ಕರಿಕೆ, ಜೂ. ೧೭: ಇಲ್ಲಿಗೆ ಸಮೀಪದ ಪಾಣತ್ತೂರು, ಪರಿಯಾರಂ ಬಳಿ ಡೀಸೆಲ್ ಸಾಗಾಟದ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಮಗುಚಿದ ಪರಿಣಾಮ ಚಾಲಕ ಹಾಗೂ ನಿರ್ವಾಹಕ ವಾಹನದೊಳಗೆ ಸಿಲುಕಿ ಗಂಭೀರ ಸ್ಥಿತಿಯಲ್ಲಿದ್ದಾರೆ.

ಮಂಗಳೂರಿನಿAದ ಕರಿಕೆ ಚೆಂಬೇರಿಯಲ್ಲಿ ನೂತನವಾಗಿ ನಿರ್ಮಾಣವಾದ ಪೆಟ್ರೋಲ್ ಬಂಕ್‌ಗೆ ಡೀಸೆಲ್ ತರುತ್ತಿದ್ದ ಸಂದರ್ಭದಲ್ಲಿ ಕೇರಳ ಕರ್ನಾಟಕ ಗಡಿಯಿಂದ ಅನತಿ ದೂರದ ಪರಿಯಾರ ಎಂಬ ಇಳಿಜಾರಿನಲ್ಲಿ ವಾಹನ ನಿಯಂತ್ರಣ ಕಳೆದುಕೊಂಡು ಮನೆಯೊಂದಕ್ಕೆ ಅಪ್ಪಳಿಸಿ ಮತ್ತೊಂದು ಮನೆ ಮೇಲೆ ಉರುಳಿ ಬಿದ್ದ ಪರಿಣಾಮ ಮನೆಗೂ ತೀವ್ರ ಹಾನಿಯಾಗಿದೆ. ಕಳೆದ ವರ್ಷ ಪುತ್ತೂರಿನಿಂದ ಕರಿಕೆಗೆ ಮದುವೆ ದಿಬ್ಬಣ ಬರುತಿದ್ದ ಖಾಸಗಿ ಬಸ್ ಇದೇ ಜಾಗದಲ್ಲಿ ಮಗುಚಿ ಹಲವಾರು ಮೃತಪಟ್ಟ ಘಟನೆ ಮಾಸುವ ಮುನ್ನವೇ ಈ ಘಟನೆ ನಡದಿದೆ.

ಸುಧೀರ್ ಹೊದ್ದೆಟ್ಟಿ