ಮಡಿಕೇರಿ, ಜೂ. ೧೯: ರೈತರು ಸಾಲ ಪಡೆಯಲು ಭೂದಾಖಲೆ ಗಳನ್ನು ನೋಂದಣಿ ಮಾಡಲು ಬಳಸುವ ಫ್ರೂಟ್ಸ್ ಮತ್ತು ಕಾವೇರಿ ೨.೦ ತಂತ್ರಾAಶದಲ್ಲಿ ಎದುರಾಗಿದ್ದ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಲಾಗಿದ್ದು, ಇದೀಗ ಸುಧಾರಣೆಯಾಗಿದೆ ಎಂದು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಮಾಹಿತಿ ನೀಡಿದ್ದಾರೆ.
ತಾ. ೨ ರಂದು ಈ ಸಂಬAಧ ‘ಶಕ್ತಿ’ ವರದಿ ಪ್ರಕಟಿಸಿತ್ತು. ಇದಾದ ಬಳಿಕ ಬಾಂಡ್ ಗಣಪತಿ ಅವರು ಸಹಕಾರ ಸಚಿವರನ್ನು ಭೇಟಿಯಾಗಿ ಚರ್ಚಿಸಿ ನಂತರ ವಿಸ್ತೃತ ವರದಿಯೊಂದಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿಯನ್ನು ಭೇಟಿಯಾಗಿ ರೈತರಿಗೆ ಆಗುತ್ತಿರುವ ಸಮಸ್ಯೆಯ ಬಗ್ಗೆ ಗಮನ ಸೆಳೆಯಲಾಗಿತ್ತು. ಈ ಬಗ್ಗೆ ಮುತುವರ್ಜಿ ವಹಿಸಿ
ತಂತ್ರಾAಶದ ನಿರ್ವಹಣೆಯ ಮುಖ್ಯಸ್ಥರಿಗೆ ಸೂಚಿಸಿ ದೋಷ ಗಳನ್ನು ಸರಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.