚ್. ಎಸ್.
೯ನೇ ತರಗತಿ, ಫಾತಿಮಾ ಕಾನ್ವೆಂಟ್, ಕುಶಾಲನಗರ.ಅಪ್ಪ ನನ್ನ ದೇವರು
ನನ್ನಪ್ಪ ಶಿಸ್ತಿನ ಸಿಪಾಯಿ. ಅವರನ್ನು ನೋಡಿದರೆ ಗೌರವದ ಹೆದರಿಕೆ, ನನ್ನಪ್ಪ ದೇಶ ಸೇವೆಯಲ್ಲಿ ತೊಡಗಿಸಿಕೊಂಡಾಗಲೂ ನಮ್ಮ ಅಕ್ಕಂದಿರು ಹಾಗೂ ನನ್ನನ್ನು ಬಹಳ ಜವಾಬ್ದಾರಿಯಿಂದ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈಗ ನಿವೃತ್ತಿಯಾಗಿ ಬಂದ ನಂತರವೂ ಬಹಳ ಕ್ರಿಯಾಶೀಲರಾಗಿ ಉತ್ತಮ ಕೃಷಿಕರಾಗಿ, ಕಸದಿಂದ ರಸ ಎಂಬAತೆ ಮರದ ಬೇರುಗಳಲ್ಲಿ ವಿವಿಧ ಕಲಾಕೃತಿಗಳನ್ನು, ಸುಂದರ ಹೂತೋಟವನ್ನು, ನಾಣ್ಯ-ನೋಟುಗಳ ಸಂಗ್ರಹವನ್ನು ಮಾಡಿ ಏನಾದರೂ ಹೊಸತನವನ್ನು ಮಾಡಲು ಉತ್ಸುಕರಾಗಿರುತ್ತಾರೆ. ನಾವು ಸದಾ ಕ್ರೀಯಾಶೀಲರಾಗಲೂ ನೆರವಾಗುತ್ತಾರೆ. ಅದಕ್ಕಾಗಿ ಅಪ್ಪ ಎಂದರೆ ನನಗೆ ಇಷ್ಟ.
ಬೆಳಿಗ್ಗೆಯಿಂದ ತೋಟದಲ್ಲಿ ಕೆಲಸಮಾಡಿ ಎಷ್ಟೇ ಸುಸ್ತಾಗಿದ್ದರೂ ನನ್ನ ಜೀವನದ ಕನಸಾದ ಕ್ರಿಕೆಟಿಗೆ ಪ್ರೋತ್ಸಾಹ ನೀಡುತ್ತಾರೆ. ಹೆಗಲ ಮೇಲೆ ಭಾರದ ಕಿಟ್ ಹೊತ್ತುಕೊಂಡು ಮಂಗಳೂರು, ಮೈಸೂರು ಮಂಡ್ಯ, ಬೆಂಗಳೂರು ಎಲ್ಲಾ ಕಡೆ ಆಡಲು ಹೋದಾಗ ನೆರಳಿನಂತೆ ಜೊತೆಗೆ ಇರುತ್ತಾರೆ. ಅಪ್ಪ ನನ್ನ ದೇವರು.
-ಸೂರ್ಯ ತ್ರಿಭುವನ್ ಹೆಚ್. ಎಸ್.
೯ನೇ ತರಗತಿ, ಫಾತಿಮಾ ಕಾನ್ವೆಂಟ್, ಕುಶಾಲನಗರ.ಕಣ್ಣಿಗೆ ಕಾಣುವ ದೇವರು
ಎಲ್ಲಾ ಹೆಣ್ಣು ಮಕ್ಕಳಿಗೆ ಅಪ್ಪನೆಂದರೆ ಪ್ರೀತಿಸುವ ಜೀವ. ನನಗೂ ಕೂಡ ನನ್ನಪ್ಪ ಎಂದರೆ ಬಹು ಪ್ರೀತಿ, ನನ್ನ ಅಪ್ಪನನ್ನು ಸೂಪರ್ ಸ್ಟಾರ್ ಎಂದೇ ಕರೆಯಲು ಇಷ್ಟಪಡುತ್ತೇನೆ. ಏಕೆಂದರೆ ತನಗೆ ಏನೇ ಕಷ್ಟ-ನೋವುಗಳಿದ್ದರು. ಅವರು ನಮ್ಮೆದಿರು ನಗುನಗುತ್ತಿರುತ್ತಾರೆ. ತಪ್ಪು ಮಾಡಿದಾಗ ಬೈದು ತಿದ್ದುವ ಹಾಗೂ ನಮಗೆ ದಿಕ್ಕು ತೊರದಿರುವಾಗ ಕೈಹಿಡಿದು ಧೈರ್ಯ ತುಂಬುವವರು ಅಪ್ಪ.
ದೇಶ ಸೇವೆ ಮಾಡಿದ ನನ್ನ ಅಪ್ಪನ ಮೇಲೆ ಅತಿಯಾದ ಗೌರವ, ಹೆಮ್ಮೆ. ಅವರು ಸೈನ್ಯದಿಂದ ರಜೆಯಲ್ಲಿ ಮನೆಗೆ ಬರುವುದನ್ನೇ ಕಾಯುತ್ತಿದ್ದ ನಮಗೆ ಬಂದ ನಂತರ ಅವರೊಂದಿಗೆ ಕಳೆಯುತ್ತಿದ್ದ ಕ್ಷಣಗಳನ್ನು ವ್ಯಕ್ತಪಡಿಸಲು ಅಸಾಧ್ಯ ನಮ್ಮ ಮುಂದಿನ ಭವಿಷ್ಯದ ಬಗ್ಗೆ ಯಾವಾಗಲೂ ಆಲೋಚಿಸುವ ಅಪ್ಪ ನಮ್ಮ ಮುಂದಿನ ಬದುಕಿನ ದಾರಿದೀಪ. ಅಮ್ಮ ಜೀವವನ್ನು ನೀಡಿದರೆ, ಅಪ್ಪ ಜೀವನವನ್ನು ರೂಪಿಸುವ ಶಿಲ್ಪಿ. ಸದಾ ನಮಗೆ ಸ್ಫೂರ್ತಿ ತುಂಬುವ ಈ ಜೀವಕ್ಕೆ ಎಂದೆAದೂ ಚಿರೃಋಣಿಯಾಗಿರು ತ್ತೇನೆ. ಅಪ್ಪ ಐ ಲವ್ ಯೂ ಅಪ್ಪ.
-ದೇಶಕೋಡಿ ಮಾನ್ಯ ದೇವಿಪ್ರಕಾಶ್,
೧೦ನೇ ತರಗತಿ ಸಂತ ಜೋಸೆಫರ ಶಾಲೆ, ಮಡಿಕೇರಿ.ಅಪ್ಪ ನನ್ನ ಜೀವ
ಅಪ್ಪ ಎಂದರೆ ಹೆಣ್ಣುಮಕ್ಕಳಿಗೆ ತುಂಬಾ ಪ್ರೀಯವಾದವರು. ನನ್ನ ಅಪ್ಪ ಎಂದರೆ ನನಗೆ ಗೌರವ, ಹೆಮ್ಮೆ, ಶಿಸ್ತು ಕಲಿಸಿದವರು. ಅಪ್ಪಾ ಎಷ್ಟೇ ಬೈದರೂ ಒಂದೇ ನಿಮಿಷ. ಆ ಕೋಪ ಮತ್ತೆ. ಮತ್ತೆ ನನಗೆ ಅವರು ಅವರಿಗೆ ನಾನು. ನಮ್ಮ ಪುಟ್ಟ ಸಂಸಾರವನ್ನು ನೋಡಿಕೊಳ್ಳುತ್ತಿರುವುದು ನಮ್ಮ ಅಪ್ಪ. ಎಷ್ಟೇ ಕಷ್ಟವಾದರು ಕೇಳಿದನೆಲ್ಲ ಕೊಡಿಸುತ್ತಾರೆ. ಅಪ್ಪ ಎಂದರೆ ಪ್ರಾಣ ನನಗೆ. ನಮ್ಮ ಮನೆಯ ಯಜಮಾನ ನನ್ನ ಅಪ್ಪ. ಅವರಿಂದ ನಾನು ತುಂಬಾ ಕಲಿತಿದ್ದೇನೆ. ಇನ್ನು ಕಲಿಯುವುದು ತುಂಬಾ ಇದೆ. ಅಪ್ಪ ಏನೇ ಹೇಳಿದರೂ ನನ್ನ ಒಳ್ಳೆಯದಕ್ಕೆ ಹೇಳುತ್ತಾರೆ ಅಪ್ಪ ನನಗೆ ಒಳ್ಳೆಯ ಗೆಳೆಯ ಕೂಡ ಹೌದು. ಅಪ್ಪ ನನಗಾಗಿ ತುಂಬಾ ಕಷ್ಟಪಡುತ್ತಿದ್ದಾರೆ; ಅವರಿಗೆ ಯಾವಾಗಲೂ ಚಿರರುಣಿಯಾಗಿರುತ್ತೇನೆ. ಅವರ ನಡವಳಿಕೆ, ಶಿಸ್ತು ಗೌರವ ಇದೆಲ್ಲ ನನಗೆ ಅಚ್ಚುಮೆಚ್ಚು. ಈ ಪ್ರಪಂಚದಲ್ಲಿ ತುಂಬಾ ಇಷ್ಟಪಡುವ ಜೀವ ಎಂದರೆ ಅಪ್ಪ. ಅಪ್ಪ ಲವ್ ಯು ಪಾ.
-ದರ್ಶಿನಿ ಜಿ, ೯ನೇ ತರಗತಿ,
ಓ.ಎಲ್.ವಿ ಪ್ರೌಢ ಶಾಲೆ, ಸೋಮವಾರಪೇಟೆದೇವರು ಕೊಟ್ಟ ಗಿಫ್ಟ್
ನೀವು ನಮಗಾಗಿ ಹರಿಸುವ ಒಂದೊAದು ಬೆವರಿನ ಹನಿಯ ಋಣ ಹೇಗಪ್ಪಾ ತೀರಿಸಲಿ
ನೀವು ಆ ದೇವರು ನನಗೆ ಕೊಟ್ಟ ಅಮೂಲ್ಯವಾದ ಗಿಫ್ಟ್
ಅದಕ್ಕಾಗಿ ಆ ದೇವರಿಗೆ ಒಂದು ಥ್ಯಾಂಕ್ಸ್…
ಅಪ್ಪಾ ನೀವು ಹೆಮ್ಮೆ ಪಡುವ ಮಗಳು ನಾನಾಗುವೆ
ಇದು ನನ್ನ ಪ್ರಾಮೀಸ್, ದೇಶ ಕಾಯುವ
ಸೈನಿಕನಂತೆ ನಮ್ಮ ರಕ್ಷಣೆ ಮಾಡುವ ಯೋಧ ನೀವು
ನನಗೆ ನೀವು ದಿ ಬೆಸ್ಟ್ ಅಪ್ಪಾ…
ತಾಯಿ ಮಮತೆಯ ಮಡಿಲು ನೀಡಿದರೆ,
ತಂದೆ ರಕ್ಷಣೆಯ ಭುಜ ನೀಡುತ್ತಾರೆ
ನೀವೇ ನನ್ನ ಬೆನ್ನೆಲುಬು
ಎಂದು ಹೇಳುತ್ತಾ ಪ್ರೀತಿಯ ನನ್ನಪ್ಪನಿಗೆ
ಅಪ್ಪಂದಿರ ದಿನದ ಶುಭಾಶಯಗಳು
-ಹೇಮಾನಿ ಎನ್. ಎಸ್.,
ಶಾಂತಿನಿಕೇತನ ಶಾಲೆ, ಕೊಡಗರಹಳ್ಳಿನನ್ನ ಅಪ್ಪ ನನ್ನ ಶಕ್ತಿ…
ನನ್ನ ಅಪ್ಪನಿಗೆ ನಾವು ಇಬ್ಬರು ಹೆಣ್ಣು ಮಕ್ಕಳು. ಅಪ್ಪ ಅಂದರೆ ನಮಗೆ ತುಂಬಾ ಸಂತೋಷ, ಭರವಸೆ ಮತ್ತು ನಂಬಿಕೆ. ನನ್ನ ತಂಗಿಗAತೂ ಅಪ್ಪನನ್ನು ಕಂಡರೆ ತುಂಬಾ ಅಚ್ಚುಮೆಚ್ಚು. ನಮ್ಮ ಎಲ್ಲಾ ಬೇಡಿಕೆಗಳನ್ನು ಅಪ್ಪ ಈಡೇರಿಸುತ್ತಾರೆ. ಅಪ್ಪನಿಗೆ ನಮ್ಮ ಭವಿಷ್ಯದ ಬಗ್ಗೆ ತುಂಬಾ ಕಾಳಜಿ. ನಮ್ಮ ಬಗ್ಗೆ ಹೊರಗೆ ಕೋಪ ತೋರಿಸಿದರೂ ಹೃದಯದಲ್ಲಿ ನಿಸ್ವಾರ್ಥ ಪ್ರೀತಿ, ಮನಸ್ಸಿನಲ್ಲಿ ಕ್ಷಮಾಗುಣ. ನಮಗೆ ಬೆಂಬಲವಾಗಿ ಸದಾ ಜೊತೆಯಿರು ತ್ತಾರೆ. ನನ್ನ ಅಪ್ಪ ಒಬ್ಬ ಕೃಷಿಕ ಎಂದು ನಾನು ಹೆಮ್ಮೆಯಿಂದ ಹೇಳುತ್ತೇನೆ. ಅಪ್ಪ ಸಮಾಜದಲ್ಲಿ ಬಡವ-ಶ್ರೀಮಂತ ಎಂದು ಬೇಧ-ಭಾವ ಮಾಡುವುದಿಲ್ಲ ಯಾರಾದರೂ ಸಹಾಯ ಕೇಳಿದರೆ ಇಲ್ಲ ಎನ್ನುವುದಿಲ್ಲ. ಚಿಕ್ಕ ಪುಟ್ಟ ಸಮಸ್ಯೆಗಳಿಗೆ ಹೆದರಬಾರದು, ಯಾವಾಗಲೂ ದೈರ್ಯದಿಂದ ಇರಬೇಕೆಂದು ಅಪ್ಪನಿಂದ ಕಲಿತೆ. ನನ್ನ ಬಗ್ಗೆ ಅಪ್ಪನಿಗೆ ಹೆಚ್ಚು ನಿರೀಕ್ಷೆ. ನಾನು ಓದಿ ಏನಾಧರೂ ಸಾಧನೆ ಮಾಡಬೇಕೆಂಬುದು ಅವರ ಆಸೆ. ಹಣ ಸಂಪಾದನೆ ಮಾಡುವುದಕ್ಕಿಂತ ಹೆಚ್ಚಾಗಿ ಸಮಾಜ ದಲ್ಲಿ ಹೆಮ್ಮೆ ಮತ್ತು ಗೌರವ ತಂದು ಕೊಡುವ ಕೆಲಸ ಮಾಡಬೇಕೆಂದು ಹೇಳುತ್ತಾರೆ. ಅಪ್ಪನ ಆಸೆ ಈಡೇರಿಸು ವುದೇ ನನ್ನ ಗುರಿ. ನಾನು ಮುಂದೆ ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿ ಕೊಳ್ಳುತ್ತೇನೆ.
-ಕರ್ಣಯ್ಯನ ಪೂರ್ವಿಕ ಸಂದೀಪ್,
೧೦ನೇ ತರಗತಿ ಶ್ರೀಕೃಷ್ಣ ವಿದ್ಯಾ ಮಂದಿರ ಶಾಲೆ, ಸಿದ್ದಾಪುರ.ನಗು ಮುಖದ ಅಪ್ಪ…
ಅಪ್ಪ ಎಂದರೆ ಆಕಾಶ. ಅಪ್ಪ-ಪ್ರಪಂಚ, ಏಕೆಂದರೆ ಅಪ್ಪನ ಮನಸ್ಸು ಪ್ರಪಂಚದಷ್ಟು ವಿಶಾಲ. ಪ್ರೀತಿ ಆಕಾದಷ್ಟು ಎತ್ತರ. ನನ್ನ ಅಪ್ಪ ಇಲ್ಲಿರವರೆಗೂ ನನಗೆ ಯಾವುದಕ್ಕೂ ಕಡಿಮೆ ಮಾಡಿಲ್ಲ, ನಾನು ಕೇಳಿದ್ದೆಲ್ಲ ಕೊಡಿಸಿದ್ದಾರೆ. ದಿನ ರಾತ್ರಿ ಮನೆಗೆ ಬರುವಾಗ ಬರಿಗೈಯಲ್ಲಿ ಬಂದವರೇ ಅಲ್ಲ. ನಮಗೆ ತಿನ್ನಲು ಏನಾದರೂ ತರಲೆಬೇಕು. ಮನಸ್ಸಿಲ್ಲಿ ಸಾವಿರ ಚಿಂತೆಗಳನ್ನು ತುಂಬಿದರೂ ನಮ್ಮನ್ನು ನೋಡಿದಾಕ್ಷಣ ಆ ಚಿಂತೆಯನ್ನೆಲ್ಲ ಮರೆಮಾಚಿ ಮುಖದಲ್ಲಿ ನಗು ತುಂಬಿಕೊಳ್ಳುವ ಜೀವನ ನನ್ನ ಅಪ್ಪ.
ನಾವು ಚೆನ್ನಾಗಿ ಓದಿ ಜೀವನದಲ್ಲಿ ದೊಡ್ಡ ಸಾಧನೆ ಮಾಡಬೇಕೆಂಬುದು ನನ್ನ ಅಪ್ಪನ ಆಸೆ. ಅದಕ್ಕೆ ನನ್ನ ಅಪ್ಪ ಕಷ್ಟಪಟ್ಟು ದುಡಿದು ನಮ್ಮನ್ನು ಓದಿಸುತಿದ್ದಾರೆ.ಅಪ್ಪನ ಆಸೆಯಂತೆ ನಾನು ಚೆನ್ನಾಗಿ ಓದಿ ಜೀವನದಲ್ಲಿ ದೊಡ್ಡ ಸಾಧನೆಯನ್ನು ಮಾಡುತ್ತೇನೆ. ನನ್ನ ಅಪ್ಪನ ಆಸೆಯನ್ನು ಖಂಡಿತ ನೆರವೇರಿಸುತ್ತೇನೆ. ನೀವು ಅಪ್ಪನ ಬಗ್ಗೆ ೪ ಸಾಲುಗಳನ್ನು ಬರೆಯಲು ಹೇಳಿದ್ದೀರಿ. ಆದರೆ ನನ್ನ ಅಪ್ಪನ ಬಗ್ಗೆ ೪ ಸಾಲುಗಳು ಅಲ್ಲ ಬರೆಯಲು ಪದಗಳೇ ಸಾಲದು. ಏಕೆಂದರೆ ನನ್ನ ಅಪ್ಪ ನನ್ನ ಹೀರೂ. ತಾಯಿ ಮಗುವನ್ನು ಸೊಂಟದಲ್ಲಿ ಕೂರಿಸಿಕೊಳ್ಳುತ್ತಾಳೆ. ಏಕೆಂದರೆ ತನಗೆ ಕಾಣುವುದು ತನ್ನ ಮಗುವಿಗೂ ಕಾಣಿಸಲಿ ಎಂದು. ಆದರೆ ತಂದೆ ಹೆಗಲಲ್ಲಿ ಕೂರಿಸಿಕೊಳ್ಳುತ್ತಾನೆ ಏಕೆಂದರೆ ತನಗೆ ಕಾಣದೆ ಇರುವುದು ತನ್ನ ಮಗುವಿಗೆ ಕಾಣಲಿ ಎಂದು. ಇದೇ ರೀತಿ ನಮ್ಮ ಅಪ್ಪ ನಮಗೋಸ್ಕರ ಹಗಲು ರಾತ್ರಿ ಕಷ್ಟಪಟ್ಟು ದುಡಿದು ನಮ್ಮನ್ನು ಓದಿಸುತ್ತಿದ್ದಾರೆ. ಏಕೆಂದರೆ ಅವರ ಮನಸಲ್ಲಿ ಇರುವುದು ಅವರು ಪಟ್ಟ ಕಷ್ಟ ನಮಗೆ ಬರಬಾರದೆಂದು. ಅಪ್ಪ ನಮಗೆ ಒಳ್ಳೆಬುದ್ಧಿಯನ್ನು ಹೇಳಿಕೊಡುತ್ತಾರೆ. ಅದನ್ನು ನಾವು ಚಾಚುತಪ್ಪದೆ ಪಾಲಿಸಿದರೆ ನಾವು ಹೂವಿನ ದಾರಿಯಲ್ಲಿ ಹೋಗುತ್ತೇವೆ. ವಿರೋಧಿಸಿದರೆ ಮುಳ್ಳಿನ ದಾರಿಯಲ್ಲಿ ಹೋಗುವವು ಸಂದರ್ಭ ಬರುತ್ತದೆ. ಅದಕ್ಕೆ ನಾನು ಎಲ್ಲಾ ಮಕ್ಕಳಲ್ಲಿ ಕೇಳಿಕೊಳ್ಳುವುದು ಒಂದೇ. ಅಪ್ಪನ ಮಾತಿಗೆ ಬೆಲೆ ಕೊಡಿ. ಅವರ ಮಾತನ್ನು ಎಂದಿಗೂ ವಿರೋಧಿಸಬೇಡಿ. ಅಪ್ಪನ ಮನಸ್ಸನ್ನು ಎಂದಿಗೂ ನೋಯಿಸ ಬೇಡಿ. ಅಪ್ಪ-ಅಮ್ಮನನ್ನು ಪ್ರೀತಿಸಿ ಗೌರವಿಸಿ.
-ಯಶಸ್ವಿನಿ ಎಂ.ಎಚ್.,
೮ನೇ ತರಗತಿ,
ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆ, ಮಡಿಕೇರಿನನ್ನ ಆತ್ಮೀಯ ಸ್ನೇಹಿತ
ನನ್ನ ಅಪ್ಪ ಎಂದರೆ ನನಗೆ ತುಂಬಾ ಇಷ್ಟ. ನನಗೆ ನನ್ನ ಅಪ್ಪ ನನ್ನ ಆತ್ಮೀಯ ಸ್ನೇಹಿತ. ಅವರು ಯಾವಾಗಲೂ ನನ್ನನ್ನು ಮತ್ತು ನನ್ನ ಕುಟುಂಬವನ್ನು ಖುಷಿಯಿಂದ ನೋಡಿಕೊಳ್ಳುತ್ತಾರೆ. ಅಪ್ಪ ನನಗೆ ಬೇಕಾದ ಎಲ್ಲವನ್ನು ಕೊಡಿಸುತ್ತಾರೆ ಹಾಗೂ ಅವರು ನಮ್ಮೆಲ್ಲರನ್ನು ತುಂಬಾ ಪ್ರೀತಿಸುತ್ತಾರೆ ಮತ್ತು ಯಾವಾಗಲೂ ನಮ್ಮ ಎಲ್ಲಾ ಆಸೆಗಳನ್ನು ಪೂರೈಸಲು ಪ್ರಯತ್ನಿಸುತ್ತಾರೆ. ನನ್ನ ಅಪ್ಪ ಶುಚಿತ್ವದ ಬಗ್ಗೆ ಹೆಚ್ಚು ಗಮನವಹಿಸುತ್ತಾರೆ ಹಾಗೂ ನನಗೆ ಶುಚಿತ್ವವನ್ನು ಕಾಪಾಡುವುದನ್ನು ಹೇಳಿಕೊಟ್ಟಿದ್ದಾರೆ. ಅವರು ನನಗೆ ಒಳ್ಳೆಯ ಅಭ್ಯಾಸವನ್ನು ಕಲಿಸಿದ್ದಾರೆ. ನನ್ನ ಅಪ್ಪ ನನಗೆ ಸಂತೋಷದ ನಿಜವಾದ ಅರ್ಥವನ್ನು ಕಲಿಸಿಕೊಟ್ಟಿದ್ದಾರೆ. ನಾನು ತಪ್ಪು ಮಾಡಿದಾಗ ಅಪ್ಪ ನನಗೆ ತಿದ್ದಿ ಬುದ್ಧಿ ಹೇಳುತ್ತಾರೆ. ಮನೆಯಲ್ಲಿ ಅಪ್ಪ ನಮ್ಮ ಕುಟುಂಬದ ಮುಖ್ಯಸ್ಥ ಹಾಗೂ ನನ್ನ ತಂದೆ ನನಗೆ ಯಾವಾಗಲೂ ಸೂಪರ್ ಸ್ಟಾರ್. ಅದಕ್ಕಾಗಿಯೇ ನಾನು ನನ್ನ ತಂದೆ ಯನ್ನು ನನ್ನ ಜೀವನದ ಹೀರೆÆÃ ಎಂದು ಹೇಳಬಲ್ಲೇ ಅಪ್ಪಂದಿರ ದಿನದ ಶುಭಾಶಯ ಗಳು ಅಪ್ಪ.
-ಹೇಮಶ್ರೀ ಬಿ.ಸಿ., ೮ನೇ ತರಗತಿ,
ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆ, ಸುಂಟಿಕೊಪ್ಪಅಪ್ಪ ಎಂದರೆ ಜೀವ