ಕೂಡಿಗೆ, ಜೂ ೧೭: ಕೊಡಗಿನ ಪ್ರಮುಖ ಪ್ರವಾಸಿ ತಾಣ ಚಿಕ್ಲಿಹೊಳೆ ಜಲಾಶಯದ ‘ಫಿಟ್ನೆಸ್’ ಪರಿಶೀಲನೆಗೆ ದಶಕಗಳ ನಂತರ ರಾಜ್ಯಮಟ್ಟದ ಅಧಿಕಾರಿಗಳ ತಂಡ ಭೇಟಿ ನೀಡಿ ವೀಕ್ಷಣೆ ನಡೆಸಿದೆ.

ಕೇಂದ್ರ ಸರಕಾರದ ಸೂಚನೆ ಮೇರೆಗೆ ರಾಜ್ಯ ಸರಕಾರದ ಅಧೀನಕ್ಕೆ ಒಳಪಡುವ ರಾಜ್ಯ ಅಣೆಕಟ್ಟೆ ಸುರಕ್ಷತಾ ತಪಾಸಣಾ ತಂಡ (ಡಿ.ಎಸ್.ಆರ್.ಟಿ) ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯ ಅಧೀನಕ್ಕೆ ಒಳಪಡುವ ಚಿಕ್ಲಿಹೊಳೆ ಅಣೆಕಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಅಣೆಕಟ್ಟೆಗೆ ಪೂರಕವಾದ ಅಭಿವೃದ್ಧಿಗಳನ್ನು ಕೈಗೊಳ್ಳುವ ತಂಡದ ಪ್ರಮುಖರು ಚಿಕ್ಲಿಹೊಳೆಯ ಅಣೆಕಟ್ಟೆಯ ಮುಂಭಾಗದಿAದ ಅಣೆಕಟ್ಟೆಯ ಮೇಲ್ಭಾಗದ ನೀರಿನ ಸಾಮರ್ಥ್ಯ ಮತ್ತು ಅಣೆಕಟ್ಟೆಯ ಪ್ರತಿಯೊಂದು ಹಂತದ ಬಗ್ಗೆ ನಿಗಮದ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಅಣೆಕಟ್ಟೆಯು ಪೂರ್ಣ ಪ್ರಮಾಣದಲ್ಲಿ ಭರ್ತಿಯಾದ ಸಂದರ್ಭದಲ್ಲಿ ಸೋರಿಕೆ ನೀರಿನ ಬಗ್ಗೆಯೂ ಪರಿಶೀಲನೆ ನಡೆಸಿ ಮುಂದಿನ ದಿನಗಳಲ್ಲಿ ಕೈಗೊಳ್ಳ ಬಹುದಾದ ಯೋಜನೆಗಳ ಮಾಹಿತಿ ಪಡೆÀದುಕೊಂಡರು.

ನAತರ ಅಣೆಕಟ್ಟೆಯ ಮುಖ್ಯ ನಾಲೆಗಳ ದ್ವಾರಗಳನ್ನು ಖುದ್ದಾಗಿ ವೀಕ್ಷಣೆ ಮಾಡಿದರು. ಅಣೆಕಟ್ಟೆ ತುಂಬಿದ ನಂತರ ಹೆಚ್ಚುವರಿ ನೀರು ನದಿಗೆ ಹರಿಯುವ ಪ್ರದೇಶವನ್ನು ಪರಿಶೀಲನೆ ಮಾಡಿ ಅದರ ಸಾಧಕ ಬಾಧಕಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು.

(ಮೊದಲ ಪುಟದಿಂದ) ಅಣೆಕಟ್ಟೆ ನಿರ್ಮಾಣ ಸಂದರ್ಭ ಕೈಗೊಂಡ ಅಣೆಕಟ್ಟೆಯ ಒಳಹರಿವಿನ ಸೋರಿಕೆಯ ನೀರು ಹೋಗುವ ಸ್ಥಳವನ್ನು ಪರಿಶೀಲನೆ ನಡೆಸಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಅಣೆಕಟ್ಟೆಯ ಸಂಪೂರ್ಣ ಮಾಹಿತಿ, ಆಗಬೇಕಾದ ಅಭಿವೃದ್ಧಿ ಕಾರ್ಯಗಳು, ಅಣೆಕಟ್ಟೆಯ ಸ್ಥಿರತೆ, ಸುರಕ್ಷತೆ ನಿಟ್ಟಿನಲ್ಲಿ ಈ ತಂಡ ಕೂಲಂಕಶವಾದ ಪರಿಶೀಲನೆ ನಡೆಸಿ ತನ್ನ ವರದಿಯನ್ನು ಕೇಂದ್ರ ತಂಡಕ್ಕೆ ಸಲ್ಲಿಕೆ ಮಾಡಲಿದೆ. ವರದಿಯ ಆಧಾರದ ಮೇಲೆ ರಾಜ್ಯ ನೀರಾವರಿ ನಿಗಮದ ಕಾಮಗಾರಿ ಕ್ರೀಯಾ ಯೋಜನೆಯ ಪಟ್ಟಿ ಸಿದ್ಧತೆ ಮಾಡಿ ಅದರನುಗುಣವಾಗಿ ರಾಜ್ಯ ಸರಕಾರದ ಮುಖೇನ ಕೇಂದ್ರ ಮಂಡಳಿಗೆ ವರದಿ ರವಾನೆಯಾಗಲಿದೆ. ಇದರನ್ವಯ ಕೇಂದ್ರ ಸರಕಾರ ವಿಶ್ವ ಬ್ಯಾಂಕ್ ನೆರವಿನೊಂದಿಗೆ ರಾಜ್ಯದ ನೀರಾವರಿ ನಿಗಮಕ್ಕೆ ಹಣ ನೀಡುವುದರ ಮೂಲಕ ಅಣೆಕಟ್ಟೆಯ ಸುರಕ್ಷತಾ ದೃಷ್ಠಿಯಿಂದ ಕೈಗೊಳ್ಳಬೇಕಾದ ಕಾಮಗಾರಿಗಳಿಗೆ ಈ ಯೋಜನೆ ಸಹಕಾರಿಯಾಗಲಿದೆ.

ಡಿಎಎಸ್‌ಆರ್‌ಟಿ ವೈಸ್ ಚೇರ್‌ಮನ್ ಹಾಗೂ ಸಲಹೆಗಾರ ಧಾರವಾಡದ ಎಸ್.ಬಿ. ಕೊಯಿಮತ್ತೂರು ನೇತೃತ್ವದ ತಂಡದ ನೀರಾವರಿ ನಿಗಮದ ಮೈಸೂರು ವಿಭಾಗದ ಮುಖ್ಯ ಅಭಿಯಂತರ ವೆಂಕಟೇಶ್, ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯ ಮುಖ್ಯ ಅಭಿಯಂತರ ಎಂ. ಸತೀಶ್, ಕೃಷ್ಣರಾಜಸಾಗರದ ಕೆ.ಇ.ಆರ್.ಎಸ್ ನಿರ್ದೇಶಕ ಕೆ.ಜಿ. ಮಹೇಶ್, ಡ್ಯಾಂ ಸೇಫ್ಟಿ ಆಫೀಸರ್ ಕೆ.ಶ್ರೀಕಾಂತ್, ಮಲಪ್ರಭಾ ಅಣೆಕಟ್ಟೆ ಯೋಜನೆಯ ಮುಖ್ಯ ಅಭಿಯಂತರ ಅಶೋಕ್ ವಸನಾಡ್, ಬೆಳಗಾವಿ ನೀರಾವರಿ ನಿಗಮದ ಅಧೀಕ್ಷಕ ಅಭಿಯಂತರ ರಾಜೇಶ್ ಅಮ್ಮಿನಬಾವಿ, ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆ ಅಧೀಕ್ಷಕ ಅಭಿಯಂತರ ವಿಜಯಕುಮಾರ್, ಹಾರಂಗಿ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತೆ ಕೆ.ಕೆ.ರಘುಪತಿ, ಮೈಸೂರಿನ ಜಿಯಾಲಜಿಸ್ಟ್ ಸೌಮ್ಯ, ಅಣೆಕಟ್ಟೆ ಭದ್ರತಾ ಸಂಸ್ಥೆಯ ಕಾರ್ಯಪಾಲಕ ಅಭಿಯಂತರ ತಿಮ್ಮಪ್ಪ, ಎಚ್.ಬಿ.ಕೃಷ್ಣರಾವ್, ಸಿ.ರುಪೇಂದ್ರ, ಹಾರಂಗಿ ಪುನರ್ವಸತಿ ವಿಭಾಗದ ಪ್ರಮುಖರಾದ ಸುರೇಶ್, ಎಚ್.ಪಿ.ಸುರೇಶ್, ಮಂಜುನಾಥ್, ಪುಟ್ಟಸ್ವಾಮಿ,ಡಿ, ಡಿ.ಕಿರಣ್ ಇದ್ದರು.

ಕೆ.ಕೆ. ನಾಗರಾಜಶೆಟ್ಟಿ.