ಕುಶಾಲನಗರ, ಜೂ. ೧೫: ಕುಶಾಲನಗರ ಮಡಿಕೇರಿ ರಸ್ತೆಯ ಬೈಚನಹಳ್ಳಿ ಬಳಿ ಬುಲ್ಲೆಟ್ ಮತ್ತು ಸ್ಕೂಟಿ ನಡುವೆ ಅಪಘಾತ ಸಂಭವಿಸಿದ್ದು ಇಬ್ಬರು ಕಾಲೇಜು ವಿದ್ಯಾರ್ಥಿನಿಯರು ಸೇರಿದಂತೆ ಮೂವರಿಗೆ ತೀವ್ರ ಗಾಯಗಳಾಗಿ ಮೈಸೂರು ಆಸ್ಪತ್ರೆಗೆ ಸಾಗಿಸಲಾಗಿದೆ.
ಕುಶಾಲನಗರ ಕಡೆಯಿಂದ ನಿಸರ್ಗ ಮತ್ತು ಭಾವನ ಎಂಬ ಇಬ್ಬರು ಯುವತಿಯರು ಸ್ಕೂಟಿಯಲ್ಲಿ (ಕೆ.ಎ. ೧೨. ಆರ್. ೫೪೮೮) ತೆರಳುತ್ತಿದ್ದ ಸಂದರ್ಭ ಬೈಚನಹಳ್ಳಿ ಬಳಿ ಮಾದಾಪಟ್ಟಣ ಕಡೆಯಿಂದ ಬರುತ್ತಿದ್ದ ವರುಣ್ ಎಂಬಾತನ ಬುಲೆಟ್ (ಕೆ.ಎ. ೪೫.ಬಿ.೬೪೯೩) ಡಿಕ್ಕಿಯಾಗಿದ್ದು ಇಬ್ಬರು ಯುವತಿಯರು ರಸ್ತೆಗೆ ಬಿದ್ದ ಪರಿಣಾಮ ತಲೆಗೆ ತೀವ್ರ ಪೆಟ್ಟಾಗಿದೆ. ಉಂಟಾಗಿದೆ. ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಸಾಗಿಸಲಾಗಿದೆ ಎಂದು ಕುಶಾಲನಗರ ಸಂಚಾರಿ ಪೊಲೀಸರು ತಿಳಿಸಿದ್ದಾರೆ. ಬುಲ್ಲೆಟ್ ಸವಾರ ವರುಣ್ ಎಂಬಾತನಿಗೂ ಗಾಯಗಳಾಗಿವೆ. ಕುಶಾಲನಗರ ಸಂಚಾರಿ ವಿಭಾಗದ ಪೊಲೀಸರು ಕ್ರಮ ಕೈಗೊಂಡಿದ್ದಾರೆ