ಮಡಿಕೇರಿ, ಜೂ. ೧೮: ಅಖಿಲ ಭಾರತ ಸಾಹಿತ್ಯ ಪರಿಷದ್ ಕೊಡಗು ಘಟಕದಿಂದ ಮಡಿಕೇರಿಯ ಭಾರತೀಯ ವಿದ್ಯಾಭವನದ ಸಭಾಂಗಣದಲ್ಲಿ "ಕವಿತೆಗಳ ಮಳೆ" ಎಂಬ ವಿನೂತನ ಶೈಲಿಯ ಕವಿಗೋಷ್ಠಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದ ಪರಿಷದ್ ಮಂಗಳೂರು ವಿಭಾಗ ಸಂಯೋಜಕ ಸುಂದರ್ ಶೆಟ್ಟಿ ಭಾರತೀಯ ಮೌಲ್ಯವಾದ ‘ವಸುದೈವ ಕುಟುಂಬಕA’ ಮೂಲಕ ವಿಶ್ವ ಸಹೋದರತ್ವದ ಸಂದೇಶ ಸಾರಿದರು. ಕಾರ್ಯಕ್ರಮದಲ್ಲಿ ಕವಿಗಳು ಕವಿತೆಗಳನ್ನು ವಾಚಿಸಿ ರಂಜಿಸಿದರು.

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮನೋವೈದ್ಯ ತಜ್ಞ ಡಾ. ಸತೀಶ್, ಶಕ್ತಿ ಪತ್ರಿಕೆಯ ಸಲಹಾ ಸಂಪಾದಕ ಅನಂತಶಯನ, ಕವಯತ್ರಿ ಸುನೀತಾ ಕುಶಾಲನಗರ, ಚುಟುಕು ಕವಿ ಹಾತಿ ಜಯಪ್ರಕಾಶ್, ಆಕಾಶವಾಣಿ ಉದ್ಘೋಷಕ ವಿನೋದ್ ಮೂಡಗದ್ದೆ, ಹಿರಿಯ ವೈದ್ಯ ಡಾ. ಸೂರ್ಯಕುಮಾರ್, ಪತ್ರಕರ್ತ ರಂಜಿತ್ ಕವಲಪಾರ ಸೇರಿದಂತೆ ಕವಿಗಳು ಭಾಗವಹಿಸಿದ್ದರು. ಸಂವಾದದಲ್ಲಿ ಮಾತನಾಡಿದ ಸಾಹಿತಿ ಸ್ಮಿತಾ ಅಮೃತರಾಜ್ ಅವರು ಮಳೆಗಾಲ ಮತ್ತು ಹದಿಹರೆಯ ಎಂತವರನ್ನೂ ಕವಿತೆ ಬರೆಯುವಂತೆ ಪ್ರೇರೇಪಿಸುತ್ತದೆ ಎಂದು ಹೇಳಿದರು.

ಪರಿಷದ್ ಕಾರ್ಯದರ್ಶಿ ಬಬ್ಬೀರ ಸರಸ್ವತಿ ನಿರೂಪಿಸಿದರೆ, ಜಿಲ್ಲಾಧ್ಯಕ್ಷ ಮೇಜರ್ ಡಾ. ಕುಶ್ವಂತ್ ಕೋಳಿಬೈಲು ಸಂವಾದ ನಡೆಸಿಕೊಟ್ಟರು.