ಮಡಿಕೇರಿ, ಜೂ. ೧೬: ವೀರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕಿನಲ್ಲಿ ಸೇವೆ ಸಲ್ಲಿಸಿದ್ದ ಇದೀಗ ನಿವೃತ್ತರಾದ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೀಳಗಿ ಅವರಿಗೆ ಕಿಗ್ಗಟ್ಟ್ನಾಡ್ ಹಿರಿಯ ನಾಗರಿಕರ ವೇದಿಕೆಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.
ಶ್ರೀಶೈಲ ಬೀಳಗಿ ಅವರಿಗೆ ಅವರ ನಿವೃತ್ತಿ ಜೀವನ ಆರೋಗ್ಯಕರವಾಗಿಯೂ ಮತ್ತು ಸುಖಕರವಾಗಿರಲೆಂದು ಇಗ್ಗುತ್ತಪ್ಪ ಮತ್ತು ಕಾವೇರಮ್ಮ ದೇವತೆಗಳಲ್ಲಿ ಹಿರಿಯರ ಸಮ್ಮುಖದಲ್ಲಿ ಶುಭ ಕೋರಲಾಯಿತು.
ವೇದಿಕೆಯ ನಿರ್ದೇಶಕರಾದ ಮಾಣಿಪಂಡ ಪಾರ್ವತಿ ಜೋಯಪ್ಪ, ಕೇಚೆಟೀರ ಕಾಮುಣಿ ಪೂಣಚ್ಚ, ಸ್ಥಾಪಕ ಅಧ್ಯಕ್ಷ ಕಾಟಿಮಾಡ ಜಿಮ್ಮಿ ಅಣ್ಣಯ್ಯ, ನಿರ್ದೇಶಕ ಕಾಟಿಮಾಡ ಡಿಕ್ಕಿ ಅಣ್ಣಯ್ಯ, ಕೊಳ್ಳಿಮಾಡ ಎನ್. ಕಾರ್ಯಪ್ಪ, ಕಾರ್ಯದರ್ಶಿ ಚೇಂದಿರ ಎಂ. ಬೋಪಣ್ಣ ಈ ಸಂದರ್ಭ ಹಾಜರಿದ್ದರು.