ಸಿದ್ದಾಪುರ, ಜೂ. ೧೬: ವ್ಯಕ್ತಿಯೊಬ್ಬರು ದ್ವಿಚಕ್ರ ವಾಹನದಲ್ಲಿ ತೋಟದ ಮಾರ್ಗದಲ್ಲಿ ಸಾಗುತ್ತಿದ್ದ ಸಂದರ್ಭ ದಿಢೀರನೆ ಕಾಡಾನೆ ಪ್ರತ್ಯಕ್ಷಗೊಂಡಿದೆ. ಎದುರು ಬಂದ ಆನೆ ಘೀಳಿಟ್ಟ ಸಂದರ್ಭ ಭಯಗೊಂಡು ಬೈಕ್‌ನಲ್ಲಿ ತೆರಳುತ್ತಿದ್ದ ವ್ಯಕ್ತಿ ಎದುರಿನ ಕಂಬಕ್ಕೆ ಬೈಕ್ ಸಹಿತವಾಗಿ ಡಿಕ್ಕಿ ಹೊಡೆದಿದ್ದು, ಅವರ ಕಾಲು ಮುರಿತಗೊಂಡಿರುವ ಘಟನೆ ನಿನ್ನೆ ಸಂಜೆ ಪುಲಿಯೇರಿ ಗ್ರಾಮದಲ್ಲಿ ನಡೆದಿದೆ.
ಅಲ್ಲಿನ ನಿವಾಸಿ ಸುರೇಶ್ ಎಂಬವರು ಈ ದುರಂತದಲ್ಲಿ ಗಾಯ ಗೊಂಡವರಾಗಿದ್ದು, ಅಮ್ಮತ್ತಿಯ ಅಮೇರಿಕನ್
(ಮೊದಲ ಪುಟದಿಂದ) ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಈ ವಿಚಾರವರಿತು ಬೆಂಗಳೂರಿನಲ್ಲಿರುವ ಶಾಸಕ ಎ.ಎಸ್. ಪೊನ್ನಣ್ಣ ಅವರ ಸೂಚನೆಯಂತೆ ಕೆಪಿಸಿಸಿ ವಕ್ತಾರ ಸಂಕೇತ್ ಪೂವಯ್ಯ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಹಾಗೂ ಕುಟುಂಬದವರಿಗೆ ಸಾಂತ್ವನ ಹೇಳಿ ವೈದ್ಯರೊಂದಿಗೆ ಚರ್ಚಿಸಿದ್ದಾರೆ.
ಗಾಯಾಳು ಸುರೇಶ್ ಅವರಿಗೆ ಶಸ್ತçಚಿಕಿತ್ಸೆ ನಡೆಸಬೇಕಿದ್ದು, ಸೋಮವಾರ ಇದನ್ನು ನಡೆಸಲಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಘಟನೆ ಬಗ್ಗೆ ಅರಣ್ಯಾಧಿಕಾರಿಗಳೊಂದಿಗೆ ಚರ್ಚಿಸಲಾಗಿದ್ದು, ಸೂಕ್ತ ಪರಿಹಾರ ಹಾಗೂ ಕಾಡಾನೆ ಕಾಡಿಗಟ್ಟುವ ಕಾರ್ಯಾಚರಣೆ ನಡೆಸಲು ಶಾಸಕರು ಸೂಚಿಸಿದ್ದಾರೆ.
ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ಸ್ಥಳೀಯರಾದ ಎಸ್.ಹೆಚ್. ಮತೀನ್, ಜಾನ್‌ಸನ್, ಎನ್.ಎ. ನೌಶಾದ್, ಎ.ಡಿ. ದಿನೇಶ್, ದಿವಾಕರ್ ಮತ್ತಿತರರು ಸಹಕರಿಸಿದ್ದಾರೆ. ಸ್ಥಳಕ್ಕೆ ಆರ್‌ಎಫ್‌ಓ ದೇವಯ್ಯ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿ ಮಹಜರು ನಡೆಸಿದ್ದಾರೆ.