ಮಡಿಕೇರಿ, ಜೂ. ೧೬: ಅಖಿಲ ಭಾರತ ಸಾಹಿತ್ಯ ಪರಿಷದ್ ವತಿಯಿಂದ ಮಡಿಕೇರಿಯ ಭಾರತೀಯ ವಿದ್ಯಾಭವನದ ಸಭಾಂಗಣದಲ್ಲಿ ತಾ. ೧೮ ರಂದು ಸಂಜೆ ೩ ಗಂಟೆಗೆ ಕವಿಗೋಷ್ಠಿಯನ್ನು ಆಯೋಜಿಸಲಾಗಿದೆ.
ಕವಿತೆಗಳ ಮಳೆ ಎಂಬ ಹೆಸರಿನಲ್ಲಿ ಆಯೋಜಿಸುತ್ತಿರುವ ಈ ಕವಿ ಗೋಷ್ಠಿಯಲ್ಲಿ ಮಳೆಯ ಕುರಿತಂತೆ ಬರೆದ ಕವಿತೆಗಳನ್ನು ಕನ್ನಡ ಮತ್ತು ಪ್ರಾದೇಶಿಕ ಭಾಷೆಯ ಕವಿಗಳು ವಾಚಿಸಲಿದ್ದಾರೆ. ಈ ಕವಿಗೋಷ್ಠಿಯನ್ನು ಅ.ಭಾ.ಸ.ಪ ಮಂಗಳೂರು ವಿಭಾಗ ಸಂಯೋಜಕರಾದ ಸುಂದರ್ ಶೆಟ್ಟಿ ಉದ್ಘಾಟಿಸಲಿದ್ದಾರೆ. ಕವಯತ್ರಿ ಸ್ಮಿತಾ ಅಮೃತರಾಜ್ ಅವರ ಜೊತೆಗೆ ಕವಿತೆಗಳ ಕುರಿತಾದ ಸಂವಾದವೂ ಕಾರ್ಯಕ್ರಮದ ಕೊನೆಗೆ ನಡಯಲಿದೆ ಎಂದು ಅಖಿಲ ಭಾರತ ಸಾಹಿತ್ಯ ಪರಿಷದ್ ಕೊಡಗು ಘಟಕದ ಅಧ್ಯಕ್ಷ ಮೇಜರ್ ಡಾ ಕುಶ್ವಂತ್ ಕೋಳಿಬೈಲು, ಜಿಲ್ಲಾ ಕಾರ್ಯದರ್ಶಿಯಾದ ಬಬ್ಬೀರ ಸರಸ್ವತಿ ತಿಳಿಸಿದ್ದಾರೆ.