ವೀರಾಜಪೇಟೆ, ಜೂ.೧೮: ಮಹಿಳೆಯೊಬ್ಬರ ಆ್ಯಪಲ್ ಫೋನ್, ಹಣ, ಕ್ರೆಡಿಟ್ -ಡೆಬಿಟ್ ಕಾರ್ಡ್ ಇದ್ದ ಬ್ಯಾಗ್ ಅನ್ನು ಕದ್ದೊಯ್ದ ಕಳ್ಳನನ್ನು ಕೆಲವೇ ಗಂಟೆಗಳಲ್ಲಿ ಸೀನಿಮಿಯ ಶೈಲಿಯಲ್ಲಿ ಪತ್ತೆಹಚ್ಚಿದ ರೋಚಕ ಘಟನೆ ಶನಿವಾರ ವೀರಾಜಪೇಟೆಯಲ್ಲಿ ನಡೆದಿದೆ. ಮೂಲತಃ ನಂಜನಗೂಡಿನ ನಾಗೇಶ್ ಬಂಧಿತ ಆರೋಪಿ. ಕಳ್ಳನನ್ನು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ. ಸದ್ಯ ಆತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಬ್ಯಾಗ್‌ನಿಂದ ಎರಡು ಸಾವಿರ ರೂ. ಮಾತ್ರ ತೆಗೆದಿದ್ದೇನೆ. ಮೊಬೈಲ್ ಫೋನ್ ಸೇರಿದಂತೆ ಇತರೆ ವಸ್ತುಗಳನ್ನು ಚರಂಡಿಗೆ ಎಸೆದಿರುವುದಾಗಿ ತಿಳಿಸಿದ್ದಾನೆ. ಬಳಿಕ ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿ ಮೊಬೈಲ್ ಫೋನ್ ಇದ್ದ ಬ್ಯಾಗ್ ಅನ್ನು ಚರಂಡಿಯಿAದ ಹೊರ ತೆಗೆದಿದ್ದಾರೆ. ೩ಆರನೇ ಪುಟಕ್ಕೆ
(ಮೊದಲ ಪುಟದಿಂದ)
ಘಟನೆ ವಿವರ
ವೀರಾಜಪೇಟೆಯಲ್ಲಿ ನಾಟ್ಯ ಮಯೂರಿ ನೃತ್ಯ ಶಾಲೆ ಸಂಸ್ಥಾಪಕಿ ಪ್ರೇಮಾಂಜಲಿ ಆಚಾರ್ಯ ಅವರು ಕರುನಾಡ ಪ್ರಶಸ್ತಿ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮಕ್ಕೆ ‘ಕಾಂತಾರ’ ಸಿನಿಮಾ ಖ್ಯಾತಿಯ ನಟರಾದ ಬಾಸುಮ ಕೊಡಗು, ಸತೀಶ್ ಆಚಾರ್ಯ ಆಗಮಿಸಿದ್ದರು. ಅಲ್ಲದೆ ಗಾಯಕ ಶಶಿಧರ್ ಕೋಟೆ, ಧರ್ಮದರ್ಶಿ ಅಶೋಕ್ ಶೆಟ್ಟಿ ಸೇರಿದಂತೆ ಅನೇಕ ಗಣ್ಯರ ಉಪಸ್ಥಿತಿ ಇತ್ತು. ಈ ಕಾರ್ಯಕ್ರಮಕ್ಕೆ ಉದ್ಯಮಿ ಪೂಜಾ ಕೂಡ ಆಗಮಿಸಿದ್ದರು. ಅವರು ದೀಪ ಬೆಳಗಿಸುವ ಕಾರ್ಯಕ್ರಮದ ವೇಳೆ ವೇದಿಕೆಗೆ ಹತ್ತಿದ್ದಾರೆ.
ಈ ವೇಳೆ ತಮ್ಮ ಬ್ಯಾಗ್ ಅನ್ನು ವೇದಿಕೆ ಮುಂಭಾಗದಲ್ಲಿ ಕುಳಿತಿದ್ದ ಗಣ್ಯರ ಚೇರ್‌ನಲ್ಲಿ ಇರಿಸಿದ್ದಾರೆ. ಇದೇ ಸಮಯ ನೋಡಿಕೊಂಡು ಕಳ್ಳ ಬ್ಯಾಗ್ ಕದ್ದು ಪರಾರಿ ಆಗಿದ್ದಾನೆ. ಒಂದೆರಡು ಗಂಟೆ ಕಳೆದು ಈ ವಿಷಯ ಪ್ರೇಮಾಂಜಲಿ ಅವರಿಗೆ ಗೊತ್ತಾಗಿದೆ. ಬ್ಯಾಗ್‌ಗಾಗಿ ಹುಡುಕಾಡಿದ್ದಾರೆ. ಆದರೆ ಎಲ್ಲೂ ಬ್ಯಾಗ್ ಸಿಗಲಿಲ್ಲ. ಕಾವೇರಿ ಕಲ್ಯಾಣ ಮಂಟಪದ ಸಿಸಿ ಕ್ಯಾಮೆರಾ ಪರಿಶೀಲನೆ ಮಾಡಿದ್ದಾರೆ. ವ್ಯಕ್ತಿಯೊಬ್ಬ ಬ್ಯಾಗ್ ಕದ್ದು ಪರಾರಿಯಾಗಿರುವುದು ಬೆಳಕಿಗೆ ಬಂದಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಸಹಿತ ಸಂದೇಶ ರವಾನೆ ಆದ ಹಿನ್ನೆಲೆ ಕೆಲವೇ ಗಂಟೆಗಳಲ್ಲಿ ಕಳ್ಳನ ಬಗ್ಗೆ ಮಾಹಿತಿ ಲಭಿಸಿದೆ. ವ್ಯಕ್ತಿಯೊಬ್ಬರು ಕರೆ ಮಾಡಿ ಸಂದೇಶ ರವಾನಿಸಿದ ಅನಿಲ್ ಅವರಿಗೆ ಕಳ್ಳನ ಸುಳುವು ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ತೆರಳಿದ ಅನಿಲ್ ಆಟೋ ರಿಕ್ಷಾವನ್ನು ಅಡ್ಡಹಾಕಿ ಕಳ್ಳನನ್ನು ಹಿಡಿದಿದ್ದಾರೆ. ಬಳಿಕ ಪೊಲೀಸ್ ಠಾಣೆಗೆ ಕರೆ ಮಾಡಿದಾರೆ. ವಿಚಾರಣೆ ವೇಳೆ ಕಳ್ಳತನದ ಬಗ್ಗೆ ಸತ್ಯಾಂಶ ಒಪ್ಪಿಕೊಂಡಿದ್ದಾನೆ. ಕೊನೆಗೆ ಚರಂಡಿಯಲ್ಲಿ ಆ್ಯಪಲ್ ಮೊಬೈಲ್ ಸಹಿತ ಬ್ಯಾಗ್ ಪತ್ತೆಯಾಗಿದೆ. ಪಕ್ಕದಲ್ಲಿ ಕುಳಿತ ವ್ಯಕ್ತಿಯ ಗಮನಕ್ಕೆ ಬಾರದ ರೀತಿಯಲ್ಲಿ ನಾಜೂಕಾಗಿ ಕಳ್ಳತನ ಎಸಗಿ ಪರಾರಿಯಾಗಲು ಯತ್ನಿಸಿದ್ದ ಆರೋಪಿ ಪರ್ಸ್ನಲ್ಲಿದ್ದ ಬೆಲೆಬಾಳುವ ವಸ್ತುವನ್ನು ಬಿಟ್ಟು ಕೇವಲ ೨ ಸಾವಿರ ರೂ. ಮಾತ್ರ ತೆಗೆದುಕೊಂಡಿರುವುದು ವಿಶೇಷ. ಈ ಬಗ್ಗೆ ಪೊಲೀಸ್ ತನಿಖೆ ವೇಳೆ ನನಗೆ ಹಣ ಮಾತ್ರ ಬೇಕಿತ್ತು. ಅದರಲ್ಲಿ ಚೆನ್ನಾಗಿ ಮದ್ಯ ಕುಡಿದಿದ್ದೇನೆ ಮತ್ತು ಊಟ ಮಾಡಿದ್ದೇನೆ ಎಂದು ಹೇಳಿದ್ದಾನೆ.