ಕುಶಾಲನಗರ, ಜೂ. ೧೬: ಕುಶಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕರಿಯಪ್ಪ ಬಡಾವಣೆಯ ಮನೆಯೊಂದರಲ್ಲಿ ಬೀಗ ಮುರಿದು ಕಳ್ಳತನ ನಡೆದಿದೆ.
ಕಂದಾಯ ಇಲಾಖೆ ನೌಕರ ರಾಜೇಶ್ ಎಂಬವರು ಮನೆಯಲ್ಲಿ ಇಲ್ಲದ ಸಂದರ್ಭ ಕಳ್ಳರು ಬಾಗಿಲು ಮುರಿದು ರೂ. ೧೦ ಸಾವಿರ ನಗದು ಮತ್ತು ೧೦ ಗ್ರಾಂ ಚಿನ್ನ ಕಳವು ಮಾಡಿರುವ ಬಗ್ಗೆ ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.