ಸಿದ್ದಾಪುರ, ಜೂ. ೧೭: ಕೇರಳದ ಕೂಟುಪುಯ ಚೆಕ್‌ಪೋಸ್ಟ್ನಲ್ಲಿ ಅಬಕಾರಿ ತಪಾಸಣೆ ವೇಳೆ ಗಾಂಜಾ ಪೊಟ್ಟಣದೊಂದಿಗೆ ಪರಾರಿಯಾಗಲು ಯತ್ನಿಸಿದ ಜಿಲ್ಲೆಯ ಯುವಕನನ್ನು ಅಬಕಾರಿ ತಂಡ ಬೆನ್ನಟ್ಟಿ ಬಂಧಿಸಿದ್ದಾರೆ.

ಜಿಲ್ಲೆಯ ಸೋಮವಾರಪೇಟೆ ಮೂಲದ ನಜೀಬ್ ಅನ್ವರುದ್ದೀನ್ (೩೦) ಎಂಬವನನ್ನು ಅಬಕಾರಿ ನಿರೀಕ್ಷಕ ಪಿ.ಟಿ. ಯೇಸುದಾಸನ್ ಮತ್ತು ತಂಡ ಬಂಧಿಸಿದೆ.

ಯುವಕನ ಬ್ಯಾಗ್‌ನಿಂದ ೮ ಗ್ರಾಂ ಗಾಂಜಾ ಮತ್ತು ಒಸಿಬಿ ಪ್ಯಾಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ಇಲಾಖೆಯ ಜಾನಿ ಜೋಸೆಫ್, ನಿಸಾರ್ ಕೂಲೋತ್, ಸಜನ್, ವಿನೇಶ್ ಮತ್ತು ವಿನೋದ್ ಇದ್ದರು.