ಮಡಿಕೇರಿ, ಜೂ. ೧೬ : ಕರ್ನಾಟಕ ರಾಜ್ಯದಾದ್ಯಂತ ಎಲ್ಲ ಪೊಲೀಸ್ ಠಾಣೆಗಳಲ್ಲಿ, ಠಾಣೆಗಳ ಪ್ರಮುಖ ಸ್ಥಳಗಳಲ್ಲಿ ಆಯಾ ಜಿಲ್ಲೆಗಳ ಎಸ್.ಪಿ, ತಾಲೂಕಿನ ಡಿ.ವೈ.ಎಸ್.ಪಿ ಹಾಗೂ ಜಿಲ್ಲಾ ಹೆಚ್ಚುವರಿ ಎಸ್.ಪಿ ಗಳ ಫೋನ್ ಸಂಖ್ಯೆಗಳನ್ನು ಫಲಕಗಳಲ್ಲಿ ಅಳವಡಿಸುವಂತೆ ಕರ್ನಾಟಕ ರಾಜ್ಯದ ಡಿ.ಜಿ ಹಾಗೂ ಐ.ಜಿ.ಪಿ ಡಾ.ಅಲೋಕ್ ಮೋಹನ್ ಅವರು ಆದೇಶಿಸಿದ್ದಾರೆ. ಜಿಲ್ಲೆಗಳಲ್ಲದ ಕಮಿಶನರೇಟ್ ವಿಭಾಗಗಳಲ್ಲಿ ಸಂಬAಧಿಸಿದ ಸಿ.ಒ.ಪಿ, ಡಿ.ಸಿ.ಪಿ ಹಾಗೂ ಎ.ಸಿ.ಪಿ ಗಳ ಫೋನ್ ಸಂಖ್ಯೆಗಳನ್ನೂ ಫಲಕದಲ್ಲಿ ಹಾಕುವಂತೆ ಆದೇಶಿಸಿದ್ದಾರೆ.
ಈ ಸೂಚನ ಫಲಕಗಳಲ್ಲಿ 'ನಿಮ್ಮ ದೂರು ಸಂಬAಧ ಯಾವುದೇ ಕ್ರಮ ಆಗದಿದ್ದರೆ ' ಎಂಬ ಸಂದೇಶವಿರಲಿದ್ದು ಇದರ ಮುಂದೆ ಸಂಬAಧಿಸಿದ ಪೊಲೀಸ್ ಅಧಿಕಾರಿಗಳ ಫೋನ್ ಸಂಖ್ಯೆ ನಮೂದಿಸಬೇಕಿದೆ ಎಂದು ಅಲೋಕ್ ಅವರು ಆದೇಶ ಹೊರಡಿಸಿದ್ದಾರೆ. ತಾ.೨೦ ರೊಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಬೇಕಿದ್ದು, ಪ್ರಗತಿಯ ವರದಿಯನ್ನು ಡಿ.ಜಿ ಅವರಿಗೆ ಎಲ್ಲ ಠಾಣೆಗಳು ಕಳುಹಿಸಿಕೊಡುವಂತೆ ಸೂಚಿಸಲಾಗಿದೆ.