*ಗೋಣಿಕೊಪ್ಪ, ಜೂ. ೧೬ : ಕ್ಷೇತ್ರ ಪುನರ್ವಿಂಗಡಣೆಯೊAದಿಗೆ ಜಿಲ್ಲೆಗೊಬ್ಬ ಸಂಸದ, ತಾಲೂಕಿಗೊಬ್ಬ ಶಾಸಕ ಅಭಿಯಾನಕ್ಕೆ ಯುಕೊ ಸಿದ್ಧತೆ ಮಾಡಿಕೊಂಡಿದೆ ಎಂದು ಯುನೈಟೆಡ್ ಕೊಡವ ಆರ್ಗನೈಜೇಷನ್ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ತಿಳಿಸಿದ್ದಾರೆ.

ಮುಂಬರುವ ೨೦೨೬ರ ನಂತರ ನಡೆಯಲಿರುವ ಕ್ಷೇತ್ರ ಪುನರ್ವಿಂಗಡಣೆ ಸಂದರ್ಭದಲ್ಲಿ ಕೇವಲ ಜನಸಂಖ್ಯೆಯನ್ನು ಮಾನದಂಡವಾಗಿಸದೆ, ಪ್ರಾದೇಶಿಕತೆ, ಭೌಗೋಳಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆಗೆ ಒತ್ತು ನೀಡಬೇಕಿದ್ದು, ಈ ನಿಟ್ಟಿನಲ್ಲಿ ಜನಾಭಿಪ್ರಾಯದೊಂದಿಗೆ ಹೋರಾಟಕ್ಕೆ ಮುಂದಾಗುವುದಾಗಿ ಗೋಣಿಕೊಪ್ಪದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರತಿ ಕಂದಾಯ ಜಿಲ್ಲೆಗೆ ಕನಿಷ್ಟ ಒಂದು ಲೋಕಸಭಾ ಸ್ಥಾನ ನೀಡಬೇಕು ಹಾಗೂ ಪ್ರತಿ ಕಂದಾಯ ತಾಲೂಕಿಗೆ ಕನಿಷ್ಟ ಒಂದು ವಿಧಾನಸಭಾ ಸ್ಥಾನವನ್ನು ಕಲ್ಪಿಸುವುದರ ಮೂಲಕ ಕೊಡಗು ಜಿಲ್ಲೆಗೆ ಒಂದು ಲೋಕಸಭಾ ಕ್ಷೇತ್ರ ಹಾಗೂ ಐದು ವಿಧಾನಸಭಾ ಕ್ಷೇತ್ರ ನೀಡಬೇಕು ಎಂಬ ಬೇಡಿಕೆಯನ್ನು ಕೇಂದ್ರ ಸರ್ಕಾರ ಹಾಗೂ ಕೇಂದ್ರ ಚುನಾವಣಾ ಆಯೋಗದ ಮುಂದಿಟ್ಟು ಜಿಲ್ಲೆಗೊಬ್ಬ ಸಂಸದ, ತಾಲೂಕಿಗೊಬ್ಬ ಶಾಸಕ ಜಾಗೃತಿ ಅಭಿಯಾನ ನಡೆಸಲು ಮುಂದಾಗುವುದಾಗಿ ತಿಳಿಸಿದರು.

೧೯೫೧ ರಿಂದ ೨೦೦೧-ರ ತನಕ ಕೇವಲ ಜನ ಸಂಖ್ಯೆಯನ್ನೇ ಮಾನದಂಡವಾಗಿಟ್ಟುಕೊAಡು ಕ್ಷೇತ್ರ ಪುನರ್ವಿಂಗಡಣೆ ಮಾಡಿದ್ದರ ಫಲವಾಗಿ ಜಿಲ್ಲೆಯ ಮೂರು ಕೇಂದ್ರ ಸರ್ಕಾರ ಶೇ. ೬೪ ಅಂದರೆ ಮೂರು ಕ್ಷೇತ್ರಗಳಿಗೆ ಎರಡು ಕ್ಷೇತ್ರಗಳು ಎಂಬAತೆ ೩ಃ೨ ರ ಅನುಪಾತದಲ್ಲಿ ಕ್ಷೇತ್ರಗಳ ಸಂಖ್ಯೆಯನ್ನು ಏರಿಸುವ ಸಾಧ್ಯತೆಗಳಿವೆ ಎಂದು ಅವರು ಮಾಹಿತಿ ನೀಡಿದರು.

ಕೇವಲ ಜನ ಸಂಖ್ಯೆಯನ್ನೇ ಆಧಾರವಾಗಿಟ್ಟುಕೊಂಡು, ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸದೆ ಯಥಾವತ್ತಾಗಿ ಕ್ಷೇತ್ರ ಪುನರ್ವಿಂಗಡಣೆಗೆ ಮುಂದಾಗಿದ್ದೇಯಾದರೆ. ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳು ಸುಮಾರು ೫೦ ರಿಂದ ೭೦ ಲೋಕಸಭಾ ಸದಸ್ಯ ಸ್ಥಾನವನ್ನು ಕಳೆದುಕೊಳ್ಳುವ ಭೀತಿಎದುರಾಗಿದೆ. ಅದರಲ್ಲೂ ಈ ಒಂದು ಬೆಳವಣಿಗೆಯಿಂದ ದೇಶದ ಹಳ್ಳಿಗಾಡು ಪ್ರದೇಶಗಳ ಮೇಲೆ ಆಡಳಿತಾತ್ಮಕವಾಗಿ ಮತ್ತು ಅಭಿವೃದ್ಧಿ ದೃಷ್ಟಿಯಿಂದ ಪ್ರತಿಕೂಲ ಪರಿಣಾಮ ಬೀರುತ್ತದೆ. ಆದರೆ ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಇದೀಗ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸುವ ಸೂಚನೆ ನೀಡಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಅವರು ತಿಳಿಸಿದರು. ಕೊಡಗಿಗೆ ಒಂದು ಲೋಕಸಭಾ ಸ್ಥಾನ ಹಾಗೂ ತಾಲೂಕಿಗೆ ಒಂದು ವಿಧಾನಸಭಾ ಕ್ಷೇತ್ರದ ಸ್ಥಾನವನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಸೂಕ್ತ ತಯಾರಿಯನ್ನು ಮಾಡಿಕೊಳ್ಳಬೇಕಾಗಿದೆ. ಆ ಮೂಲಕ ಕೊಡಗಿಗೆ ಕನಿಷ್ಟ ಒಂದು ಲೋಕಸಭಾ ಸ್ಥಾನ ಹಾಗೂ ಕನಿಷ್ಟ ೫ ವಿಧಾನಸಭಾ ಸ್ಥಾನಗಳನ್ನು ಪಡೆದುಕೊಳ್ಳಲೇ ಬೇಕಾದ ಅನಿವಾರ್ಯತೆ ಎದುರಾಗಿದೆ. ಈ ನಿಟ್ಟಿನಲ್ಲಿ ಕೊಡಗಿನಿಂದ ಒಮ್ಮತದ ನಿರ್ಧಾರ ಕೈಗೊಂಡು ಒಕ್ಕೊರಳಿನಿಂದ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವಂತಾಗಬೇಕು, ಅದಕ್ಕಾಗಿ ಈಗಿನಿಂದಲೇ ಪಕ್ಷಾತೀತವಾಗಿ ಜನಜಾಗೃತಿ ಮೂಡಿಸುವ ಕಾರ್ಯಕ್ಕೆ ಯುಕೊ ಮುಂದಾಗಿದೆ ಎಂದು ಅವರು ಮಾಹಿತಿ ನೀಡಿದರು.

ಜಿಲ್ಲೆಯ ಸಂಸದರೂ ಸೇರಿದಂತೆ ಎಲ್ಲಾ ಚುನಾಯಿತ ಜನಪ್ರತಿನಿಧಿಗಳು, ಸಂಘ-ಸAಸ್ಥೆಗಳು. ಸಮುದಾಯಗಳ ಮುಖಂಡರುಗಳು, ಚಿಂತಕರು, ಹಿರಿಯರನ್ನು ಭೇಟಿಮಾಡಿ ಸೂಕ್ತವಾದ ವೇದಿಕೆಯನ್ನು ರಚಿಸಿ ಜಿಲ್ಲೆಗೊಬ್ಬ ಸಂಸದ- ತಾಲೂಕಿಗೊಬ್ಬ ಶಾಸಕ*" ಎಂಬ ಅಭಿಯಾನದಡಿಯಲ್ಲಿ ಸಮಗ್ರ ಹೋರಾಟ ರೂಪಿಸುವ ನಿಟ್ಟಿನಲ್ಲಿ ಚಿಂತಿಸಲಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಹಾಗೂ ರಾಷ್ಟçಮಟ್ಟದಲ್ಲಿಯೂ ಕೂಡ ಸಮಾನ ಮನಸ್ಕರನ್ನು ಬೇಟಿಯಾಗಿ, ಅವರ ಬೆಂಬಲದೊAದಿಗೆ ಜನಾಭಿಪ್ರಾಯ ರೂಪಿಸಿ ಕೇಂದ್ರ ಸರ್ಕಾರಕ್ಕೆ ಪರಿಣಾಮಕಾರಿಯಾಗಿ ಪ್ರಸ್ತಾವನೆ ಸಲ್ಲಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕಾಗಿದೆ. ಕೇಂದ್ರ ಸರ್ಕಾರ ಲೋಕಸಭೆಗೆ ೮೮೮ ಸ್ಥಾನಗಳನ್ನು ಮೀಸಲಿಡುವ ಮೂಲಕ ಸುಮಾರು ೬೪ ಶೇಕಡಾ ಸಂಸತ್ ಸ್ಥಾನಗಳನ್ನು ಹೆಚ್ಚಿಸುವ ಸಾಧ್ಯತೆ ಇರುವುದರಿಂದ, ಅದೇ ಅನುಪಾತದಲ್ಲಿ ವಿಧಾನಸಭಾ ಸ್ಥಾನಗಳೂ ಏರಿಕೆಯಾಗಬೇಕಿದೆ. ಆದರೆ ಕೇವಲ ಜನಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡು ಕ್ಷೇತ್ರ ಪುನರ್ವಿಂಗಡಣೆ ಮಾಡಿದರೆ ಗ್ರಾಮೀಣ ಪ್ರದೇಶಗಳ ಸ್ಥಾನಗಳನ್ನು ನಗರ ಪ್ರದೇಶಗಳು ಆಕ್ರಮಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಜಿಲ್ಲೆ ಹಾಗೂ ತಾಲೂಕುವಾರು ಮಾನದಂಡದೊAದಿಗೆ, ಬೌಗೋಳಿಕ ಹಾಗೂ ಸಾಂಸ್ಕೃತಿಕ ಹಿನ್ನಲೆಯನ್ನು ಗಮನದಲ್ಲಿಟ್ಟುಕೊಂಡು ಕ್ಷೇತ್ರ ಪುನರ್ವಿಂಗಡಣೆಗೆ ಕೇಂದ್ರ ಸರ್ಕಾರ ಆಲೋಚಿಸಬೇಕಾಗಿದೆ. ಪ್ರಸ್ತುತ ದೇಶದಲ್ಲಿ ೭೭೬ ಜಿಲ್ಲೆಗಳು ಹಾಗೂ ಕರ್ನಾಟಕದಲ್ಲಿ ೧೭೬ ತಾಲೂಕುಗಳು ಕಾರ್ಯನಿರ್ವಹಿಸುತ್ತಿವೆ. ಪುನರ್ವಿಂಗಡಣೆಯಾದರೆ, ಸುಮಾರು ೩ಕ್ಕೆ ೨ರ(೨/೩) ಅನುಪಾತದಲ್ಲಿ ಕರ್ನಾಟಕ ರಾಜ್ಯದಲ್ಲಿ ಈಗಿರುವ ೨೮ ಸಂಸದ್ ಸ್ಥಾನ ೪೬ಕ್ಕೆ ಏರಿಕೆಯಾಗುವ ನಿರೀಕ್ಷೆ ಇದ್ದು, ೨೨೪ ಶಾಸಕರ ಸಂಖ್ಯೆ ೩೫೬ಕ್ಕೆ ಏರಿಕೆಯಾಗುವ ಸಂಭವವಿದೆ. ಆದರೆ ಮುಂದೆಯೂ ಪ್ರಸ್ತುತ ಇರುವಂತೆಯೇ ನಗರ ಪ್ರದೇಶಗಳು ಚುನಾಯಿತ ಪ್ರತಿನಿಧಿತ್ವದಲ್ಲಿ ಸಿಂಹಪಾಲು ಪಡೆದುಕೊಳ್ಳಲಿದ್ದು, ಸಹಜವಾಗಿ ಕೊಡಗು ಜಿಲ್ಲೆಯಂತಹ ಗ್ರಾಮೀಣ ಜಿಲ್ಲೆಗಳು ಚುನಾಯಿತ ಪ್ರಾತಿನಿಧಿತ್ವವನ್ನು ಕಳೆದುಕೊಂಡು ಅವಕಾಶ ವಂಚಿತರಾಗಲಿದ್ದಾರೆ. ಇದರಿಂದಾಗಿ ಗ್ರಾಮೀಣ ಜಿಲ್ಲೆಗಳು ರಾಜಕೀಯವಾಗಿಯೂ ಆಟಕ್ಕುಂಟು ಲೆಕ್ಕಕಿಲ್ಲ ಎನ್ನುವಂತಹ ಪರಿಸ್ಥಿತಿಯಲ್ಲಿ ಸೂಕ್ತ ಅಭಿವೃದ್ಧಿ ಕಾಣದೇ ನಿರಂತರ ಆಡಳಿತಾತ್ಮಕವಾಗಿ ಶೋಷಣೆಗೆ ಒಳಪಡುತ್ತದೆ. ಜಾಗೃತಿ ಮೂಡಿಸಲು ಹಾಗೂ ಜನಾಭಿಪ್ರಾಯ ರೂಪಿಸಲು ‘ಯುಕೊ' ಅಭಿಯಾನ ಕೈಗೊಳ್ಳಲಿದ್ದು, ಹಂತ ಹಂತವಾಗಿ ಸಮಗ್ರ ಆಂದೋಲನವನ್ನು ರೂಪಿಸುವುದರ ಮೂಲಕ ಮುಂದಿನ ದಿನಗಳಲ್ಲಿ ಸಂಪೂರ್ಣ ಜನಾಭಿಪ್ರಾಯದೊಂದಿಗೆ ಸಮರ್ಥವಾದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಮಂಡಿಸಲು ಕ್ರಮ ಕೈಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಯುಕೋ ಸದಸ್ಯರಾದ ಚೆಪ್ಪುಡಿರ ಸುಜು ಕರುಂಬಯ್ಯ, ಮಾದೇಟಿರ ತಿಮ್ಮಯ್ಯ, ಅಜ್ಜಿನಿಕಂಡ ಸೂರಜ್ ತಿಮ್ಮಯ್ಯ ಇದ್ದರು.