ಮಡಿಕೇರಿ, ಜೂ. ೧೬: ಪೊನ್ನಂಪೇಟೆಯ ದೃತಿ ಎಸ್.ಆರ್. ಸಿ.ಇ.ಟಿ ಪರೀಕ್ಷೆಯಲ್ಲಿ ಇಂಜಿನಿಯರಿAಗ್ ವಿಭಾಗದಲ್ಲಿ ೧೨೬ ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಮಂಗಳೂರಿನ ಬಾಸ್ಕೊ ಪ್ರಿಯೂನಿವರ್ಸಿಟಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ದೃತಿ ಕಳೆದ ಪಿಯುಸಿ ಪರೀಕ್ಷೆಯಲ್ಲಿ ೫೯೦ ಅಂಕಗಳನ್ನು ಗಳಿಸಿದ್ದಳು. ಈಕೆ ಮಂಗಳೂರಿನ ಕಸ್ತೂರಬಾ ಮೆಡಿಕಲ್ ಕಾಲೇಜಿನಲ್ಲಿ ಮಕ್ಕಳ ವಿಭಾಗದ ತಜ್ಞರಾದ ಪ್ರೊಫೆಸರ್ ಡಾಕ್ಟರ್ ರವಿಕಿರಣ್ ಸರಳಾಯ ಹಾಗೂ ರೇಡಿಯೋಲಜಿಸ್ಟ್ ವಿಭಾಗದ ಮುಖ್ಯಸ್ಥೆ ಡಾಕ್ಟರ್ ಸುಪ್ರಸನ್ನ ದಂಪತಿ ಪುತ್ರಿ.