ಪಾಲಿಬೆಟ್ಟ, ಜೂ. ೧೭: ಕೇಬಲ್ ನೆಟ್‌ವರ್ಕ್ ಕಚೇರಿಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಡಿಜಿಟಲ್ ಎಲೆಕ್ಟಾçನಿಕ್ ಉಪಕರಣಗಳು ಬೆಂಕಿಗೆ ಆಹುತಿಯಾದ ಘಟನೆ ಅಮ್ಮತಿ ಕಾರ್ಮಾಡು ಗ್ರಾಮದಲ್ಲಿ ನಡೆದಿದೆ.

ಹಲವು ವರ್ಷಗಳಿಂದ ಕೇಬಲ್ ನೆಟ್‌ವರ್ಕ್ ಸಂಸ್ಥೆ ನಡೆಸಿಕೊಂಡು ಬರುತ್ತಿರುವ ಜಿಂಕ್ಷನ್ ಎಂಬವರಿಗೆ ಸೇರಿದ ಕಚೇರಿಯಾಗಿದ್ದು ಸಂಜೆ ವೇಳೆ ಕಚೇರಿಯಲ್ಲಿ ಯಾರು ಇಲ್ಲದ ಸಂದರ್ಭ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ.

ತಕ್ಷಣ ಬೆಂಕಿ ನಂದಿಸಲು ಸಮೀಪದಲ್ಲಿದ್ದವರು ಹರಸಾಹಾಸಪಟ್ಟರು ಸಾಧ್ಯವಾಗದೆ ಕಚೇರಿಯಲ್ಲಿದ್ದ ಎಲೆಕ್ಟಾçನಿಕ್ ವಸ್ತುಗಳು ಸುಟ್ಟು ಕರಕಲಾಗಿದೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

-ಪುತ್ತಂ ಪ್ರದೀಪ್