ಚೆಟ್ಟಳ್ಳಿ, ಜೂ. ೧೭: ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಹಾಗೂ ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದ ಸಹಯೋಗದಲ್ಲಿ ತಾ. ೨೧ ರಂದು ಚೆಟ್ಟಳ್ಳಿಯ ಪ್ರಾಯೋಗಿಕ ಕೇಂದ್ರದಲ್ಲಿ ಬೆಣ್ಣೆಹಣ್ಣಿನ ಕ್ಷೇತ್ರೋತ್ಸವ ಹಾಗೂ ವೈವಿಧÀ್ಯತಾ ಮೇಳ ನಡೆಯಲಿದೆ ಎಂದು ಹಿರಿಯ ವಿಜ್ಞಾನಿ ಡಾ. ರಾಜೇಂದಿರನ್ ತಿಳಿಸಿದ್ದಾರೆ.
ಮಾರುಕಟ್ಟೆಯಲ್ಲಿ ಬಲುಬೇಡಿಕೆಯ ಬೆಣ್ಣೆ ಹಣ್ಣಿ (ಬಟರ್ ಫ್ರೂಟ್)ನ ಬಗ್ಗೆ ಬೆಳೆಗಾರರಿಗೆ ತಿಳುವಳಿಕೆ ನೀಡುವ ಉದ್ದೇಶದಿಂದ ಪ್ರಾಯೋಗಿಕವಾಗಿ ವಿವಿಧ ತಳಿಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಕಳೆದ ೫ ವರ್ಷಗಳಿಂದ ಕೇಂದ್ರದಲ್ಲಿ ಬೆಣ್ಣೆ ಹಣ್ಣಿನ ಕ್ಷೇತ್ರೋತ್ಸವ ಹಾಗೂ ವೈವಿಧ್ಯತಾ ಮೇಳ ನಡೆಸುವ ಮೂಲಕ ಬೆಣ್ಣೆಹಣ್ಣಿನ ತಳಿ ಅಭಿವೃದ್ಧಿಗೆ ಉತ್ತೇಜನ ನೀಡಲಾಗುತ್ತಿದೆ. ಹಲವು ಬೆಳೆಗಾರರು ಬೆಣ್ಣೆ ಹಣ್ಣಿನ ಬೆಳೆಯನ್ನು ಬೆಳೆದು ಆದಾಯ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ತಾ. ೨೧ರ ಪೂರ್ವಾಹ್ನ ೧೦ ಗಂಟೆಯಿAದ ಸಂಜೆ ೪ ಗಂಟೆವರೆಗೆ ನಡೆಯುವ ಕಾರ್ಯಕ್ರಮದಲ್ಲಿ ವಿವಿಧ ಜಾತಿಯ ಬೆಣ್ಣೆ (ಬಟರ್ ಫ್ರೂಟ್) ಹಣ್ಣುಗಳ ಪ್ರದರ್ಶನ, ಕ್ಷೇತ್ರ ಭೇಟಿ, ರೈತ-ವಿಜ್ಞಾನಿಗಳ ಸಂವಾದ ನಡೆಯಲಿದೆ. ವಿವಿಧ ರಾಜ್ಯದ ಬೆಳೆಗಾರರು ಕಾರ್ಯಕ್ರಮದ ಸದುಪಯೋಗವವನ್ನು ಪಡೆಯಲಿದ್ದಾರೆ ಎಂದು ಮಾಹಿತಿ ನೀಡಿದರು.
ಬೆಣ್ಣೆ ಹಣ್ಣಿನಲ್ಲಿ ಅನುವಂಶಿಕ ವೈವಿಧÀ್ಯತೆ ಮತ್ತು ತಳಿ ಸಂಪತ್ತು ಬಗ್ಗೆ ವಿಜ್ಞಾನಿ ಡಾ. ಮುರುಳಿಧರ ಬಿ.ಎಂ., ಬೆಣ್ಣೆಹಣ್ಣಿನಲ್ಲಿ ನೀರು ಹಾಗೂ ಪೋಷಕಾಂಶಗಳ ನಿರ್ವಹಣೆಯ ಬಗ್ಗೆ ಕೇಂದ್ರದ ಹಿರಿಯ ವಿಜ್ಞಾನಿ ಡಾ. ರಾಜೇಂದಿರನ್ ಎಸ್. ಹಾಗೂ ಬೆಣ್ಣೆ ಹಣ್ಣಿನಲ್ಲಿ ಬೇರು ಕೊಳೆರೋಗದ ನಿರ್ವಹಣೆ ಕೀಟ ಶಾಸ್ತçದ ವಿಜ್ಞಾನಿ ಡಾ. ರಾಣಿ ಎ.ಟಿ. ವಿಚಾರ ಮಂಡಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.