ಮಡಿಕೇರಿ, ಜೂ. ೧೬: ಪ್ರಸಕ್ತ ಸಾಲಿನ ಭಾರತ ಸರ್ಕಾರದ ಪ್ರಧಾನಮಂತ್ರಿ ಉದ್ಯೋಗ ಸೃಜನ (ಪಿಎಂಇಜಿಪಿ) ಕಾರ್ಯಕ್ರಮ ದಡಿಯಲ್ಲಿ ಉತ್ಪಾದನಾ/ ಸೇವಾ ಘಟಕಗಳಿಗೆ ಸಾಲ ಸೌಲಭ್ಯ ಪಡೆಯಲು ಎಲ್ಲಾ ವರ್ಗದ ಹೊಸದಾಗಿ ಸ್ವಂತ ಉದ್ಯೋಗ ಆರಂಭಿಸುವ ನಿರುದ್ಯೋಗಿ ಯುವಕ, ಯುವತಿಯರಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಸ್ವಉದ್ಯೋಗ ಮಾಡಿಕೊಳ್ಳುವವರಿಗೆ ಪಟ್ಟಣ, ನಗರ, ಗ್ರಾಮೀಣ ಪ್ರದೇಶದಲ್ಲಿ ಹೊಸ ಉದ್ದಿಮೆ ಘಟಕಗಳನ್ನು ಸ್ಥಾಪಿಸುವವರಿಗೆ ಬ್ಯಾಂಕಿನಿAದ ಗರಿಷ್ಠ ೫೦ ಲಕ್ಷಗಳವರೆಗೆ ಸಾಲವನ್ನು ನೀಡಿ ಗರಿಷ್ಠ ಶೇ.೨೫ ರಿಂದ ೩೫ ರವರೆಗೆ ಸಹಾಯಧನ ನೀಡಲಾಗುವುದು.
ಕಾಫಿ ಗ್ರೆöÊಂಡಿAಗ್, ಫ್ಲೋರ್ ಮಿಲ್, ಸಿಮೆಂಟ್ ಬ್ಲಾಕ್ಸ್, ವರ್ಮಿ ಕಾಂಪೋಸ್ಟ್, ಜೇನು ಕೃಷಿ, ಎಣ್ಣೆ ತಯಾರಿಕೆ, ರಬ್ಬರ್, ಪಶು ಆಹಾರ, ಜ್ಯೂಸ್ ತಯಾರಿಕೆ, ರೆಡಿಮೇಡ್ ಗಾರ್ಮೆಂಟ್ಸ್, ಫ್ಲೆಕ್ಸ್ ಐಂಡ್ ಪ್ರಿಂಟಿAಗ್ ಪ್ರೆಸ್, ಬ್ಯೂಟಿ ಪಾರ್ಲರ್, ಸಲೂನ್, ಎಕ್ಸ್-ರೇ ಸ್ಕಾö್ಯನಿಂಗ್, ಮೆಡಿಕಲ್, ಲ್ಯಾಬ್, ಡೆಂಟಲ್ ಲ್ಯಾಬ್, ಅಡಿಕೆ ಮತ್ತು ಪೇಪರ್ ಪ್ಲೇಟ್ಸ್, ಶಾಮಿಯಾನ, ಸೆಂಟ್ರಿAಗ್ ವರ್ಕ್ಸ್, ಇಂಜಿನಿಯರಿAಗ್ ವರ್ಕ್ಸ್, ವೆಲ್ಡಿಂಗ್, ವಾಟರ್ ಸರ್ವೀಸ್ ಸ್ಟೇಷನ್, ಹಸು, ಕುರಿ, ಮೇಕೆ, ಎಮ್ಮೆ, ಕೋಳಿ, ಬಾತು ಕೋಳಿ, ಟರ್ಕಿ ಕೋಳಿ, ಮೀನು ಸಾಕಾಣಿಕೆ ಹಾಗೂ ಮಾಂಸಹಾರಿ ಹೊಟೇಲ್ ಮತ್ತು ಇತರೆ ೬೩೦ಕ್ಕೂ ಅಧಿಕ ಉದ್ದಿಮೆಗಳಿಗೆ ಸಾಲ ಸಹಾಯಧನ ನೀಡಲಾಗುವುದು.
ಈ ಸೌಲಭ್ಯವನ್ನು ಪಡೆಯಲು ಆನ್ಲೈನ್ ಮೂಲಕ ತಿತಿತಿ.ಞvie. oಡಿg.iಟಿ (ಪಿಎಂಇಜಿಪಿ ಆನ್ಲೈನ್ ಅಪ್ಲಿಕೇಶನ್)ನಲ್ಲಿ ಅರ್ಜಿ ಸಲ್ಲಿಸುವಾಗ (ಏಜೆನ್ಸಿ ಕೋಡ್) ಕೆವಿಐಬಿ ಎಂದು ಅರ್ಜಿಯಲ್ಲಿ ಅಳವಡಿಸಿ ಅದರ ಪ್ರತಿಯೊಂದಿಗೆ ೨ ಸೆಟ್ನಲ್ಲಿ ದಾಖಲಾತಿಗಳೊಂದಿಗೆ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗೆ ಹೆಚ್.ಆರ್. ರಾಮಕೃಷ್ಣ, ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಕಟ್ಟಡ, ಕೊಹಿನೂರು ರಸ್ತೆ ಮಡಿಕೇರಿ, ಕೊಡಗು ಜಿಲ್ಲೆ ಇವರ ಕಚೇರಿ ಹಾಗೂ ದೂ. ೦೮೨೭೨-೨೨೫೯೪೬, ೯೪೮೦೮೨೫೬೩೦ನ್ನು ಸಂಪರ್ಕಿಸ ಬಹುದು ಎಂದು ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ ಹೆಚ್.ಆರ್. ರಾಮಕೃಷ್ಣ ತಿಳಿಸಿದ್ದಾರೆ.