ಕೂಡಿಗೆ, ಜೂ ೧೬: ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಯುವಕರನ್ನು ಕುಶಾಲನಗರ ಗ್ರಾಮಾಂತರ ಪೊಲೀಸರು ಕೂಡಿಗೆಯಲ್ಲಿ ಬಂಧಿಸಿದ್ದಾರೆ.

ಕೂಡ್ಲೂರು ಕೈಗಾರಿಕಾ ಬಡಾವಣೆ ನಿವಾಸಿ ಸೈಯದ್ ಸಾಹಿಲ್, ಕೂಡಿಗೆಯ ಪ್ರತೀಕ್ ಬಂಧಿತ ಆರೋಪಿಗಳು. ಗ್ರಾಮಾಂತರ ಠಾಣಾಧಿಕಾರಿ ಚಂದ್ರಶೇಖರ್ ನೇತೃತ್ವದಲ್ಲಿ ದಾಳಿ ನಡೆಸಿದ ತಂಡ ಆರೋಪಿಗಳ ಬಳಿಯಿಂದ ೧೩೫ ಗ್ರಾಂ ಗಾಂಜಾ ವಶಪಡಿಸಿಕೊಂಡಿದೆ.