ಮಡಿಕೇರಿ, ಜೂ. ೧೬: ಮಡಿಕೇರಿಯ ತಹಶೀಲ್ದಾರ್ ಕಚೇರಿಯಲ್ಲಿ ಸಾರ್ವಜನಿಕರ ಕುಂದುಕೊರತೆಗಳ ಕುರಿತಾಗಿ ಲೋಕಾಯುಕ್ತ ಅಧಿಕಾರಿಗಳು ಅಹವಾಲು ಸ್ವೀಕರಿಸಿದರು. ಈ ಸಂದರ್ಭ ಸರ್ವೆ ಇಲಾಖೆಗೆ ಸಂಬAಧಿಸಿದAತೆ ೧, ತಹಶೀಲ್ದಾರ್ ಕಚೇರಿಗೆ ಸೇರಿದಂತೆ ೪ ಮತ್ತು ತಾಲೂಕು ಪಂಚಾಯಿತಿಗೆ ಒಳಪಟ್ಟಂತೆ ೧ ದೂರು ಸ್ವೀಕೃತವಾಗಿದೆ.
ಈ ಸಂದರ್ಭ ತಹಶೀಲ್ದಾರ್, ಎಡಿಎಲ್ಆರ್, ಎಲ್ಲಾ ಕಂದಾಯ ನಿರೀಕ್ಷಕರು ಹಾಜರಿದ್ದರು. ಲೋಕಾಯುಕ್ತ ಉಪಾಧೀಕ್ಷಕರಾದ ಎಂ.ಎಸ್. ಪವನ್ಕುಮಾರ್ ಹಾಗೂ ಸಿಬ್ಬಂದಿಗಳು ದೂರು ಸ್ವೀಕರಿಸಿದರು.