ಮಡಿಕೇರಿ, ಜೂ. ೧೫: ಸದಾ ಕರ್ತವ್ಯದ ಒತ್ತಡದಲ್ಲಿರುವ ಪೊಲೀಸರು ಬಿಡುವಿನ ಸಮ ಯದಲ್ಲಿ ಒಂದಿಷ್ಟು ವ್ಯಾಯಾಮ, ವಾಕಿಂಗ್, ಯೋಗ ಸೇರಿದಂತೆ ಆರೋಗ್ಯ ಕಾಳಜಿಗಾಗಿ ಹಲವು ರೀತಿಯ ಅಭ್ಯಾಸಗಳನ್ನು ಮಾಡುವುದು ಸಹಜ. ಆದರೆ ಇದ್ದಕ್ಕಿದ್ದಂತೆ ಬೆಳ್ಳಂಬೆಳಿಗ್ಗೆ ಸಾರ್ವಜನಿಕರೊಂದಿಗೆ ಪೊಲೀಸರು ಸೇರಿ ಬೆಟ್ಟ ಹತ್ತಿ ಅರಣ್ಯದ ಪ್ರಕೃತಿ ಸೌಂದರ್ಯವನ್ನು ಸವಿಯುವ ಮೂಲಕ ವಿಶಿಷ್ಟವಾಗಿ ಚಾರಣ ಆಯೋಜಿಸಿ ಸಿದ್ದಾಪುರ ಪೊಲೀ ಸರು ಗಮನ ಸೆಳೆದಿದ್ದಾರೆ.

ಸಿದ್ದಾಪುರ ಠಾಣಾಧಿಕಾರಿ ಮೋಹನ್‌ರಾಜ್ ನೇತೃತ್ವದಲ್ಲಿ ಠಾಣೆಯ ೨೦ಕ್ಕೂ ಹೆಚ್ಚು ಸಿಬ್ಬಂದಿಗಳು ಹಾಗೂ ಸಿದ್ದಾಪುರ, ಮಾಲ್ದಾರೆ ಸುತ್ತಮುತ್ತಲ ವಿವಿಧ ಸಂಘ-ಸAಸ್ಥೆಗಳ ಪ್ರಮುಖರು ಹಾಗೂ ಸ್ಥಳೀಯರನ್ನು ಒಗ್ಗೂಡಿಸಿ ವೀರಾಜಪೇಟೆ ತಾಲೂಕಿನ ಮಾಲ್ದಾರೆ ಸಮೀಪದ ಗದ್ದಿಗೆ ಬೆಟ್ಟಕ್ಕೆ ಚಾರಣ ತೆರಳಿ ಬೆಟ್ಟದಲ್ಲಿ ಪ್ರಕೃತಿ ಸೌಂದರ್ಯದೊAದಿಗೆ ಕೆಲಕಾಲ ದಿನ ಕಳೆದರು.

ಸುತ್ತಮುತ್ತಲ ಗ್ರಾಮಗಳಿಂದ ಬಂದ ೪೦ಕ್ಕೂ ಹೆಚ್ಚು ಮಂದಿ ಬೆಟ್ಟ ಹತ್ತಿ ಗದ್ದಿಗೆ ಬೆಟ್ಟ ಪರಿಸರವನ್ನು ವೀಕ್ಷಣೆ ಮಾಡಿದ್ದಾರೆ. ಬೆಟ್ಟದ ತಪ್ಪಲಿನಲ್ಲಿ ಗ್ರಾಮಸ್ಥರೊಂದಿಗೆ ಪೊಲೀಸ್ ಇಲಾಖೆಯ ನಿರ್ದೇಶನಗಳನ್ನು ಪಾಲಿಸಲು ಹಾಗೂ ಅಕ್ರಮ ಚಟುವಟಿಕೆ ತಡೆಗಟ್ಟಲು ಗ್ರಾಮಸ್ಥರು ಇಲಾಖೆಯೊಂದಿಗೆ ಸಹಕರಿಸಬೇಕೆಂದು ಪೊಲೀಸರು ಮನವಿ ಮಾಡಿದರು.

ಸಿದ್ದಾಪುರ ಠಾಣಾಧಿಕಾರಿ ಮೋಹನ್ ರಾಜ್ ಮಾತನಾಡಿ, ಕೊಡಗು ಜಿಲ್ಲಾ ವರಿಷ್ಠಾಧಿಕಾರಿಗಳಾದ ರಾಮರಾಜನ್ ಅವರ ನಿರ್ದೇಶನದಂತೆ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಮಸ್ಥರ ಸಹಕಾರ ಅತ್ಯಗತ್ಯವಾಗಿದ್ದು, ಶಾಂತಿ ಸೌಹಾರ್ದಯುತ ಸಮಾಜ ನಿರ್ಮಾಣ ಮಾಡಲು ಇಲಾಖೆಯೊಂದಿಗೆ ಸಹಕರಿಸಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ ಎಂದರು.

ಈ ಸಂದರ್ಭ ಮಾಲ್ದಾರೆ ಜನಪರ ಸಂಘದ ಅಧ್ಯಕ್ಷ ಭಾವ ಮಾಲ್ದಾರೆ, ಕಾರ್ಯದರ್ಶಿ ಆಂತೋಣಿ, ವಿನೀಲ್, ಅಭಿ, ಪ್ರವೀಣ್, ಸಾಗರ್ ಸಂಘದ ಅಧ್ಯಕ್ಷ ರದೀಶ್, ಅಂಬೇಡ್ಕರ್ ಸೇನೆ ಸಂಘದ ಅಧ್ಯಕ್ಷ ಸತೀಶ್, ಅಗಸ್ಥಿನ್, ಗ್ರಾಮಸ್ಥರಾದ ರಾಜೀಶ್, ತಿಮ್ಮ, ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಲಕ್ಷ್ಮಿಕಾಂತ್, ಮಲ್ಲಪ್ಪ, ವಸಂತ, ಮೋಹನ್, ಮಹಿಳಾ ಸಿಬ್ಬಂದಿಗಳಾದ ತೇಜಾವತಿ, ರಾಧಾ, ಚಾಂದಿನಿ, ರಾಜೇಶ್ವರಿ, ಅರಣ್ಯ ಇಲಾಖೆಯ ಚೇತನ್, ಮಣಿಕಂಠ, ಶಶಿ ಸೇರಿದಂತೆ ಮತ್ತಿತರರು ಹಾಜರಿದ್ದರು. - ಮುಬಾರಕ್